ಪಂಚರಾಜ್ಯ ಜಟಾಪಟಿ: ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌, ಟಿಆರ್‌ಎಸ್‌, ಎಂಎನ್‌ಎಫ್‌ ಮುನ್ನಡೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಪೈಪೋಟಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮತಎಣಿಕೆ ಕಾರ್ಯ ಮಂಗಳವಾರ ಆರಂಭವಾಗಿದ್ದು, ಪಂಚರಾಜ್ಯಗಳಲ್ಲೂ ಬಿಜೆಪಿಗೆ ಹಿನ್ನಡೆ ಎದುರಾಗಿದ್ದರೆ, ಕಾಂಗ್ರೆಸ್‌ಗೆ ಮೂರು ರಾಜ್ಯಗಳಲ್ಲಿ ಮುನ್ನಡೆಯಾಗಿದೆ.

ಇನ್ನು ತೆಲಂಗಾಣದಲ್ಲಿ ನಿರೀಕ್ಷೆಯಂತೆ ಈಗಾಗಲೇ ಟಿಆರ್‌ಎಸ್‌ ಪಕ್ಷ ಮ್ಯಾಜಿಕ್‌ ನಂಬರ್‌ ತಲುಪಿದ್ದು, ಮಿಜೋರಾಂನಲ್ಲಿ ಎಂಎನ್‌ಎಫ್‌ ಅತ್ಯಧಿಕ ಸ್ಥಾನ ಗಳಿಸಿದೆ.
ಕೆ. ಚಂದ್ರಶೇಖರ್‌ ರಾವ್‌ ಅವರ ಟಿಆರ್‌ಎಸ್‌ ಪಕ್ಷವು ತೆಲಂಗಾಣದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮಿಜೋರಾಂ ನಲ್ಲಿ ಎಂಎನ್‌ಎಫ್‌ ಮುನ್ನಡೆ ಕಾಯ್ದುಕೊಂಡಿದ್ದರೆ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಳ್ಳುವುದರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ತೆಲಂಗಾಣ ಹಾಗೂ ಮಿಜೋರಾಂನಲ್ಲಿ 8500 ಅಭ್ಯರ್ಥಿಗಳ ರಾಜಕೀಯ ಭವಿಷ್ಯವು 1.74 ಲಕ್ಷ ಇವಿಎಂನಲ್ಲಿ ಭದ್ರವಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಿದೆ.

ಮಧ್ಯಪ್ರದೇಶ

ಕಾಂಗ್ರೆಸ್‌:  98,  +52

ಬಿಜೆಪಿ: 82, – 55

ಬಿಎಸ್‌ಪಿ:  05,  +2

ಇತರೆ:  4, +1

ರಾಜಸ್ಥಾನ

ಕಾಂಗ್ರೆಸ್‌:  98, +78

ಬಿಜೆಪಿ:  66,  -82

ಬಿಎಸ್‌ಪಿ:  03

ಇತರೆ: 15, +3

ತೆಲಂಗಾಣ

ಟಿಆರ್‌ಎಸ್‌: 80, +17

ಕಾಂಗ್ರೆಸ್‌ : 27,  -10

ಬಿಜೆಪಿ: 5

ಇತರೆ: 6, -7

ಛತ್ತೀಸ್‌ಗಢ

ಕಾಂಗ್ರೆಸ್‌: 48, +13

ಬಿಜೆಪಿ: 27, -18

ಬಿಎಸ್‌ಪಿ: 05, +4

ಇತರೆ: 1, +1

ಮಿಜೋರಾಂ

ಎಂಎನ್‌ಎಫ್‌: 22, +18

ಕಾಂಗ್ರೆಸ್‌: 8, -22

ಬಿಜೆಪಿ: 1 +1

ಇತರೆ:  4 +3