ಕಾಂಗ್ರೆಸ್​ ಶಾಸಕಿ ಕಲಾವತಿ ಕರೊನಾಗೆ ಬಲಿ

ಭೋಪಾಲ್: ಮಹಾಮಾರಿ ಕರೊನಾ ತಂದೊಡ್ಡುತ್ತಿರುವ ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶನಿವಾರ ಬೆಳಗಿನ ಜಾವ ಕಾಂಗ್ರೆಸ್​ ಶಾಸಕಿಯೊಬ್ಬರು ಕರೊನಾಗೆ ಬಲಿಯಾಗಿದ್ದಾರೆ. ಕಲಾವತಿ ಭುರಿಯಾ(49) ಮೃತರು. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆ ಜೋಬಟ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದ ಕಲಾವತಿಗೆ 12 ದಿನಗಳ ಹಿಂದೆ ಕರೊನಾ ಸೋಂಕು ತಗುಲಿತ್ತು. ಇಂದೋರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಕಲಾವತಿ ಅವರು ಝಾಬುವಾ ಕ್ಷೇತ್ರದ ಶಾಸಕ ಕಾಂತಿಲಾಲ್ ಅವರ ಸೊಸೆ. ಕಲಾವತಿಯ … Continue reading ಕಾಂಗ್ರೆಸ್​ ಶಾಸಕಿ ಕಲಾವತಿ ಕರೊನಾಗೆ ಬಲಿ