ಹೈಡ್ರಾಮಾಗೆ ಅಲ್ಪವಿರಾಮ: ಆನಂದ್ ಸಿಂಗ್ ರಾಜಿ?, ಎಚ್ಡಿಕೆಗೆ ರಮೇಶ್ ಮನವೊಲಿಕೆ ಹೊಣೆ

Latest News

ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ವಿರೋಧಿಸಿ ಲೋಕಸಭೆ ಸ್ಪೀಕರ್ ಪೀಠದ ಎದುರು ಕಾಂಗ್ರೆಸ್​ ಪ್ರತಿಭಟನೆ

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ (ಬಿಪಿಸಿಎಲ್​) ಸೇರಿ ಕೆಲ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ಮತ್ತು ಚುನಾವಣಾ ಬಾಂಡ್​ ವಿತರಣೆಯನ್ನು ಬಹುದೊಡ್ಡ...

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹಂತಕ ರಾಬರ್ಟ್​ ಪಯಾಸ್​ಗೆ ಒಂದು ತಿಂಗಳ ಪರೋಲ್​

ಚೆನ್ನೈ: ಮಾಜಿ ಪ್ರಧಾನ ಮಂತ್ರಿ ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ರಾಬರ್ಟ್ ಪಯಾಸ್​ಗೆ ಮದ್ರಾಸ್​ ಹೈಕೋರ್ಟ್​ ಗುರುವಾರ 30 ದಿನಗಳ ಪರೋಲ್​...

ಡಿಕೆಶಿ ಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತ ನೀಡಿದ ಅಭಿಮಾನಿಗಳು

ವಿಜಯವಾಣಿ ಸುದ್ದಿಜಾಲ, ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ನಗರದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭರ್ಜರಿ ಸ್ವಾಗತಿಸಿದರು.ಗೋಕುಲ ರಸ್ತೆ ವಿಮಾನ...

ನಾಳೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗುತ್ತಿದ್ದಾರೆ ನಟ, ನೇತಾರ ಕಮಲ್ ಹಾಸನ್

ಚೆನ್ನೈ: ಮಕ್ಕಳ್ ನೀದಿ ಮೈಯ್ಯಮ್(ಎಂಎನ್​ಎಂ) ಪಕ್ಷ ಸ್ಥಾಪಕ ನಟ ಕಮಲ್ ಹಾಸನ್ ನಾಳೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಮುಖ ಸರ್ಜರಿಗೆ ಒಳಗಾಗಲಿದ್ದಾರೆ ಎಂದು...

ರಕ್ಷಣಾ ಸಮಿತಿಗೆ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​ ಆಯ್ಕೆ: ಇದು ದೇಶಕ್ಕೆ ಮಾಡಿದ ಅಪಮಾನವೆಂದ ಕಾಂಗ್ರೆಸ್​

ನವದೆಹಲಿ: ಮಾಲೆಗಾಂವ್​ ಸ್ಪೋಟ(2008) ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ 21 ಸದಸ್ಯರ...

ಬೆಂಗಳೂರು: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ಅಸ್ತ್ರ ಪ್ರಯೋಗಿಸುವ ಮೂಲಕ ಮೈತ್ರಿ ಸರ್ಕಾರದ ಉಸಿರುಗಟ್ಟಿಸಿದ್ದ ಕಾಂಗ್ರೆಸ್ ಶಾಸಕರಿಬ್ಬರ ಮನವೊಲಿಕೆ ಪ್ರಯತ್ನ ಒಂದು ಹಂತದಲ್ಲಿ ಸಫಲತೆ ಕಂಡಿದೆ. ಆ ಮೂಲಕ ಇನ್ನೇನು ಸರ್ಕಾರದ ಕತೆ ಮುಗಿದೇ ಹೋಯಿತೆಂಬ ಸನ್ನಿವೇಶವೂ ಕೊಂಚ ಬದಲಾಗಿದೆ.

ಸೋಮವಾರ ರಾತ್ರಿ ಹಾಗೂ ಮಂಗಳವಾರ ಇಡೀ ದಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರು ನಿರಂತರ ಚರ್ಚೆ ನಡೆಸಿ ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವ ತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ‘ಕೈ’ಸುಡುವ ಆತಂಕದಲ್ಲಿದ್ದ ಕಾಂಗ್ರೆಸ್ ನಾಯಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಜಿಂದಾಲ್​ಗೆ ಭೂಮಿ ಪರಭಾರೆ ಮಾಡುವ ವಿಚಾರ ಮುಂದಿಟ್ಟುಕೊಂಡು ಸ್ಪೀಕರ್​ಗೆ ರಾಜೀನಾಮೆ ಪತ್ರ ರವಾನಿಸಿ ದಂಗೆ ಎದ್ದಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಬೇಡಿಕೆ ಈಡೇರಿಸುವ ಕುರಿತು ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದಾಗಿಯೇ ಸಿಂಗ್ ಕೊಂಚ ತಣ್ಣಗಾಗಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ ಅವರ ನೈಜ ಬೇಡಿಕೆ ಏನು ಮತ್ತು ಅದನ್ನು ಸಿಎಂ ಯಾವ ರೀತಿ ಈಡೇರಿಸುತ್ತಾರೆ ಎಂಬುದು ಮಾತ್ರ ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಜತೆ ಮಾತುಕತೆಗೆ ಯತ್ನಿಸುತ್ತಿರುವ ಸಿಎಂ ಅವರ ಆಪ್ತರ ಮೂಲಕ ಆಹ್ವಾನ ಕಳುಹಿಸಿದ್ದಾರೆ. ಕಾಂಗ್ರೆಸ್ ನಾಯಕರೂ ಜಾರಕಿಹೊಳಿ ಸಂಧಾನ ಹೊಣೆಯನ್ನು ವಹಿಸಿಕೊಳ್ಳುವಂತೆ ಸಿಎಂಗೆ ಸಲಹೆ ನೀಡಿದ್ದಾರೆ.

ಇಡೀ ದಿನ ಬೃಹನ್ನಾಟಕ: ಈ ಬೆಳವಣಿಗೆಗಳಿಗೂ ಮುನ್ನ ರಾಜ್ಯ ರಾಜಕಾರಣದ ವಿದ್ಯಮಾನ ತೋಳ ಬಂತು ತೋಳ ಕಥೆಗೆ ಹೋಲಿಕೆಯಾಗಿ ಗಮನ ಸಳೆಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪೂರ್ವನಿಯೋಜಿತ ಕಾರ್ಯಕ್ರಮದಂತೆ ವಿದೇಶ ಪ್ರಯಾಣಕ್ಕೆ ಹೊರಟು ನಿಂತಿದ್ದು ಆ ಪಕ್ಷದ ಮನಸ್ಥಿತಿಯನ್ನು ತೋರ್ಪಡಿಸಿತು. ಆದರೆ ಮುಖಂಡರಲ್ಲಿ ಮಾತ್ರ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅನುಮಾನ ಇದ್ದೇ ಇದೆ. ವಿಧಾನಮಂಡಲ ಅಧಿವೇಶನ ಬಳಿಕ ಸರ್ಕಾರ ಅಸ್ಥಿರಗೊಳ್ಳುತ್ತದೆ ಎಂಬ ಅಳುಕು ಬಾಕಿ ಉಳಿದಿದೆ. ಇದೇ ವೇಳೆ ದೆಹಲಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಯಾರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು. ‘ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ರಾಜ್ಯ ನಾಯಕರ ಜತೆ ಮಾತನಾಡಿದ್ದೇನೆ.

ಪಿಸಿಸಿ ಅಧ್ಯಕ್ಷರು ವಿದೇಶಕ್ಕೆ ಹೋಗುತ್ತಿದ್ದಾರೆಂದರೆ ಪರಿಸ್ಥಿತಿ ಅರ್ಥವಾಗಿರಬಹುದಲ್ಲವೇ’ಎಂದು ಮೈತ್ರಿಗೆ ಕಂಟಕ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಕಾಂಗ್ರೆಸ್​ನ ಈ ಅಭಿಪ್ರಾಯಕ್ಕೆ ಎರಡು ಪ್ರಬಲ ಕಾರಣಗಳೂ ಇವೆ. ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂದೆ ರಾಷ್ಟ್ರೀಯ ಬಿಜೆಪಿ ನಾಯಕರ ಕೈವಾಡ ಪರೋಕ್ಷವಾಗಿ ಇದೆ ಎಂಬ ಅನುಮಾನ ಇದ್ದರೂ ಇದು ತಮ್ಮದೇ ಪಕ್ಷದ ಶಾಸಕರ ವೈಯಕ್ತಿಕ ತೀರ್ಮಾನ ಸಹ ಆಗಿರಬಹುದು ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಇವರ ಹಿಂದೆ ಬೇರೆ ಶಾಸಕರು ಇಲ್ಲ ಮತ್ತು ಈ ರಾಜೀನಾಮೆ ತಾಂತ್ರಿಕವಾಗಿ ಸಲ್ಲಿಕೆ ಆಗಿಲ್ಲ, ಇದೊಂದು ಬೆದರಿಕೆ ತಂತ್ರವಷ್ಟೇ ಎಂಬುದನ್ನೂ ಖಚಿತ ಪಡಿಸಿಕೊಂಡಿದ್ದಾರೆ.

ಸಿಎಂ ಮನಸ್ಸು ಬೆಂಗಳೂರಲ್ಲಿ: ಮುಖ್ಯ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅಮೆರಿಕದಲ್ಲಿ ಇದ್ದರೂ ಅವರ ಮನಸ್ಸು ಪೂರ್ತಿ ಬೆಂಗಳೂರಿನಲ್ಲೇ ಸುತ್ತು ವರಿದಂತಿತ್ತು. ಪದೇಪದೆ ಕಾಂಗ್ರೆಸ್ ನಾಯಕರನ್ನು ಸಂರ್ಪಸಿದ ಅವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳುತ್ತಿದ್ದರು. ‘ಏನೂ ಆಗಿಲ್ಲ, ಆತಂಕದ ಅಗತ್ಯವಿಲ್ಲ’ ಎಂದು ಕೈ ನಾಯಕರು ಹೇಳಿದರೂ ಅವರಲ್ಲಿದ್ದ ದುಗುಡ ಕಡಿಮೆಯಾದಂತೆ ಕಾಣಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.

ಸಿದ್ದರಾಮಯ್ಯ ಮುಂದೆ ಪರೇಡ್: ಮತ್ತೊಂದು ಬೆಳವಣಿಗೆಯಲ್ಲಿ ಅತೃಪ್ತ ಶಾಸಕರ ಪಟ್ಟಿಯಲ್ಲಿರುವವರನ್ನು ಸಂರ್ಪಸಿದ ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ಆಗಮಿಸಿ ಕಾಣುವಂತೆ ಸೂಚಿಸಿದ್ದರು. ಸಿದ್ದರಾಮಯ್ಯ ಮುಂದೆ ಪರೇಡ್ ನಡೆಸುವುದು ಕೈಪಡೆಯ ಉದ್ದೇಶವಾಗಿತ್ತು. ಆದರೆ, ಶಾಸಕರ ರಾಜೀನಾಮೆ ಬ್ಲಾ್ಯಕ್​ವೆುೕಲ್ ತಂತ್ರ ಎಂಬುದು ಗೊತ್ತಾಗುತ್ತಿದ್ದಂತೆ ಪರೇಡ್ ಕಾರ್ಯಕ್ರಮ ಕೂಡ ರದ್ದಾಯಿತು.

ನಿಲ್ಲದ ಅಂತೆಕಂತೆ!

ಮಂಗಳವಾರ ಅಮಾವಾಸ್ಯೆ ಕಾರಣ ಯಾರೂ ರಾಜೀನಾಮೆ ಕೊಡಲಿಲ್ಲ. ಬುಧವಾರ ಇಲ್ಲವೇ ಗುರುವಾರ ಮತ್ತಿಬ್ಬರು ಶಾಸಕರು ರಾಜೀನಾಮೆ ಕೊಡಬಹುದೆಂಬ ವದಂತಿ ಹರಿದಾಡಿದೆ. ಈ ಪಟ್ಟಿಯಲ್ಲಿ ಮಸ್ಕಿ ಶಾಸಕ ಪ್ರತಾಪ್ ಗೌಡ ಮತ್ತು ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಹೆಸರು ಮುಂಚೂಣಿಯಲ್ಲಿದೆ.

3 ಪಕ್ಷಗಳ ನಿರೀಕ್ಷೆ

1. ಏನೋ ಆಗಿಬಿಡಬಹುದೆಂಬ ಆಸೆಯಲ್ಲಿ ರಾಜ್ಯ ಬಿಜೆಪಿ

2. ಮೋದಿ, ಅಮಿತ್ ಷಾ ಮೇಲೆ ಕಾಂಗ್ರೆಸ್ಸಿಗರಿಗೆ ಅನುಮಾನ

3. ಮೋದಿ, ಷಾಗೆ ಆಸಕ್ತಿ ಇಲ್ಲ ಎಂದು ಜೆಡಿಎಸ್ ನಾಯಕರ ಅಪಾರ ನಂಬಿಕೆ. ಸರ್ಕಾರ ಬಿದ್ದರೆ ಮಧ್ಯಂತರ ಚುನಾವಣೆ ಎಂಬ ನಿರೀಕ್ಷೆ

ಶಾಸಕ ಆನಂದ್ ಸಿಂಗ್ ರಾಜೀನಾಮೆ ಪತ್ರ ತಲುಪಿದೆ. ಎರಡು ರಾಜೀನಾಮೆ ನನ್ನ ಬಳಿ ಇಲ್ಲ. ಫ್ಯಾಕ್ಸ್​ನಲ್ಲಿ ರಾಜೀನಾಮೆ ತೆಗೆದುಕೊಳ್ಳೋಕೆ ನಾನು ಪೋಸ್ಟ್ ಮಾಸ್ಟರ್ ಅಲ್ಲ. ದನಗಳ ರೀತಿಯಲ್ಲಿ ವರ್ತನೆ ಮಾಡೋಕೆ ಆಗೋದಿಲ್ಲ. ನಾನು ಈ ಸದನದ ಸ್ಪೀಕರ್. ನಾನು ತಲೆಬಾಗೋದು ಸಂವಿಧಾನಕ್ಕೆ ಮಾತ್ರ. ಇಲ್ಲಿ ಯಾರ ದೊಡ್ಡಸ್ಥಿಕೆಯೂ ನಡೆಯುವುದಿಲ್ಲ. ನೀತಿ ನಿಯಮಾವಳಿ ಪ್ರಕಾರವೇ ನಾನು ನಡೆದುಕೊಳ್ಳೋದು

| ರಮೇಶ್ ಕುಮಾರ್ ಸ್ಪೀಕರ್

ರಾಜ್ಯದಲ್ಲಿ ಯಾವುದೇ ಎಮರ್ಜೆನ್ಸಿ ಬರಲ್ಲ. ರಮೇಶ್, ಆನಂದ್ ಇಬ್ಬರೂ ಫೋನಿಗೆ ಸಿಗ್ತಿಲ್ಲ. ಅವರ ಜತೆ ನಾನು ಮಾತನಾಡುತ್ತೇನೆ. ಸರ್ಕಾರ ನೂರಕ್ಕೆ ನೂರರಷ್ಟು ಸುಭದ್ರ.

| ಸಿದ್ದರಾಮಯ್ಯ ಮಾಜಿ ಸಿಎಂ

ಯಾರೊಬ್ಬರ ಮನವೊಲಿಸುವ ಅವಶ್ಯಕತೆ ಇಲ್ಲ. ನಾವು ಕಣ್ಣುಮುಚ್ಚಿ ರಾಜ ಕೀಯ ನಡೆಸುತ್ತಿಲ್ಲ. ಯಾರು ಯಾವ ಚೆಸ್ ಪಾನ್ ನಡೆಸುತ್ತಿದ್ದಾರೆ ಗೊತ್ತಿದೆ.

| ಡಿ.ಕೆ.ಶಿವಕುಮಾರ್ ಸಚಿವ

ಗಂಭೀರವೇಕಿಲ್ಲ?

  • ಕೇಂದ್ರ ಬಿಜೆಪಿ ಇಡೀ ಬೆಳವಣಿಗೆ ಯಿಂದ ದೂರ ಇರುವುದು
  • ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ವಿದೇಶ ಪ್ರವಾಸಕ್ಕೆ ತೆರಳಿದ್ದು
  • ರಮೇಶ್ ಜಾರಕಿಹೊಳಿಯನ್ನು ಗಂಭೀರವಾಗಿ ಪರಿಗಣಿಸುವಂತಿಲ್ಲ
  • ಜಿಂದಾಲ್ ವಿಚಾರಕ್ಕಷ್ಟೇ ಸೀಮಿತಗೊಂಡಿರುವ ಆನಂದ್ ಸಿಂಗ್ ರಾಜೀನಾಮೆ
- Advertisement -

Stay connected

278,645FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...