ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ರೆಸಾರ್ಟ್ ರಾಜಕೀಯ?

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಕರ್ನಾಟಕ ಕಾಂಗ್ರೆಸ್​ನಲ್ಲಿ ಹೊಗೆಯಾಡುತ್ತಿರುವ ಭಿನ್ನಮತ ಇನ್ನೂ ಶಮನವಾಗಿಲ್ಲ, ಪಕ್ಷದಲ್ಲಿ ಇನ್ನೊಂದು ಸುತ್ತಿನ ಬೆಳವಣಿಗೆಗಳು ನಡೆದಿವೆ. ಶಾಸಕ ಡಾ. ಕೆ. ಸುಧಾಕರ್​ ನೇತೃತ್ವದಲ್ಲಿ ರೆಸಾರ್ಟ್​ ರಾಜಕೀಯ ಪ್ರಾರಂಭವಾಗುವ ಸುಳಿವು ಸಿಕ್ಕಿದೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಬುಧವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ 20 ಅತೃಪ್ತ ಶಾಸಕರು ಮಹಾರಾಷ್ಟ್ರದ ಖಾಗಿ ರೆಸಾರ್ಟ್​ಗೆ ತೆರಳಲಿದ್ದಾರೆ. 20 ಶಾಸಕರಲ್ಲಿ ಮೂವರು ಜೆಡಿಎಸ್​ ಶಾಸಕರು ಎಂಬ ಮಾಹಿತಿ ಸಿಕ್ಕಿದೆ.

ಈ ಸಂಬಂಧ ದಿಗ್ವಿಜಯ ನ್ಯೂಸ್​ ಸುಧಾಕರ್​ ಅವರನ್ನು ಸಂಪರ್ಕಿಸಿದಾಗ, ನಾನು ಈಗ ಬೆಂಗಳೂರಿನಲ್ಲಿ ಇಲ್ಲ ಹೊರಗೆ ಹೋಗಿದ್ದೇನೆ ಎಂದು ತಿಳಿಸಿದ್ದಾರೆ. ಸುಧಾಕರ್​ ಅವರ ಪ್ರತಿಕ್ರಿಯೆ ರೆಸಾರ್ಟ್ ರಾಜಕೀಯದ ಬೆಳವಣಿಗೆಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.