Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕೆಪಿಸಿಸಿ ಪಟ್ಟಾಧಿಕಾರಕ್ಕೆ ಶುರುವಾಗಿದೆ ಭಾರಿ ಪೈಪೋಟಿ!

Thursday, 14.06.2018, 3:03 AM       No Comments

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜವಾಬ್ದಾರಿ ಯಾರ ಹೆಗಲೇರಲಿದೆ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಗರಿಗೆದರಿದೆ. ಇದರೊಂದಿಗೆ ಹಾಲಿ ಅಧ್ಯಕ್ಷ ಡಾ.ಪರಮೇಶ್ವರ್ ಅವರೇ ಮುಂದುವರಿಯುತ್ತಾರೆಂಬ ಊಹಾಪೋಹಕ್ಕೂ ಸ್ಪಷ್ಟ ತೆರೆಬಿದ್ದಿದೆ.

ಕೆಪಿಸಿಸಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗುರುವಾರ (ಜೂ.14) ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಪ್ರಸ್ತುತ ಕೆಪಿಸಿಸಿ ರೇಸ್​ನಲ್ಲಿ ಮುಖಂಡರಾದ ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ, ಹರಿಪ್ರಸಾದ್ ಹೆಸರಿದ್ದು, ಈ ನಾಯಕರು ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ.

ನನ್ನ ಪೈಪೋಟಿ ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಡಾ.ಜಿ.ಪರಮೇಶ್ವರ್ ಅವರನ್ನು ಬುಧವಾರ ಭೇಟಿ ಮಾಡಿ ರ್ಚಚಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಪಿಸಿಸಿಗೆ ಶೀಘ್ರದಲ್ಲೇ ಅಧ್ಯಕ್ಷರ ನೇಮಕ ಆಗಲಿದೆ. ಇದರಲ್ಲಿ ಗುಂಪುಗಾರಿಕೆ ಇಲ್ಲ. ಲೋಕಸಭಾ ಚುನಾವಣೆ ತಯಾರಿ, ಪಕ್ಷ ಬಲವರ್ಧನೆ, ಸಂಘಟನೆ ಆಗಬೇಕಿದೆ. ಎಐಸಿಸಿ ನಿರ್ಧಾರಕ್ಕೆ ತಾವು ಸದಾ ಬದ್ಧ. ಅಧ್ಯಕ್ಷ ಸ್ಥಾನದ ಪೈಪೋಟಿ ಮುಂದುವರಿದಿದೆ. ಆದರೆ ನಾನಂತೂ ಪೈಪೋಟಿ ಮಾಡುವುದಿಲ್ಲ. ಮುಂದೆಯೂ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ’ ಎಂದರು.

ನಾಳೆ 20 ಶಾಸಕರ ಸಭೆ

ಸಚಿವ ಸ್ಥಾನಕ್ಕೆ ಪ್ರಯತ್ನಪಟ್ಟು ವಿಫಲವಾಗಿರುವ ಕಾಂಗ್ರೆಸ್​ನ 20 ಶಾಸಕರು ಶುಕ್ರವಾರ ಒಂದೆಡೆ ಸಭೆ ನಡೆಸಲಿದ್ದಾರೆ. ಇದು ಭಿನ್ನಮತದ ಸಭೆಯಲ್ಲ. ನಿಗಮ, ಮಂಡಳಿ, ಸಂಪುಟದಲ್ಲಿ ಅರ್ಹರಿಗೆ ಸ್ಥಾನಮಾನಕ್ಕಾಗಿ ಒಟ್ಟಾಗಿ ಕೋರಿಕೆ ಇಡಲು ನಿರ್ಧರಿಸಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಮತ್ತಿತರರು ಸಭೆಯ ನೇತೃತ್ವ ವಹಿಸಿದ್ದಾರೆ.

ಮನವೊಲಿಕೆಗೆ ಎಐಸಿಸಿ ಹರಸಾಹಸ

ಸಚಿವಸ್ಥಾನ ಸಿಗದೇ ಅಸಮಾಧಾನ ಹೊರಹಾಕಿರುವ ಶಾಸಕರ ಮನವೊಲಿಸುವ ಕೆಲಸದಲ್ಲಿ ಎಐಸಿಸಿ ನೇರವಾಗಿ ನಿರತವಾಗಿದೆ. ಅತೃಪ್ತರನ್ನು ಕರೆದು ಮಾತನಾಡುವ ಜವಾಬ್ದಾರಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯಗೆ ವಹಿಸಲಾಗಿತ್ತು. ಅವರು ಬಾದಾಮಿಯಲ್ಲೇ ಐದು ದಿನ ಕಳೆದ ಕಾರಣ, ಈ ಜವಾಬ್ದಾರಿಯನ್ನು ಇನ್ನೊಬ್ಬ ಮುಖಂಡ ಡಿ.ಕೆ.ಶಿವಕುಮಾರ್​ಗೆ ವಹಿಸಲಾಗಿತ್ತು. ಈ ನಡುವೆ ರಾಹುಲ್ ಗಾಂಧಿ ಸೂಚನೆಯಂತೆ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಠಾಗೋರ್, ವಿಷ್ಣುನಾಥನ್ ಅವರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಅತೃಪ್ತ ಶಾಸಕರೊಂದಿಗೆ ರ್ಚಚಿಸಿ ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜತೆಗೆ ಪ್ರತಿಯೊಬ್ಬರ ವಿಚಾರವನ್ನು ರಾಹುಲ್ ಬಳಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ. ಮಂಗಳವಾರ ಎಚ್.ಕೆ.ಪಾಟೀಲ್ ಮತ್ತು ಎಂಟು ಶಾಸಕರೊಂದಿಗೆ ರ್ಚಚಿಸಿದ್ದ ಈ ನಾಯಕರು, ಬುಧವಾರ ಸಹ ಕೆಲವು ಶಾಸಕರೊಂದಿಗೆ ರ್ಚಚಿಸಿದರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದೇ ವೇಳೆ ಎಂ.ಬಿ.ಪಾಟೀಲ್ ಬೆಂಗಳೂರಿಗೆ ಆಗಮಿಸಿದ್ದು, ಮುಂದೇನು ಎಂದು ಪಕ್ಷದ ವಿವಿಧ ನಾಯಕರ ಜತೆ ರ್ಚಚಿಸಿದ್ದಾರೆ.

ಸಾಲಮನ್ನಾ ಬಗ್ಗೆ ಸಿಎಂ ನಿರ್ಧರಿಸುತ್ತಾರೆ

ಮೈಸೂರು: ಮುಖ್ಯಮಂತ್ರಿ ಹುದ್ದೆ, ಹಣಕಾಸು ಖಾತೆ ಎರಡೂ ಎಚ್.ಡಿ. ಕುಮಾರಸ್ವಾಮಿ ಬಳಿ ಇವೆ. ಸಾಲಮನ್ನಾ ಬಗ್ಗೆ ಏನು ಮಾಡಬೇಕು, ಏನು ಮಾಡಬಾರದು ಅಂತ ಅವರು ನಿರ್ಧರಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಪಕ್ಷ ಯಾವಾಗಲೂ ರಾಜ್ಯದ ರೈತರ ಪರವಾಗಿರುತ್ತದೆ. ಸದ್ಯದ ಪರಿಸ್ಥಿತಿಗೂ ಹಿಂದಿನ ಸರ್ಕಾರದ ಆಡಳಿತಕ್ಕೂ ಸಂಬಂಧವಿಲ್ಲ. ನನ್ನ ಸರ್ಕಾರದ ಅವಧಿಯಲ್ಲಿದ್ದ ಎಲ್ಲ ಯೋಜನೆಗಳು ಮುಂದುವರಿಯುತ್ತವೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಎಲ್ಲರಿಗೂ ಸಚಿವ ಆಗಬೇಕೆಂಬ ಆಸೆ ಇರುತ್ತದೆ. ಅಂಥ ಸಂದರ್ಭದಲ್ಲಿ ಅತೃಪ್ತಿ, ಅಸಮಾಧಾನ ಸಹಜ. ಯಾರು ಸಚಿವರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಿದೆ. ಹೀಗಿರುವಾಗ ಎಲ್ಲರೂ ಪಕ್ಷದ ನಿರ್ಧಾರ ಗೌರವಿಸಬೇಕಾಗುತ್ತದೆ, ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗುತ್ತದೆ. ಸತೀಶ್ ಜಾರಕಿಹೊಳಿ ವಿಚಾರದಲ್ಲೂ ಹೀಗೆಯೇ ಆಗಿದೆ. ಅಷ್ಟನ್ನು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ ಎಂದರು.

ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ತಪ್ಪಿಸುವ ಕೆಲಸ ನಾನೇಕೆ ಮಾಡಲಿ. ಆ ರೀತಿ ಮಾಡುವ ಹಾಗಿದ್ದರೆ ನಾನು ಎಂದೋ ಸಚಿವನಾಗುತ್ತಿದ್ದೆ. ಹೈಕಮಾಂಡ್ ಆದೇಶದಂತೆ ನಾನು ಸಚಿವನಾಗಿದ್ದೇನೆ.

| ಶಿವಾನಂದ ಪಾಟೀಲ ಆರೋಗ್ಯ ಸಚಿವ

 

ಕಾಂಗ್ರೆಸ್ ಬಿಡುವುದಿಲ್ಲ

ಬೆಳಗಾವಿ: ಸಚಿವ ಸ್ಥಾನ ಸಿಗದ ಕಾರಣ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಇಮೇಲ್ ಮೂಲಕ ರಾಜೀನಾಮೆ ರವಾನಿಸಿದ್ದು, ಅಂಗೀಕರಿಸುವಂತೆ ಕೂಡ ಮನವಿ ಮಾಡಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಡಿಸಿಎಂ ಜಿ.ಪರಮೇಶ್ವರ ಅವರಿಗೂ ತಿಳಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಎಂ.ಬಿ.ಪಾಟೀಲ ಜತೆ ಅತೃಪ್ತ ಶಾಸಕರು ಪೂರ್ಣ ಪ್ರಮಾಣದಲ್ಲಿ ಚರ್ಚೆ ಮಾಡಿಲ್ಲ. ಗುರುವಾರ, ಶುಕ್ರವಾರ (ಜೂ.14, 15) ಬೆಂಗಳೂರಿನಲ್ಲಿ ಮತ್ತೆ ಎಲ್ಲರೂ ಸೇರಿ ರ್ಚಚಿಸಲಿದ್ದೇವೆ. ರಾಹá-ಲ್ ಗಾಂಧಿ ಕಾದು ನೋಡುವಂತೆ ತಿಳಿಸಿದ್ದಾರೆ. ಅದನ್ನು ಮಾಡದೆ ನಮಗೆ ಬೇರೆ ದಾರಿ ಇಲ್ಲ ಎಂದರು. ನನ್ನ ಜತೆ 15 ಶಾಸಕರಿದ್ದಾರೆ. ಅವರಿಗೆ ಉತ್ತಮ ಸ್ಥಾನ ಮಾನ ಕೊಡಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *

Back To Top