ನಟ ಪ್ರಕಾಶ್ ರೈಗೆ ಸಿಗದ ಕೈ ಬೆಂಬಲ!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಿಸಿಕೊಂಡಿದ್ದ ‘ಜಸ್ಟ್ ಆಸ್ಕಿಂಗ್’ ಖ್ಯಾತಿಯ ನಟ ಪ್ರಕಾಶ್ ರೈ, ಈಗ ತಮ್ಮನ್ನು ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರ ದುಂಬಾಲು ಬಿದ್ದಿದ್ದಾರೆ. ಇದು ಕೈ ಪಕ್ಷದ ನಾಯಕರಿಗೆ ಇರಿಸು-ಮುರಿಸು ತಂದಿದ್ದು, ನಯವಾಗಿ ತಿರಸ್ಕರಿಸಿ ಕಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಂಗಳವಾರ ಈ ವಿಚಾರವಾಗಿ ಮಾತನಾಡಿ, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬೆಂಬಲಿಸುವಂತೆ ಪ್ರಕಾಶ್ ರೈ ನನ್ನ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದು , ಬೕೆ ಕಿದ್ದರೆ ಪಕ್ಷ ಸೕೆ ರಿ. ನಮ್ಮದು ರಾಷ್ಟ್ರೀಯ ಪಕ್ಷ, ಬೆಂಬಲ ಕೊಡಲು ಸಾಧ್ಯವಿಲ್ಲ. ಇಂಥ ಕ್ಷೇತ್ರ ಬೇಕೆಂದರೂ ಆಗಲ್ಲ ಎಂದು ಹೇಳಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ