ಡಾ.ಜಾಧವ್ ರಾಜೀನಾಮೆ ಅಂಗೀಕಾರ

ಬೆಂಗಳೂರು: ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ರಮೇಶ್​ಕುಮಾರ್ ಸೋಮವಾರ ಅಂಗೀಕರಿಸಿದ್ದಾರೆ. ಈ ಮೂಲಕ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಾಧವ್ ನಿರಾಳರಾಗಿದ್ದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರಿಗೆ ಈ ಬೆಳವಣಿಗೆ ನಿರಾಸೆ ತಂದಿದೆ.

ಶಾಸಕಾಂಗ ಪಕ್ಷದ ಸಭೆಗೆ ಬಾರದೆ ಇರುವುದೂ ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುತ್ತದೆ, ಸಿದ್ದರಾಮಯ್ಯ ದೂರಿಗೆ ಮಹತ್ವ ಇದೆ ಎಂದೇ ಅವರ ಬೆಂಬಲಿಗರು ಭಾವಿಸಿದ್ದರು. ಆದರೆ, ನಿರೀಕ್ಷೆ ಪಲ್ಟಿಯಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯಂತೆ ಕ್ರಮಕೈಗೊಳ್ಳಬೇಕೆಂದು ಪಕ್ಷದ ಶಾಸಕನ ವಿರುದ್ಧ ಸಿದ್ದರಾಮಯ್ಯ ಸ್ಪೀಕರ್​ಗೆ ದೂರು ನೀಡಿದ್ದರು. ಬಳಿಕ ಜಾಧವ್ ರಾಜೀನಾಮೆ ನೀಡಿದ್ದರು. ಈ ಬಗ್ಗೆ ಸೋಮವಾರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಾನು ಸ್ಪೀಕರ್​ಗೆ ಕೊಟ್ಟ ದೂರು ಬಗೆಹರಿಯುವರೆಗೆ ರಾಜೀನಾಮೆ ಅಂಗೀಕರಿಸುವಂತಿಲ್ಲ ಎಂದಿದ್ದರು. ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲೇ ಸ್ಪೀಕರ್ ಆದೇಶ ಹೊರಬಿದ್ದಿದೆ.

ಮೂರು ತಿಂಗಳಿಂದ ದೊಡ್ಡ ಪ್ರಶ್ನೆ ಇತ್ತು. ಇದೀಗ ಸ್ಪೀಕರ್ ರಾಜೀನಾಮೆ ಅಂಗೀಕರಿಸುವ ಮೂಲಕ ಟೆನ್ಶನ್ ದೂರ ಮಾಡಿದ್ದು, ಅವರಿಗೆ ಕೃತಜ್ಞತೆ ಹೇಳುವೆ. ಬುಧವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ.

| ಡಾ.ಉಮೇಶ್ ಜಾಧವ್

ಕೈ ಮೇಲೆ ಪರಿಣಾಮವೇನು?

ಬಿಜೆಪಿ ಸಂಪರ್ಕದಲ್ಲಿರುವ ಕೆಲವು ಕೈ ಶಾಸಕರಿಗೆ ಈ ಬೆಳವಣಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ, ಅವರಲ್ಲಿದ್ದ ಗೊಂದಲಕ್ಕೂ ಉತ್ತರ ಸಿಕ್ಕಂತಾಗಿದೆ. ಒಂದು ವೇಳೆ, ತಾವು ರಾಜೀನಾಮೆ ಸಲ್ಲಿಸಿದರೂ ಸ್ಪೀಕರ್ ಅಂಗೀಕರಿಸದೆ ಇದ್ದರೆ ಅತಂತ್ರರಾಗಿಬಿಡುತ್ತೇವೆ ಎಂಬ ಅಳಕಿತ್ತು. ಜಾಧವ್ ರಾಜೀನಾಮೆಯಿಂದ ಅವರ ದಾರಿ ಸುಗಮವಾಗಿದೆ.

ಕಾರಣಗಳೇನು..?

# ಉಮೇಶ್ ಜಾಧವ್ ಯಾರ ಒತ್ತಡಕ್ಕೂ ಮಣಿಯದೆ ರಾಜೀನಾಮೆ ನೀಡಿದ್ದು, ಆಮಿಷಗಳಿಗೆ ಬಲಿಯಾಗಿದ್ದಾರೆ ಎಂದನಿಸುತ್ತಿಲ್ಲ.

# ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದು, ಕಾರಣಗಳನ್ನು ಪೂರ್ಣ ಪ್ರಮಾಣದಲ್ಲಿ ಸಲ್ಲಿಸಿದ್ದಾರೆ. ್ಝರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿಗಳ ನಿಯಮ 202 ಪ್ರಕಾರ ನಿಗದಿ ನಮೂನೆಯಲ್ಲೇ ರಾಜೀನಾಮೆ ಸಲ್ಲಿಕೆಯಾಗಿದೆ. ್ಝೕರ್ಪ ಯಾವಾಗಲೂ ಸಾಕ್ಷ್ಯಾಧಾರಗಳನ್ನು ಅವಲಂಬಿಸಿರುತ್ತದೆ. ನೈತಿಕತೆಗೆ ಮತ್ತು ನೈತಿಕ ನಿಲುವುಗಳಿಗೆ ಕಾನೂನಾತ್ಮಕ ರಕ್ಷಣೆ ಸಿಗುವುದು ಬಹಳ ಕಷ್ಟದ ಕೆಲಸ.