20.4 C
Bengaluru
Sunday, January 19, 2020

ಯಡಿಯೂರಪ್ಪ ಚಾಣಕ್ಯ ತಂತ್ರಕ್ಕೆ ಕಾಂಗ್ರೆಸ್​-ಜೆಡಿಎಸ್​ ಪಕ್ಷಗಳು ಕಂಗಾಲು

Latest News

ಎಲ್ಲರ ಬಾಯಿಗೆ ಬೀಗ ಹಾಕಿದ ಅಮಿತ್ ಷಾ

ಹುಬ್ಬಳ್ಳಿ: ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ ಅಮಿತ್ ಷಾ, ಪಕ್ಷದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾತ್ರಿಯ ಭೋಜನ ಸವಿದರು.

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಹುಬ್ಬಳ್ಳಿ: ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿದ್ದ ಉಪಚುನಾವಣೆಯಲ್ಲಿ ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರತಿ ಹಂತದಲ್ಲೂ ಚಾಣಕ್ಯ ತಂತ್ರವನ್ನೇ ಮಾಡಿದ್ದರಿಂದ ಅಧಿಕ ಮತದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ವೀರೋಚಿತ ಸೋಲು ಕಂಡ ಕ್ಷೇತ್ರಗಳಾದ ಯಲ್ಲಾಪುರ ಮತ್ತು ಹಿರೇಕೆರೂರು ಶಾಸಕರನ್ನು ಸಂದರ್ಭ ನೋಡಿ ಒಲಿಸಿಕೊಳ್ಳುವಲ್ಲಿಂದಲೇ ಬಿಜೆಪಿಯ ತಂತ್ರ ಪ್ರಾರಂಭವಾಗಿತ್ತು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿಂದ ಮೇಲೆ ಭೇಟಿ ನೀಡಿ, ಧಾರಾಳವಾಗಿ ಅನುದಾನ ನೀಡಿ, ಅಭಿವೃದ್ಧಿ ಮತ್ತು ಸ್ಥಿರ ಸರ್ಕಾರದ ವಿಶ್ವಾಸ ಮೂಡಿಸಿದ್ದು, ಸಾಂರ್ದಭಿಕ ತಂತ್ರಗಾರಿಕೆಗಳನ್ನು ಮಾಡಿದ್ದು… ಇವೆಲ್ಲ ಒಟ್ಟಾಗಿ, ಈ ಕ್ಷೇತ್ರಗಳಲ್ಲಿ ಕಮಲ ಅರಳಿದೆ.

ಶಾಸಕರ ರಾಜೀನಾಮೆ ಪ್ರಕರಣದ ಮರುದಿನವೇ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ತಂತ್ರಗಾರಿಕೆ ಚುರು ಕುಗೊಳಿಸಿದ್ದರು. ಯಲ್ಲಾಪುರದಲ್ಲಿ ಕಳೆದ ಸಲ ಸೋತಿದ್ದ ವಿ.ಎಸ್. ಪಾಟೀಲರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನ, ಹಿರೇಕೆರೂರಿನಲ್ಲಿ ಸೋತಿದ್ದ ಬಣಕಾರ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಅವರನ್ನು ಹಾಗೂ ಕಟ್ಟಾ ಬೆಂಬಲಿಗರನ್ನು ಸಮಾಧಾನಪಡಿಸಿದ್ದರು.

ಬಿಜೆಪಿಯ ಕೆಲ ಸಚಿವರು ನಿರಂತರವಾಗಿ ಅನರ್ಹ ಶಾಸಕರೊಂದಿಗೆ ಸಮಾಲೋಚನೆ ಯಲ್ಲಿದ್ದು, ಯಾವ ಭಾಗದಲ್ಲಿ ತಮಗೆ ಪ್ರತಿಕೂಲವಾಗಬಹುದು ಎನ್ನುವ ಮಾಹಿತಿ ಪಡೆದು, ಅಲ್ಲೆಲ್ಲ ಮತದಾರರನ್ನು ಸೆಳೆಯಲು ಅಗತ್ಯ ಸ್ಥಳೀಯ ತಂತ್ರಗಾರಿಕೆ ಮಾಡುತ್ತ ಬಂದಿದ್ದರು. ಸ್ಥಿರ ಸರ್ಕಾರಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುತ್ತಲೇ ಇದ್ದರು. ಇದರಿಂದ, ಬಿಜೆಪಿ ಕಾರ್ಯಕರ್ತರು ಅನರ್ಹ ಶಾಸಕರನ್ನು ತಮ್ಮವರು ಎಂದು ಮನಸಾರೆ ಒಪ್ಪಿಕೊಂಡರು.

ಬಿಜೆಪಿಯ ಅಭಿವೃದ್ಧಿ ಅಜೆಂಡಾ ಎದುರು, ಪ್ರತಿಪಕ್ಷಗಳು ಮಾಡಿದ ‘ಕೋಮುವಾದಿಗಳು’ ಎಂಬ ಹಳಸಲು ಆರೋಪ ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ಹಿರೇಕೆರೂರು ಕ್ಷೇತ್ರದ ಉಸ್ತುವಾರಿಯನ್ನು ಬಿ.ವೈ. ರಾಘವೇಂದ್ರ ಅವರಿಗೆ ನೀಡಲಾಗಿತ್ತು. ಜತೆಗೆ ಸಚಿವ ಬೊಮ್ಮಾಯಿ ಇದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕಬ್ಬಿಣಕಂತಿ ಮಠದ ಶ್ರೀಗಳು ನಾಮಪತ್ರ ವಾಪಸ್ ಪಡೆಯುವಂತೆ ಪರೋಕ್ಷವಾಗಿ ಪ್ರಯತ್ನಿಸಿದ್ದು, ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಂಡಿದ್ದು ಸೇರಿ ಅನೇಕ ಸಂಗತಿಗಳು ಪರಿಣಾಮ ಬೀರಿದವು.

ಉಳಿದವರು ನಾಲ್ಕೇ ಮಂದಿ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಟ್ಟು 24 ಕ್ಷೇತ್ರಗಳಲ್ಲಿ ಬಿಜೆಪಿ ಬಲ 20ಕ್ಕೇರಿದೆ. ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ, ಪ್ರಸಾದ ಅಬ್ಬಯ್ಯ ಹಾಗೂ ಕುಸುಮಾವತಿ ಶಿವಳ್ಳಿ ಮಾತ್ರ ಕೈ ಶಾಸಕರು. ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ‘ಇದು ನನ್ನ ಕೊನೆಯ ಚುನಾವಣೆ, ನಗುನಗುತ್ತ ಕಳುಹಿಸಿಕೊಡಿ’ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತ ಪ್ರಚಾರ ಮಾಡಿದ್ದರು. ಅದರಂತೆ ಮತದಾರರು ಇದನ್ನು ಕೊನೆಯ ಚುನಾವಣೆಯನ್ನಾಗಿ ಮಾಡಿದ್ದಾರೆ. ಆದರೆ, ನಗನಗುತ್ತ ಮಾತ್ರ ಕಳುಹಿಸಿಕೊಡಲಿಲ್ಲ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...