ದನಗಳ ರೀತಿ ವರ್ತಿಸೋಕೆ ಆಗೋಲ್ಲ: ರಮೇಶ್ ಜಾರಕಿಹೊಳಿ ವಿರುದ್ಧ ಸ್ಪೀಕರ್ ಆಕ್ರೋಶ, ಎರಡೂ ರಾಜೀನಾಮೆ ಪತ್ರ ಬಂದಿಲ್ಲವೆಂದು ಸ್ಪಷ್ಟನೆ

Latest News

ಸಂಸದ, ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಕಾಣೆಯಾಗಿದ್ದಾರೆ ಹುಡುಕಿಕೊಡಿ: ದೆಹಲಿಯಲ್ಲಿ ಪತ್ತೆಯಾದ ನಾಪತ್ತೆ ಪೋಸ್ಟರ್​!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಲ್ಬಣಿಸಿರುವ ವಾಯುಮಾಲಿನ್ಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸಂಸದೀಯ ಸಮಿತಿ ಕರೆದಿದ್ದ ಸಭೆಗೆ ಗೈರುಹಾಜರಾದ ಪೂರ್ವ ದೆಹಲಿಯ ಬಿಜೆಪಿ...

ಮೂಡಬಿದರೆಯ ತೋಡಾರು ಗ್ರಾಮದ ಅಯ್ಯಪ್ಪ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಿರುವ ಶ್ವಾನ

ಚಿಕ್ಕಮಗಳೂರು: ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೊರಟಿರುವ ಭಕ್ತರ ತಂಡದ ಜತೆ ಶ್ವಾನವೊಂದು ತೆರಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ...

ವಿಆರ್​ಎಲ್​ ಪ್ರಾಯೋಜಕತ್ವದ ಹಾಫ್​ ಮ್ಯಾರಥಾನ್​ಗೆ ನಟಿ ಸುಮನ್ ನಗರ್‍ಕರ್ ಚಾಲನೆ: ಗಿನ್ನೆಸ್​ ದಾಖಲೆ ಬರೆದ ಓಜಲ್ ನಲವಡಿಗೆ ಸನ್ಮಾನ

ಹುಬ್ಬಳ್ಳಿ: ವಿಆರ್​ಎಲ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಹಾಫ್ ಮ್ಯಾರಥಾನ್​ಗೆ ಖ್ಯಾತ ನಟಿ ಸುಮನ್ ನಗರ್‍ಕರ್ ಅವರು ಫ್ಲ್ಯಾಗ್ ಆಫ್ ಮಾಡುವ ಮೂಲಕ ಭಾನುವಾರ ಚಾಲನೆ...

16 ವರ್ಷದ ಬಾಲಕನಿಂದ ಸೋದರಸಂಬಂಧಿ ಬಾಲಕಿ ಮೇಲೆ ಅತ್ಯಾಚಾರ

ಗುರುಗ್ರಾಮ: ಹದಿನಾರು ವರ್ಷದ ಬಾಲಕನೊಬ್ಬ ಸೋದರಸಂಬಂಧಿಯ 15 ವರ್ಷದ ಬಾಲಕಿಯನ್ನು ಮಂಚಕ್ಕೆ ಕಟ್ಟಿಹಾಕಿ ಅತ್ಯಾಚಾರ ಎಸಗಿರುವ ಆರೋಪ ಹರಿಯಾಣದ ಗುರುಗ್ರಾಮ 51ನೇ ವಲಯದಲ್ಲಿ...

ಜೀಪಿಗೆ ಅಡ್ಡ ಬಂದ ಕಾಡುಕೋಣವನ್ನು ಹಿಮ್ಮೆಟ್ಟಿಸಿದ ಶ್ವಾನ: ವಿಡಿಯೋ ವೈರಲ್​

ಚಿಕ್ಕಮಗಳೂರು: ವಾಹನಕ್ಕೆ ಅಡ್ಡ ಬಂದ ಕಾಡುಕೋಣವನ್ನು ಶ್ವಾನ ಹಿಮ್ಮೆಟ್ಟಿಸಿದ ಘಟನೆಯ ವಿಡಿಯೋ ಚಿತ್ರೀಕರಣ ವೈರಲ್​ ಆಗಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಫಿ ತೋಟದಲ್ಲಿ...

ಬೆಂಗಳೂರು: ಕಳೆದೆರಡು ದಿನಗಳಿಂದ ನಡೆಯುತ್ತಿರುವ ‘ರಾಜೀನಾಮೆ ಪ್ರಹಸನ’ ನಿಧಾನಕ್ಕೆ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ ಅಂಗೀಕಾರ ಸ್ಪೀಕರ್ ಅಂಗಳದಲ್ಲಿ ಇದೆ ಎಂದು ಹೇಳಲಾದರೂ, ರಾಜೀನಾಮೆ ಸಲ್ಲಿಕೆ ರೀತಿಗೆ ಸಭಾಪತಿ ರಮೇಶ್​ಕುಮಾರ್ ಗರಂ ಆಗಿದ್ದಾರೆ.

ಶಾಸಕ ಆನಂದ್ ಸಿಂಗ್ ರಾಜೀನಾಮೆ ಪತ್ರ ತಲುಪಿದೆ. ಎರಡು ರಾಜೀನಾಮೆ ನನ್ನ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿರುವ ರಮೇಶ್​ಕುಮಾರ್, ಫ್ಯಾಕ್ಸ್​ನಲ್ಲಿ ರಾಜೀನಾಮೆ ತಗಳೋಕೆ ನಾನು ಪೋಸ್ಟ್ ಮಾಸ್ಟರ್ ಅಲ್ಲ. ದನಗಳ ರೀತಿ ವರ್ತನೆ ಮಾಡೋಕೆ ಆಗೋದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮೀಡಿಯಾದಲ್ಲಿ ಮಾತನಾಡುವುದಕ್ಕೂ ಮೊದಲು ಸಂವಿಧಾನ ನೀತಿ ನಿಯಮಗಳನ್ನು ತಿಳಿದುಕೊಳ್ಳಲಿ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಏರುಧ್ವನಿಯಲ್ಲಿ ಗುಡುಗಿದ ರಮೇಶ್​ಕುಮಾರ್, ‘ನಾನು ಈ ಸದನದ ಸ್ಪೀಕರ್. ತಲೆಬಾಗೋದು ಸಂವಿಧಾನಕ್ಕೆ ಮಾತ್ರ. ಇಲ್ಲಿ ಯಾರ ದೊಡ್ಡಸ್ಥಿಕೆಯೂ ನಡೆಯುವುದಿಲ್ಲ. ನೀತಿ ನಿಯಮಾವಳಿ ಪ್ರಕಾರವೇ ನಾನು ನಡೆದುಕೊಳ್ಳೋದು’ ಎಂದು ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆನಂದ್ ಸಿಂಗ್ ಸೋಮವಾರ ಬೆಳಿಗ್ಗೆ 6.30ಕ್ಕೆ ದೊಮ್ಮಲೂರಿನ ನನ್ನ ಮನೆಗೆ, ಪೂರ್ವಾನುಮತಿ ತೆಗೆದುಕೊಳ್ಳದೆ ಬಂದು ರಾಜೀನಾಮೆ ಪತ್ರ ಕೊಟ್ಟು ಹೋಗಿದ್ದಾರೆ. ನಿಯಮಾವಳಿ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಇಷ್ಟೇ ದಿನದಲ್ಲಿ ರಾಜೀನಾಮೆ ಬಗ್ಗೆ ತೀರ್ಮಾನ ಮಾಡಬೇಕು ಎನ್ನುವ ನಿಯಮವಿಲ್ಲ. ಡಾ.ಉಮೇಶ್​ಜಾಧವ್ ರಾಜೀನಾಮೆ ಸ್ವೀಕಾರಕ್ಕೂ ಮುನ್ನ ನಡೆಸಿದ ಪ್ರಕ್ರಿಯೆಯನ್ನು ಇಲ್ಲಿಯೂ ನಡೆಸುತ್ತೇನೆ. ಒತ್ತಡಕ್ಕೆ ರಾಜೀನಾಮೆ ನೀಡಿದ್ದೀರಾ? ಎಂದೆಲ್ಲ ಅವರನ್ನು ಕರೆದು ಕೇಳುತ್ತೇನೆ. ಪಬ್ಲಿಕ್ ಹಿಯರಿಂಗ್ ರೀತಿ ಮಾಡುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆ ಏನಿಲ್ಲ ಎಂದರು. ಯಾವ ಶಾಸಕರೂ ನನ್ನ ಭೇಟಿಗೆ ಸಮಯ ಕೇಳಿಲ್ಲ. ಒಂದು ವೇಳೆ ರಾಜೀನಾಮೆ ಕೊಡಬೇಕು ಎಂದು ಟೈಂ ಕೇಳಿದ್ದು ನಿಮಗೆ ಗೊತ್ತಿದ್ದರೆ, ಅವರಿಗೆ ನನ್ನ ನಂಬರ್ ಕೊಡಿ ಎಂದು ಪ್ರಶ್ನೆಯೊಂದಕ್ಕೆ ಗರಂ ಆಗಿಯೇ ಉತ್ತರಿಸಿದರು.

ಇದಕ್ಕೂ ಮೊದಲು ಆನಂದ್ ಸಿಂಗ್ ಅವರ ರಾಜೀನಾಮೆ ಪತ್ರವನ್ನು ಸಿಬ್ಬಂದಿಯಿಂದ ತರಿಸಿಕೊಂಡು ತಮ್ಮ ಕಚೇರಿಯಲ್ಲಿ ಪರಿಶೀಲನೆ ಮಾಡಿದರು.

ಪರಿಸ್ಥಿತಿ ಬಿಗಡಾಯಿಸಿದರೆ ತಕ್ಷಣವೇ ಸಚಿವ ಸಂಪುಟ ಪುನಾರಚನೆ?

ಅಭದ್ರತೆ ರಾಜಕೀಯದಲ್ಲಿ ಸಂಪುಟ ಪುನಾರಚನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇಬ್ಬರು ಶಾಸಕರು ರಾಜೀನಾಮೆ ಪ್ರಸ್ತಾಪ ಬೆನ್ನಲ್ಲೇ ಮತ್ತಷ್ಟು ಅತೃಪ್ತರು ಅದೇ ದಾರಿ ಹಿಡಿಯಬಾರೆಂಬ ಕಾರಣಕ್ಕೆ ಮತ್ತು ಅತೃಪ್ತರ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಪುಟ ಪುನಾರಚನೆ ಮಾಡುವ ಬಗ್ಗೆ ಕಾಂಗ್ರೆಸ್​ನಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಹೇಗಾದರೂ ಇನ್ನೊಂದಿಷ್ಟು ದಿನ ಮೈತ್ರಿ ಸರ್ಕಾರ ಮುಂದುವರಿಯಬೇಕು ಎಂಬ ಕಾರಣಕ್ಕೆ ಸಂಪುಟದಲ್ಲಿರುವ ಪಕ್ಷನಿಷ್ಠ ನಾಲ್ವರನ್ನು ಕೈಬಿಟ್ಟು, ಬಿಜೆಪಿ ಗಾಳ ಹಾಕಿರುವ ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ವಿದೇಶ ಪ್ರವಾಸದಿಂದ ವಾಪಸ್ ಬಂದ ನಂತರವಷ್ಟೇ ಈ ಬಗ್ಗೆ ಚರ್ಚೆ ನಡೆದು ತೀರ್ಮಾನ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಬಿ.ಸಿ.ಪಾಟೀಲ್ ರಾಜೀನಾಮೆ ಗುಸುಗುಸು

ಹಾವೇರಿ: ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ ಸದ್ಯದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ? ಇಂಥದ್ದೊಂದು ಗುಸುಗುಸು ಕ್ಷೇತ್ರದಲ್ಲಿ ಶುರುವಾಗಿದೆ. ಸದ್ಯ ಕ್ಷೇತ್ರದಲ್ಲಿ ಪೂರ್ವನಿಗದಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಬೆಂಗಳೂರಿನಲ್ಲಿಯೇ ಇರುವ ಶಾಸಕರು ಮುಂದಿನ ನಡೆ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ‘ಬುಧವಾರವೂ ಬೆಂಗಳೂರಿನಲ್ಲಿ ಸ್ವಲ್ಪ ಕೆಲಸವಿದೆ. ಮುಗಿಸಿಕೊಂಡು ಕ್ಷೇತ್ರಕ್ಕೆ ಬರುತ್ತೇನೆ. ನಾನು ರಾಜೀನಾಮೆ ನಿರ್ಧಾರ ಕೈಗೊಂಡಿಲ್ಲ. ಕಾದು ನೋಡೋಣ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅತೃಪ್ತರಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಲ್ಲಿ ಸ್ಥಾನ ತ್ಯಾಗಕ್ಕೂ ಅನೇಕ ಹಿರಿಯರ ಸಚಿವರು ಸಿದ್ಧರಿದ್ದಾರೆ. ಸರ್ಕಾರ ಉಳಿಸಿಕೊಳ್ಳುವ ಪ್ರಶ್ನೆ ಅಲ್ಲ, ನಮಗೆ ಪಕ್ಷ ಮುಖ್ಯ. ಹೈಕಮಾಂಡ್ ಸೂಚನೆ ಬಂದರೆ ಬದಲಾವಣೆ ಮಾಡುತ್ತೇವೆ. ಸದ್ಯಕ್ಕೆ ಅಂತಹ ಸನ್ನಿವೇಶ ಬಂದಿಲ್ಲ.

| ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ (ತುಮಕೂರಲ್ಲಿ)

ಅತೃಪ್ತರ ಬ್ಲಾಕ್​ವೆುೕಲ್ ತಂತ್ರಕ್ಕೆ ಹೈಕಮಾಂಡ್ ಮಣಿಯಬಾರದು. ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬೇಕು. ಮೈತ್ರಿ ನಾಯಕರು ದಿಟ್ಟ ನಿರ್ಧಾರ ಕೈಗೊಂಡು ಯಾರನ್ನೂ ಓಲೈಕೆ ಮಾಡುವ ಕೆಲಸಕ್ಕೆ ಮುಂದಾಗದೆ ಅವರ ಆತ್ಮಸಾಕ್ಷಿಗೆ ಬಿಟ್ಟು ಸುಮ್ಮನಾಗಬೇಕು. ಸುಮ್ಮನೆ ತೇಪೆ ಹಾಕೋ ಕೆಲಸ ಮಾಡಬಾರದು.

| ವೈ.ಎಸ್.ವಿ.ದತ್ತ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ

ಜಿಂದಾಲ್​ಗೆ ಭೂಮಿ ನೀಡಿಕೆ ವಿಚಾರದಲ್ಲಿ ತಪ್ಪು ಕಲ್ಪನೆಯಿಂದ ರಾಜೀನಾಮೆ ಕೊಟ್ಟಿದ್ದರೆ ಶಾಸಕ ಆನಂದ್ ಸಿಂಗ್ ವಾಪಸ್ ಪಡೆಯಬೇಕು. ಸಂಪುಟ ಉಪಸಮಿತಿ ವರದಿ ಬಂದ ನಂತರ ಆ ಬಗ್ಗೆ ಅವರು ನಿರ್ಧಾರ ಮಾಡಲಿ.

| ಎಚ್.ಕೆ.ಪಾಟೀಲ್ ಕಾಂಗ್ರೆಸ್ ಶಾಸಕ

ರಿವರ್ಸ್ ಆಪರೇಷನ್ ಮಾಡ್ಲಿ ನೋಡೋಣ

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ರಿಸರ್ವ್ ಆಪರೇಷನ್ ಮಾಡುವುದಾಗಿ ದೋಸ್ತಿ ನಾಯಕರು ಹೇಳುತ್ತಿದ್ದು, ಮಾಡಲಿ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಡಾಲರ್ಸ್ ಕಾಲನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ತಿಂಗಳಿನಿಂದ ಜೆಡಿಎಸ್-ಕಾಂಗ್ರೆಸ್ ಮುಖಂಡರು ನಮ್ಮ ಶಾಸಕರನ್ನು ಸೆಳೆಯುವ ಮಾತನ್ನಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ ಎಂದರು. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿಲ್ಲ. ಆದರೆ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಅಮೆರಿಕದಿಂದ ಬಂದು ರಿವರ್ಸ್ ಆಪರೇಷನ್ ಮಾಡಲಿ ಎಂದ ಬಿಎಸ್​ವೈ, ಕಾಂಗ್ರೆಸ್ ಎಲ್ಲೆಡೆ ಸೋತು ಸುಣ್ಣವಾಗಿದೆ. ಇಂತಹ ಸಂದರ್ಭದಲ್ಲಿ ಯಾವ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದರು. ಕೈ ನಾಯಕರು 3 ತಿಂಗಳಿನಿಂದ ಯಾರೊಬ್ಬರೂ ರಾಜೀನಾಮೆ ನೀಡಲ್ಲ ಎನ್ನುತ್ತಿದ್ದರು. ಸೋಮವಾರ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಯಾವ ಶಾಸಕರನ್ನೂ ಸಂರ್ಪಸಿ ರಾಜೀನಾಮೆಗೆ ಆಮಿಷ ತೋರಿಸಿಲ್ಲ. ಈ ನೀತಿಗೆಟ್ಟ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

ಬಿಜೆಪಿ ಲೆಕ್ಕಾಚಾರ

1. ಮೈತ್ರಿ ಪಕ್ಷಗಳ 13 ಶಾಸಕರ ರಾಜೀನಾಮೆ ಸಾಧ್ಯವಾಗದೆ ಹೋದರೆ ತಕ್ಷಣಕ್ಕೆ ಸರಕಾರ ರಚನೆ ಪ್ರಕ್ರಿಯೆಗೆ ಕೈ ಹಾಕದೇ ಇರಬಹುದು.

2. ರಾಜ್ಯ ಸರಕಾರ ಬಹುಮತಕ್ಕೆ ಅಗತ್ಯ ಸಂಖ್ಯಾಬಲ ಕಳೆದುಕೊಂಡಿದ್ದು, ವಿಶ್ವಾಸಮತ ಸಾಬೀತುಪಡಿಸಲು ಸಿಎಂಗೆ ನಿರ್ದೇಶನ ನೀಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಬಹುದು.

3. ಕಲಾಪದಲ್ಲಿ 13 ಶಾಸಕರು ಗೈರಾಗುವಂತೆ ಮಾಡಿ, ಸರ್ಕಾರವನ್ನು ಅಲ್ಪಮತಕ್ಕೆ ತಳ್ಳಿ ರಾಜ್ಯಪಾಲರ ಆಡಳಿತ ಬರುವಂತೆ ನೋಡಿಕೊಳ್ಳುವುದು.

4. ರಾಜ್ಯದಲ್ಲೇ ಈ ಹಿಂದಿನ ಪ್ರಕರಣದಲ್ಲಿ ವಿಪ್ ಉಲ್ಲಂಘಿಸಿದವರಿಗೆ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಕ್ರಮವಾಗಿಲ್ಲ.

5. ರಾಜೀನಾಮೆ ಕೊಟ್ಟ ಶಾಸಕರ ಕ್ಷೇತ್ರಗಳಿಗೆ ಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳ ಚುನಾವಣೆ ಜತೆಗೆ ಉಪಚುನಾವಣೆ ನಡೆಸುವುದು. ಅಲ್ಲಿಯವರೆಗೆ ವಿಧಾನಸಭೆಯನ್ನು ಅಮಾನತಿನಲ್ಲಿಡುವುದು.

6. ಉಪಚುನಾವಣೆಯಲ್ಲಿ ಎಂಟು ಸ್ಥಾನ ಗೆದ್ದರೂ ಬಿಜೆಪಿಗೆ ಸರಳ ಬಹುಮತ ಸಾಧ್ಯವಾಗುತ್ತದೆ.

ಬ್ಲ್ಯಾಕ್​ಮೇಲ್​ ನನ್ನ ಜಾಯಮಾನವಲ್ಲ

ಹೊಸಪೇಟೆ: ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬ್ಲಾ ್ಯ್ಮೇಲ್ ಮಾಡುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ನಾನು ಸಚಿವ ಸ್ಥಾನಕ್ಕೆ ಯಾವತ್ತೂ ಆಸೆ ಪಟ್ಟಿಲ್ಲ. ಬ್ಲಾ ್ಯ್ಮೇಲ್ ನನ್ನ ಜಾಯಮಾನವಲ್ಲ ಎಂದು ಶಾಸಕ ಆನಂದ್​ಸಿಂಗ್ ತಿಳಿಸಿದ್ದಾರೆ. ಮಂಗಳವಾರ ನಗರದ ಶ್ರೀ ವೇಣುಗೋಪಾಲಸ್ವಾಮಿ ದರ್ಶನ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿ, ನನ್ನ ಬೇಡಿಕೆ ಕುರಿತು ಕಾಂಗ್ರೆಸ್ ನಾಯಕರ ಜತೆ ಮಾತನಾಡಿದ್ದೇನೆ. ಯಾವ ಆಪರೇಷನ್ ಕಮಲಾನೂ ಇಲ್ಲ, ಎಂಥದ್ದೂ ಇಲ್ಲ. ಮುಂದಿನ ನಡೆಯನ್ನು ನೀವೇ ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾರ್ಖಾನೆಗಳಿಗೆ ಭೂಮಿಯನ್ನು ಸರ್ಕಾರ ಲೀಸ್​ಗೆ ನೀಡಲಿ. ಆದರೆ, ಲೀಸ್ ಕಂ ಸೇಲ್ ಅಗ್ರಿಮೆಂಟ್ ಮಾಡುವುದು ಬೇಡ ಎಂದ ಆನಂದ್, ನಾನೇ ಖುದ್ದು ರಾಜೀನಾಮೆ ಸಲ್ಲಿಸಲಿ ಎಂಬ ಭಾವನೆ ಸ್ಪೀಕರ್ ಅವರಲ್ಲಿ ಇರಬಹುದೇನೋ. ಆ ಕುರಿತು ವಿಚಾರ ಮಾಡುತ್ತೇನೆ ಎಂದರು.

ಮೆಜೆಸ್ಟಿಕ್ ಹೋಟೆಲ್​ನಲ್ಲಿ ರಮೇಶ್

ಮಾಧ್ಯಮಗಳ ಎದುರು ರಾಜೀನಾಮೆ ಪತ್ರ ಬಿಡುಗಡೆ ಮಾಡಿ ದೆಹಲಿಗೆ ತೆರಳುವುದಾಗಿ ಹೇಳಿದ್ದ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಮಂಗಳವಾರ ಇಡೀ ದಿನ ಬೆಂಗಳೂರಿನಲ್ಲೇ ಉಳಿದಿದ್ದರಿಂದಾಗಿ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಟ್ಟರು. ಮೆಜೆಸ್ಟಿಕ್​ನಲ್ಲಿರುವ ರಾಜಮಹಲ್ ಹೋಟೆಲ್​ನಲ್ಲಿ ರಮೇಶ್ ಕಾಣಿಸಿಕೊಂಡ ಬಳಿಕ ರಾಜೀನಾಮೆ ವಿಚಾರದಲ್ಲಿ ಅವರು ಗಂಭೀರವಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಕಾಂಗ್ರೆಸಿಗರು, ರಾಜೀನಾಮೆ ಕೊಟ್ಟರೆ ಕೊಡಲಿ, ಅವರು ನಮ್ಮೊಂದಿಗಿದ್ದಷ್ಟು ದಿನ ಗೊಂದಲವೇ ಹೆಚ್ಚೆಂಬ ಅಭಿಪ್ರಾಯಕ್ಕೆ ಬಂದರೆಂದು ಹೇಳಲಾಗಿದೆ.

ತಲುಪದ ಫ್ಯಾಕ್ಸ್: ಮತ್ತೊಂದೆಡೆ ರಾಜೀನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ಫ್ಯಾಕ್ಸ್ ಮಾಡಿರುವುದಾಗಿ ರಮೇಶ್ ಜಾರಕಿಹೊಳಿ ಆಪ್ತರು ಸೋಮವಾರ ಬೆಳಗಾವಿಯಲ್ಲಿ ಹೇಳಿದ್ದರು. ಆದರೆ ಮಂಗಳವಾರ ಸಂಜೆ ತನಕ ಫ್ಯಾಕ್ಸ್ ಸ್ಪೀಕರ್ ಅಥವಾ ವಿಧಾನಸಭೆ ಕಾರ್ಯದರ್ಶಿ ಕಚೇರಿಗೆ ತಲುಪಿಲ್ಲ. ಇದು ಕೂಡ ರಮೇಶ್ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳದಿರಲು ಕಾರಣ ಎನ್ನಲಾಗಿದೆ.

ನಮ್ಮ ಪಾಡು ಹೇಳೋರಿಲ್ಲ, ಕೇಳೋರಿಲ್ಲ!

ಮೈಸೂರು: ಕಾಂಗ್ರೆಸ್​ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕರಿಗೆ ಬೆಲೆಯೇ ಇಲ್ಲದಂತಾಗಿದೆ. ನಮ್ಮ ಪಾಡು ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಹ ಪರಿಸ್ಥಿತಿ ನಿರ್ವಣವಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್​ನಲ್ಲಿ ನಮ್ಮ ಪಾಡು ಹೇಗಿದೆ ಅಂದ್ರೆ, ಪಕ್ಷದಲ್ಲಿ ನಮಗೆ ಸೂಕ್ತ ಬೆಲೆ, ಸ್ಥಾನಮಾನ ಇಲ್ಲ. ಇನ್ನು ಬಿಜೆಪಿಯವರು ನಮಗೆ ಬೆಲೆ ಕಟ್ಟಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತ ಪ್ರತಿನಿಧಿಗಳು ದಿನದೂಡುವಂತಾಗಿದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಪರ ಜಿಟಿಡಿ ಬ್ಯಾಟಿಂಗ್!

ಮೈಸೂರು: ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರು ಇಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಯಾರ ರಾಜೀನಾಮೆಯನ್ನು ಕೊಡಿಸಲೂ ಹೋಗಿಲ್ಲ. ಅವರು ಬಜೆಟ್ ಹಾಗೂ ಅಧಿವೇಶನ ಕಡೆ ಗಮನ ಹರಿಸಿದ್ದಾರೆ. ಕಾಶ್ಮೀರ ಸಮಸ್ಯೆ, ಅಮೆರಿಕ, ಚೀನಾ ಜತೆ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ತಂದಿದೆ. ಬಿಜೆಪಿಯವರ ಮೇಲೆ ಯಾರೂ ಕೆಸರು ಎರಚುವ ಹಾಗಿಲ್ಲ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಕುಮಾರಸ್ವಾಮಿ ಇಬ್ಬರು ನಾಯಕರ ಮೇಲೂ ನನಗೆ ಪ್ರೀತಿ ಇದೆ. ಅವರಿಬ್ಬರೂ ಮಹಾನ್ ನಾಯಕರು. ನನಗೆ ಎಲ್ಲ ಪಕ್ಷದ ನಾಯಕರ ಮೇಲೆ ಪ್ರೀತಿ ಇದೆ. ನಾನು ಎಲ್ಲೂ ಹೋಗಲ್ಲ, ಜೆಡಿಎಸ್​ನಲ್ಲೇ ಇರುತ್ತೇನೆ. ನಾನು ಬಿಜೆಪಿಗೆ ಹೋಗಿದ್ದು ಅಧಿಕಾರದಲ್ಲಿ ಇಲ್ಲದಿದ್ದಾಗ. ಅದರ ಪ್ರತಿಫಲವಾಗಿ ಗೃಹಮಂಡಳಿ ಅಧ್ಯಕ್ಷರ ನ್ನಾಗಿ ಮಾಡಿದ್ದರು. ಆದರೆ, ಈಗ ನಾನು ಬಿಜೆಪಿ ಶಾಸಕರ ಜತೆ ಓಡಾಡ್ತಿರೋದು ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ ಎಂದರು.

ಸಿದ್ದರಾಮಯ್ಯಗೆ ಅಮಿತ್ ಷಾ, ಪ್ರಧಾನಿ ಮೋದಿ ಬಗ್ಗೆ ಅನುಮಾನ

ಅಮಿತ್ ಷಾ ಅವರೇ ಸರ್ಕಾರ ಕೆಡವಲು ಮುಂದಾಗಿದ್ದಾರೆ. ಮೋದಿಯೂ ಇದರ ಹಿಂದಿದ್ದಾರೆ. ಹಣ ಅಧಿಕಾರದ ಆಮಿಷಗಳನ್ನು ಕೊಟ್ಟು ಸರ್ಕಾರ ಬೀಳಿಸಲು ನೋಡುತ್ತಿದ್ದರು, ಈಗ ಮತ್ತೆ ಅದೇ ಆಟ ಶುರು ಮಾಡಿದ್ದಾರೆ, ಆದರೆ ಸಕ್ಸಸ್ ಆಗುವುದಿಲ್ಲ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಿಜೆಪಿಯವರು ಹೊಸ ತಂತ್ರ ಮಾಡಿದ್ದಾರೆ. ಅವರದೇ ಕುತಂತ್ರ ಇದು, ನಮ್ಮ ಎಂಎಲ್​ಎಗಳನ್ನು ಸೆಳೆಯುವುದಕ್ಕೆ ಪ್ರಯತ್ನ ಮಾಡುತ್ತಿರುವುದು ಅವರೇನೆ. ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ ಎಂದು ಬಿಜೆಪಿಯನ್ನು ಟೀಕಿಸಿದರು. ಆ ಮೂಲಕ ಬಿಜೆಪಿ ನಡೆಯ ಬಗ್ಗೆ ಜೆಡಿಎಸ್ ನಾಯಕರದ್ದೊಂದು ಅಭಿಪ್ರಾಯವಾದರೆ, ಕಾಂಗ್ರೆಸ್​ನವರದ್ದು ಇನ್ನೊಂದು ಎಂಬಂತೆ ತೋರ್ಪಟ್ಟಿತು.

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....