ಪ್ರಧಾನಿ ನರೇಂದ್ರ ಮೋದಿ ಆಧುನಿಕ ಔರಂಗಜೇಬ್​: ಕಾಂಗ್ರೆಸ್​ ನಾಯಕ ಸಂಜಯ್​ ನಿರುಪಮ್​

ವಾರಾಣಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊಘಲ್​ ದೊರೆ ಔರಂಗಜೇಬ್​ನ ಆಧುನಿಕ ಅವತಾರ ಎಂದು ಮಧ್ಯಪ್ರದೇಶದ ಕಾಂಗ್ರೆಸ್​ ನಾಯಕ ಸಂಜಯ್​ ನಿರುಪಮ್​ ಕಿಡಿ ಕಾರಿದ್ದಾರೆ.

ವಾರಾಣಸಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರಾಯ್​ ಪರ ಪ್ರಚಾರ ನಡೆಸಲು ಆಗಮಿಸಿದ್ದ ಸಂಜಯ್​ ನಿರುಪಮ್​ ‘ಕಾಶಿ ವಿಶ್ವನಾಥ ಕಾರಿಡಾರ್​ ಯೋಜನೆಗಾಗಿ ವಾರಾಣಸಿಯಲ್ಲಿ ನೂರಾರು ದೇವಾಲಯಗಳನ್ನು ನಾಶಗೊಳಿಸಲಾಗಿದೆ. ತೆಗೆ ಕಾಶಿ ವಿಶ್ವನಾಥನ ದರ್ಶನ ಪಡೆಯಲು 550 ರೂ. ಶುಲ್ಕ ವಿಧಿಸಲಾಗುತ್ತಿದೆ. ಮೋದಿ ದೇವಾಲಯಗಳನ್ನು ನಾಶಗೊಳಿಸುವಲ್ಲಿ ಮೊಘಲ್​ ದೊರೆ ಔರಂಗಜೇಬ್​ ಅವರನ್ನೂ ಮೀರಿಸುತ್ತಾರೆ. ಅವರು ಆಧುನಿಕ ಔರಂಗಜೇಬ್​ ಎಂದು ಸಂಜಯ್​ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರು ಒಂದೆಡೆ ಹಿಂದುಗಳ ನಂಬಿಕೆಗಳು ಹಾಗೂ ಅವರ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಮತ್ತೊಂದೆಡೆ ದೇವಾಲಯಗಳನ್ನು ನಾಶಗೊಳಿಸುತ್ತಿದ್ದಾರೆ. ಇವರ ದ್ವಂದ್ವ ನೀತಿಯನ್ನು ನಾನು ಖಂಡಿಸುತ್ತೇನೆ ಎಂದು ಸಂಜಯ್​ ತಿಳಿಸಿದ್ದಾರೆ. (ಏಜೆನ್ಸೀಸ್​)

One Reply to “ಪ್ರಧಾನಿ ನರೇಂದ್ರ ಮೋದಿ ಆಧುನಿಕ ಔರಂಗಜೇಬ್​: ಕಾಂಗ್ರೆಸ್​ ನಾಯಕ ಸಂಜಯ್​ ನಿರುಪಮ್​”

Comments are closed.