More

    ಪೌರತ್ವ ತಿದ್ದುಪಡಿ ಕಾಯ್ದೆ ಎಂದರೆ ಸಾಂವಿಧಾನಿಕ ದೃಷ್ಟಿ, ಜಾರಿ ಅಸಾಧ್ಯ ಎನ್ನುವಂತಿಲ್ಲ: ಹರಿಯಾಣ ಮಾಜಿ ಸಿಎಂ ಭೂಪಿಂದರ್​ ಸಿಂಗ್​ ಹೂಡ

    ಹರಿಯಾಣ: ಸಂಸತ್​ನಲ್ಲಿ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಇಲ್ಲ ಎನ್ನುವಂತಿಲ್ಲ ಎಂದು ಹಿರಿಯ ಕಾಂಗ್ರೆಸ್​ ಮುಖಂಡ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್​ ಸಿಂಗ್​ ಹೂಡ ಅಭಿಪ್ರಾಯಪಟ್ಟಿದ್ದಾರೆ.

    ಸಂಸತ್​ನಲ್ಲಿ ಪಾಸ್​ ಆಗಿರುವ ಮಸೂದೆಯನ್ನು ರಾಷ್ಟ್ರಪತಿ ಅವರೂ ಅನುಮೋದನೆ ನೀಡಿದ್ದಾರೆ. ಇಂತಹ ಕಾಯ್ದೆಯನ್ನು ಸಂವಿಧಾನಿಕ ದೃಷ್ಟಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಇಂತಹ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ರಾಜ್ಯಗಳು ಇಲ್ಲ ಎನ್ನುವಂತಿಲ್ಲ, ಆದರೆ ಈ ಕಾಯ್ದೆ ಬಗ್ಗೆ ಕಾನೂನಾತ್ಮಕವಾಗಿ ಪರೀಕ್ಷಿಸುವ ಅಗತ್ಯವಿದೆ ಎಂದಿದ್ದಾರೆ.

    ನಿನ್ನೆ (ಭಾನುವಾರ- ಜ.19)ರಂದು ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್​ ಹಿರಿಯ ಮುಖಂಡ ಕಪಿಲ್​ ಸಿಬಲ್​ ಕಪಿಲ್​ ಸಿಬಲ್​ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಸಾಂವಿಧಾನಿಕವಾಗಿ ರಾಜ್ಯಗಳು ಸಂಸತ್​ನಿಂದ ಹೊರಬಂದ ಕಾಯ್ದೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳುವಂತಿಲ್ಲ ಎಂದಿದ್ದರು. ಪಾರ್ಲಿಮೆಂಟ್​ನಲ್ಲಿ ಒಪ್ಪಿಗೆ ಪಡೆದ ಕಾಯ್ದೆಗಳನ್ನು ರಾಜ್ಯಗಳು ಜಾರಿ ತರಲಾಗುವುದಿಲ್ಲ ಎಂದು ಹೇಳುವಂತಿಲ್ಲ ಎಂದು ಅಭಿಪ್ರಾಯಪಟ್ಟು ಈ ಬಗ್ಗೆ ಟ್ವೀಟ್​ ಕೂಡ ಮಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts