ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಹೊಗಳಿದ ಶೃಂಗೇರಿ ಕಾಂಗ್ರೆಸ್‌ ಶಾಸಕ

ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಮೃದು ಸ್ವಭಾವದವರು. ಹಾಗಾಗಿ ಅಭಿನಂದನ್​ರನ್ನು ವಾಪಸ್ ಕಳಿಸಿದ್ದಾರೆ ಎಂದು ಕಾಂಗ್ರೆಸ್‌ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಪಾಕ್‌ ಪ್ರಧಾನಿಯನ್ನು ಹೊಗಳಿ ವಿವಾದ ಸೃಷ್ಟಿಸಿದ್ದಾರೆ.

ಮೋದಿಯನ್ನು ಟೀಕಿಸುವ ಬರದಲ್ಲಿ ಎಡವಟ್ಟು ಮಾಡಿದ್ದು, ಪಾಕ್‌ ಪ್ರಧಾನಿಯನ್ನು ಹೊಗಳಿರುವ ವಿವಾದಾತ್ಮಕ ಹೇಳಿಕೆಯ ಆಡಿಯೋ ವೈರಲ್‌ ಆಗಿದೆ.

ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಮಾತನಾಡಿದ್ದ ಅವರು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೃದು ಸ್ವಭಾದವರು. ಹಾಗಾಗಿಯೇ ಅಭಿನಂದನನ್ನು ವಾಪಸ್ ಕಳಿಸಿದ್ದಾರೆ. ಇಮ್ರಾನ್ ಖಾನ್ ಸಜ್ಜನ ಹಾಗೂ ಸೌಮ್ಯ ವ್ಯಕ್ತಿತ್ವದವರು. ಅಭಿನಂದನನ್ನು ಗೌರವದಿಂದ ಕಳುಹಿಸಿರುವುದು ಅವರ ಸೌಜನ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದರು.

ಶಾಸಕರ ಹೇಳಿಕೆಯು ವೈರಲ್‌ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. (ದಿಗ್ವಿಜಯ ನ್ಯೂಸ್)

2 Replies to “ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಹೊಗಳಿದ ಶೃಂಗೇರಿ ಕಾಂಗ್ರೆಸ್‌ ಶಾಸಕ”

  1. Illiterate MLA know nothing about international politics. Shame congress is party of pak supporter

  2. Tell him go Pakistan if Imran kan is so good person. why he is spoiling our soil. These type of waste bodies are not required.

Comments are closed.