ಕುಮಾರಣ್ಣನ ಸರ್ಕಾರಕ್ಕೆ ಕಾಂಗ್ರೆಸ್​ ಟೈಂ ಬಾಂಬ್​ ಫಿಕ್ಸ್​ ಮಾಡಿದೆ, ಲೋಕಸಭಾ ಚುನಾವಣೆ ಡೆಡ್​ಲೈನ್​: ಸಿ.ಟಿ.ರವಿ

ರಾಮನಗರ: ಕುಮಾರಣ್ಣನ ಸರ್ಕಾರಕ್ಕೆ ಟೈಂ ಬಾಂಬ್​ ಫಿಕ್ಸ್​ ಆಗಿದೆ. ಅದನ್ನು ಕಾಂಗ್ರೆಸ್​ ಮುಖಂಡರೇ ಫಿಕ್ಸ್​ ಮಾಡಿದ್ದಾರೆ. ಚುನಾವಣೆ ಬಳಿಕ ಒಂದು ಕ್ಷಣವೂ ಸರ್ಕಾರ ಉಳಿಯುವುದಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ಚುನಾವಣೆ ನಂತರ ಮೈತ್ರಿ ಸರ್ಕಾರ ಉಳಿಯೋಲ್ಲವೆಂದು ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರೇ ನನಗೆ ತಿಳಿಸಿದ್ದಾರೆ. ಈ ಸರ್ಕಾರಕ್ಕೆ ಲೋಕಸಭೆ ಚುನಾವಣೆಯೇ ಡೆಡ್​ಲೈನ್​. ಮೇ 23ರ ಬಳಿಕ ಕಾಂಗ್ರೆಸ್​ನವರೇ ಸರ್ಕಾರವನ್ನು ಉರುಳಿಸುತ್ತಾರೆ ಎಂದಿದ್ದಾರೆ.

ಕೆಲ ನಾಯಕರು ಲಾಭದ ದೃಷ್ಟಿಯಿಂದ ಮೈತ್ರಿ ವಿಶ್ವಾಸದಲ್ಲಿ ಇದ್ದಾರೆ ಅಷ್ಟೇ. ಆದರೆ ಸ್ಥಳೀಯವಾಗಿ ಕಾರ್ಯಕರ್ತರು, ಮುಖಂಡರು ಮೈತ್ರಿಯಾಗಿಲ್ಲ ಎಂದು ಅವರು ಜೆಡಿಎಸ್​, ಬಿಜೆಪಿ ಒಂದಾಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜಕೀಯ ನಿಂತ ನೀರಲ್ಲ. ರಾಷ್ಟ್ರಕ್ಕೆ, ಸಮಾಜಕ್ಕೆ ಅನುಕೂಲವಾಗುವ ನಿರ್ಧಾರವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​-ಜೆಡಿಎಸ್​ನದ್ದು ಸಹಜ ಮೈತ್ರಿಯಲ್ಲ. ಅವರ ರಕ್ತದ ಗುಂಪು ಯಾವಾಗಲೂ ಹೊಂದಾಣಿಕೆಯಾಗೋಲ್ಲ ಎಂದು ಗೇಲಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *