Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಆಡಿಸುವಾತನ ಮನೆಯಂಗಳದಿ ಎಲ್ಲ ನಡೆದಿದೆ!

Tuesday, 18.09.2018, 3:04 AM       No Comments

ಬೆಂಗಳೂರು: ಕಾಂಗ್ರೆಸ್​ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಮಾಜಿ ಸಿಎಂ ಸಿದ್ದರಾಮಯ್ಯ ಸುತ್ತಲೇ ಗಿರಕಿ ಹೊಡೆಯಲಾರಂಭಿಸಿದೆ. ಪಕ್ಷದೊಳಗಿನ ಗೊಂದಲ ಪರಿಹಾರ, ಸಂಪುಟ ವಿಸ್ತರಣೆ, ಪರಿಷತ್​ಗೆ ಆಯ್ಕೆ ಸೇರಿ ಪ್ರಮುಖ ವಿಚಾರದಲ್ಲಿ ಸಿದ್ದರಾಮಯ್ಯ ತೀರ್ವನವೇ ಅಂತಿಮ ಎಂಬ ಸನ್ನಿವೇಶ ಸೃಷ್ಟಿಯಾಗಿರುವ ಕಾರಣ ಅವರ ಪ್ರತಿ ನಡೆಯೂ ಪಕ್ಷದ ಮುಖಂಡರು, ಶಾಸಕರ ಪಾಲಿಗೆ ಮುಖ್ಯವೆನಿಸಿದೆ.

ದಿನದ ಬೆಳವಣಿಗೆಯಲ್ಲಿ ಸೋಮವಾರ ಹತ್ತಾರು ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು ಸಿದ್ದರಾಮಯ್ಯ ಭೇಟಿ ಮಾಡಿ ಅಭಿಪ್ರಾಯ ಹಂಚಿಕೊಂಡರು. ಸಚಿವಾಕಾಂಕ್ಷಿ ಶಾಸಕರು ಸ್ಥಾನ ಕೊಡಿಸುವಂತೆ ದಂಬಾಲು ಬಿದ್ದ ಪ್ರಸಂಗವೂ ನಡೆಯಿತು. ಬೆಳಗ್ಗೆ 8 ಗಂಟೆಗೆಲ್ಲ ಮಾಜಿ ಸಿಎಂ ಸರ್ಕಾರಿ ವಸತಿಗೃಹ ಕಾವೇರಿ ಮುಂದೆ ದೌಡಾಯಿಸಿದ್ದ ಕೆಲವರು ಒಂದು ಸುತ್ತು ಚರ್ಚೆ ನಡೆಸಿದರು. ಭೇಟಿ ಮಾಡುವವರ ಸಂಖ್ಯೆ ಏರುತ್ತದೆಂಬ ಸುಳಿವರಿತ ಸಿದ್ದರಾಮಯ್ಯ ಸಚಿವರಾದಿಯಾಗಿ ಎಲ್ಲರಿಗೂ ಸಂಜೆ 5 ಗಂಟೆ ನಂತರ ಬಂದು ಕಾಣುವಂತೆ ಸಾಗಹಾಕಿದರು. ಶಾಸಕರಾದ ಡಾ.ಸುಧಾಕರ್, ಎಂಟಿಬಿ ನಾಗರಾಜ್, ಪಿ.ಟಿ.ಪರಮೇಶ್ವರ್ ನಾಯ್್ಕ ಭೀಮಾ ನಾಯಕ್, ಸಚಿವ ಪುಟ್ಟರಂಗಶೆಟ್ಟಿ, ಜಮೀರ್ ಅಹ್ಮದ್, ಪರಿಷತ್ ಸದಸ್ಯ ಐವಾನ್ ಡಿಸೋಜಾ, ಮಾಜಿ ಶಾಸಕ ಅಶೋಕ ಪಟ್ಟಣ್, ಮಾಜಿ ಸಚಿವ ಚಲುವರಾಯ ಸ್ವಾಮಿ, ಮಾಗಡಿ ಬಾಲಕೃಷ್ಣ, ಎಚ್.ಆಂಜನೇಯ ಭೇಟಿ ಮಾಡಿದ ಪ್ರಮುಖರು.

ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್, ನಮ್ಮ ನಾಯಕರು ವಿದೇಶದಿಂದ ವಾಪಸ್ ಆಗಿದ್ದಾರೆ. ಹೀಗಾಗಿ ಭೇಟಿ ಮಾಡಲು ಬಂದಿದ್ದೆ ಎಂದರು. ನಾನು ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಬಿಡುವ ಯಾವುದೇ ಯೋಚನೆ ಇಲ್ಲ. ನಾನು ಪೇಷೆಂಟ್ ಅಲ್ಲವೇ ಅಲ್ಲ, ಸರ್ಜನ್ ಕೂಡ ಅಲ್ಲ. ಹಾಗಾಗಿ ಆಪರೇಷನ್​ಗೆ ಒಳಗಾಗುವ ಪ್ರಶ್ನೆಯೇ ಇಲ್ಲ ಎಂದು ಡೈಲಾಗ್ ಹೊಡೆದರು.

ಸೋಮವಾರ ಸಿದ್ದರಾಮಯ್ಯ ಮನೆಯಂತೆ ಸಚಿವ ರಮೇಶ್ ಜಾರಕಿಹೊಳಿ ನಿವಾಸ ಕೂಡ ರಾಜಕೀಯ ಚಟುವಟಿಕೆಗಳ ಕೇಂದ್ರವಾಯಿತು. ಪಕ್ಷದ ಅನೇಕ ಅತೃಪ್ತ ಶಾಸಕರು ರಮೇಶ್ ಅವರನ್ನು ಕಂಡು ಅಸಮಾಧಾನ ತೋಡಿಕೊಂಡರು.

ಡಿಕೆಶಿ, ಲಕ್ಷ್ಮೀ ವಿರುದ್ಧ ರಾಹುಲ್​ಗೆ ದೂರು

‘ದುಡುಕಿ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಬೇಡ, ಇಷ್ಟು ವರ್ಷ ಕಾಂಗ್ರೆಸ್​ನಲ್ಲೇ ಇದ್ದೀರಿ, ಈ ಸಂದರ್ಭದಲ್ಲಿ ಬೇರೆ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮುಂದೆ ಎಲ್ಲವೂ ಸರಿ ಹೋಗಲಿದೆ. ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಕೆಲವೊಂದು ವ್ಯತ್ಯಾಸಗಳಾಗಿವೆ. ಇದು ನನಗೂ ಗೊತ್ತಿದೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಎಲ್ಲವನ್ನೂ ರ್ಚಚಿಸಿ ಪರಿಹರಿಸಿಕೊಳ್ಳೋಣ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ರಮೇಶ್ ಜಾರಕಿಹೊಳಿಗೆ ಬುದ್ಧಿ ಹೇಳಿದ್ದಾರೆ. ರಮೇಶ್ ಜತೆ ಒಂದೂವರೆ ತಾಸು ರ್ಚಚಿಸಿದ ಸಿದ್ಧರಾಮಯ್ಯ, ರಾಹುಲ್ ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ. ಯಾವ ಕಾರಣಕ್ಕೂ ಸರ್ಕಾರ ಬೀಳಬಾರದು ಎಂಬ ಉದ್ದೇಶ ರಾಹುಲ್​ರದ್ದು ಎಂದು ಹೇಳಿದ್ದಾರೆ. ಇಷ್ಟರ ನಡುವೆಯೂ ರಮೇಶ್ ಬೇಸರ ಹೇಳಿಕೊಳ್ಳಲು ಮುಂದುವರಿಸಿದಾಗ, ‘ನಿರ್ಧಾರ ಕೈಗೊಳ್ಳಲು ನೀವು ಸರ್ವ ಸ್ವತಂತ್ರರು. ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೀರಿ ಅಂದರೆ ನಾನೇನು ಹೇಳುವುದಿಲ್ಲ’ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು. ಅಂತಿಮವಾಗಿ ರಾಹುಲ್ ಮುಂದೆಯೇ ಸಮಸ್ಯೆ ಬಗೆಹರಿಯಲಿ ಎಂಬ ರಮೇಶ್ ಮಾತಿಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಈ ಮುನ್ನ ಜಿಲ್ಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಾವಳಿ, ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆ ಇತ್ಯಾದಿ ವಿಚಾರವನ್ನು ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದ್ದಾರೆ.

ಸತೀಶ್ ಜಾರಕಿಹೊಳಿಗೆ ದೆಹಲಿಯಿಂದ ಬುಲಾವ್

ಬೆಳಗಾವಿ: ಹೈಕಮಾಂಡ್ ಸೂಚನೆ ಮೇರೆಗೆ ಮಂಗಳವಾರ ಅಥವಾ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸುತ್ತೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ದೂರವಾಣಿ ಕರೆ ಮಾಡಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿ ಭೇಟಿಯಾಗುವುದಿಲ್ಲ. ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ವೇಣುಗೋಪಾಲ್​ರನ್ನು ಮಾತ್ರ ಭೇಟಿ ಮಾಡುತ್ತೇವೆ. ವರಿಷ್ಠರೊಂದಿಗೆ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸುವುದರ ಕುರಿತು ಚರ್ಚೆ ಮಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ರಮೇಶ್ ಜಾರಕಿಹೊಳಿ ಅವರೇ ಎರಡು ವರ್ಷಗಳ ಕಾಲ ಸಚಿವರಾಗಿ ಮುಂದುವರಿ ಯಲಿದ್ದಾರೆ. ಇದರಲ್ಲಿ ಯಾವುದೇ ಬದ ಲಾವಣೆ ಇಲ್ಲ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದರು. ಬಿಜೆಪಿ ಮುಖಂ ಡರು ನಾಲ್ಕು ತಿಂಗಳಿಂದ ಕಾಂಗ್ರೆಸ್ ಶಾಸಕರನ್ನು ಸಂರ್ಪ ಸುತ್ತಿದ್ದಾರೆ. ಯಾರು ಹಣ ಪಡೆದಿದ್ದಾರೆ ಎನ್ನುವುದು ಗಮನಕ್ಕೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರ ಕೃಪೆಯಿಂದಲೇ ರಾಜ್ಯ ಸಮ್ಮಿಶ್ರ ಸರ್ಕಾರ ಮುನ್ನಡೆದಿದೆ. ಹೀಗಾಗಿ ಯಾರೇ ಕುತಂತ್ರ ನಡೆಸಿದರೂ ಸರ್ಕಾರ ಬೀಳದು. ಆದರೆ ಅನಗತ್ಯವಾಗಿ ಅವರ ಹೆಸರು ಕೆಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಉರುಳಿಸಲು ಬಿಜೆಪಿ ಮುಂದಾದರೆ ನಾವೇನು ಕೈಕಟ್ಟಿ ಕೂರ್ತೇವಾ? ಬಿಎಸ್​ವೈ ಗೋಮುಖ ವ್ಯಾಘ್ರ ಇದ್ದಂತೆ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ


ಇಲ್ಲಿರಲಾರೆ, ಅಲ್ಲೂ ಹೋಗಲಾರೆ

ಕಾರವಾರ/ಯಲ್ಲಾಪುರ: ಇಲ್ಲೋ.. ಅಲ್ಲೋ.. ಎಲ್ಲೋ.. ಎಂಬ ಸ್ಥಿತಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಅವರದ್ದಾಗಿದೆ. ಹೆಬ್ಬಾರ ಬಿಜೆಪಿಗೆ ತೆರಳುತ್ತಾರೆಂದು ಸುದ್ದಿ ಹರಡಿದೆ. ಬಿಜೆಪಿ ಸೇರುವಂತೆ ಒತ್ತಡವಿರುವುದು ನಿಜ ಎಂದು ಸ್ವತಃ ಹೆಬ್ಬಾರರೇ ಹೇಳಿಕೊಂಡಿದ್ದಾರೆ. ಈ ಕ್ಷಣದವರೆಗೂ ನಿರ್ಣಯ ಮಾಡಿಲ್ಲ. ಕಾಂಗ್ರೆಸ್​ನಲ್ಲೇ ಇರುತ್ತೇನೆ ಎಂದೂ ಹೇಳಿಕೊಂಡಿಲ್ಲ. ಹೀಗಾಗಿ, ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಹೆಬ್ಬಾರ ಆಪ್ತ ವಲಯ ತಿಳಿಸುವಂತೆ, ಕೆಲ ದಿನಗಳಿಂದ ಅವರು ಸಭೆ ನಡೆಸಿ ಬಿಜೆಪಿಗೆ ಸೇರ್ಪಡೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಎಚ್.ಕೆ.ಕುಮಾರಸ್ವಾಮಿಗೆ ಬಿಜೆಪಿ ಆಫರ್

ಹಾಸನ: ಸರ್ಕಾರ ಬೀಳಿಸಲು ಇಸ್ಪೀಟು ದಂಧೆಯಲ್ಲಿ ತೊಡಗಿರುವವರು ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪುಷ್ಟಿ ನೀಡುವಂತೆ ವಿದೇಶಗಳಲ್ಲಿ ಕ್ಯಾಸಿನೋಗಳನ್ನು ಹೊಂದಿರುವ ಉದಯ್ಗೌಡ, ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿಯನ್ನು ಬಿಜೆಪಿಗೆ ಸೆಳೆಯಲು ಆಮಿಷವೊಡ್ಡಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಶಾಸಕರ ಪತ್ನಿ ಚಂಚಲಾ ಹೊರಗೆಡವಿದ್ದಾರೆ. 4 ದಿನಗಳ ಹಿಂದೆ ಬೆಂಗಳೂರಿನ ಮನೆಗೆ ಬಂದಿದ್ದ ಉದಯ್ಗೌಡ, ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ 30 ಕೋಟಿ ರೂ. ಕೊಡುತ್ತೇವೆ. ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಹೊಣೆಯನ್ನೂ ನಾವೇ ಹೊರುತ್ತೇವೆ. ಬಳಿಕ ಸಚಿವ ಸ್ಥಾನ ನೀಡá-ತ್ತೇವೆ’ಂದು ಆಮಿಷವೊಡ್ಡಿದ್ದರು ಎಂದು ಜಿಪಂ ಸದಸ್ಯೆಯೂ ಆಗಿರುವ ಚಂಚಲಾ ಕುಮಾರಸ್ವಾಮಿ ಸಕಲೇಶಪುರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಉದಯ್ಗೌಡ, ಸಕಲೇಶಪುರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಅತ್ಯಾಪ್ತ.

ಸಚಿವ ಆಕಾಂಕ್ಷಿಗಳ ತಹತಹ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಅವಕಾಶ ಗಿಟ್ಟಿಸಲು ಕಾಂಗ್ರೆಸ್​ನಲ್ಲಿ ದೊಡ್ಡ ದಂಡೇ ತುದಿಗಾಲಲ್ಲಿ ನಿಂತಿದೆ. ನಾನೂ ಸಚಿವ ಸ್ಥಾನಕ್ಕೆ ಅರ್ಹ ಎಂದು ಬರೋಬ್ಬರಿ 22 ಮಂದಿ ಪಕ್ಷದ ವಿವಿಧ ಹಂತದ ವೇದಿಕೆಗಳಲ್ಲಿ ಆಶಯ ವ್ಯಕ್ತಪಡಿಸಿದ್ದು, ಅಂತಿಮ ಹಂತದಲ್ಲಿ ಒತ್ತಡ ತರುವಲ್ಲಿ ನಿರತರಾಗಿದ್ದಾರೆ. ಎಂಟು ಹಿರಿಯ/ಮಾಜಿ ಸಚಿವರು, 14 ಮಂದಿ 2-3 ಬಾರಿ ಶಾಸಕರಾದವರು ಸಚಿವರಾಗುವ ಪ್ರಯತ್ನದ ಹಾದಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಇಬ್ಬರು ಅಸಮಾಧಾನಿತರನ್ನು ಕರೆದು ಮಾತನಾಡಿಸಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದೆ. ಹೀಗಾಗಿ ಉಳಿದ ಆಕಾಂಕ್ಷಿಗಳಲ್ಲಿ ಅವಕಾಶ ಎಲ್ಲಿ ಕೈ ತಪು್ಪತ್ತದೋ ಎಂಬ ಅಳುಕಿನಲ್ಲೇ ಇದ್ದಾರೆ. ಅನೇಕರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಸಚಿವಾಕಾಂಕ್ಷಿಗಳು ಯಾರು?

# ಎಚ್.ಕೆ.ಪಾಟೀಲ್ # ರಾಮಲಿಂಗಾರೆಡ್ಡಿ # ರೋಷನ್ ಬೇಗ್ # ಎಂ.ಬಿ.ಪಾಟೀಲ್ # ತನ್ವೀರ್ ಸೇಠ್ # ಎಂ.ಕೃಷ್ಣಪ್ಪ # ಪಿ.ಟಿ.ಪರಮೇಶ್ವರ್ ನಾಯ್್ಕ # ಬಿ.ಸಿ.ಪಾಟೀಲ್ # ಎಂ.ಟಿ.ಬಿ.ನಾಗರಾಜ್ # ಡಾ.ಸುಧಾಕರ್ # ತುಕಾರಾಂ # ನಾಗೇಂದ್ರ # ಆನಂದ್ ಸಿಂಗ್ # ಅಜಯ್ ಸಿಂಗ್ # ಸಿ.ಎಸ್.ಶಿವಳ್ಳಿ # ಬಿ.ಕೆ.ಸಂಗಮೇಶ್ # ಲಕ್ಷ್ಮೀ ಹೆಬ್ಬಾಳ್ಕರ್ # ರಹೀಂ ಖಾನ್ # ರಾಘವೇಂದ್ರ ಹಿಟ್ನಾಳ್ # ಎಸ್.ಟಿ.ಸೋಮಶೇಖರ್

ಸ್ಥಾನ ಭರ್ತಿ ನಾಲ್ಕಾ, ಆರಾ?

ಸಂಪುಟದಲ್ಲಿ ಕಾಂಗ್ರೆಸ್ ಪಾಲಿಗಿರುವ ಆರು ಸ್ಥಾನಗಳಲ್ಲಿ ಎಷ್ಟು ಸ್ಥಾನಗಳನ್ನು ತುಂಬಿಕೊಳ್ಳಬೇಕೆಂಬ ಬಗ್ಗೆ ಗೊಂದಲ ಹಾಗೇ ಉಳಿದಿದೆ. ಆರು ಸ್ಥಾನಗಳನ್ನು ಒಟ್ಟಿಗೆ ತುಂಬಿಕೊಳ್ಳುವುದೊಳಿತು ಎಂದು ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ. 22 ಆಕಾಂಕ್ಷಿಗಳು ಇರುವ ಕಾರಣ ಎರಡು ಸ್ಥಾನ ಬಾಕಿ ಇಡುವುದೇ ಒಳಿತೆಂದು ಕೈ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎರಡೂ ವಾದಗಳು ರಾಹುಲ್ ಗಾಂಧಿ ಸಮ್ಮುಖದಲ್ಲೇ ತೀರ್ವನವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪರಿಷತ್ ಆಕಾಂಕ್ಷಿಗಳು

# ಪ್ರೊ.ಕೆ.ಇ.ರಾಧಾಕೃಷ್ಣ # ನಿವೇದಿತ್ ಆಳ್ವ # ರಾಮಚಂದ್ರಪ್ಪ # ಶಿವಣ್ಣ # ಮಲ್ಲಾಜಮ್ಮ

Leave a Reply

Your email address will not be published. Required fields are marked *

Back To Top