19 C
Bangalore
Thursday, November 14, 2019

ಚುನಾವಣೆಯಲ್ಲಾದರೂ ಜಿಲ್ಲೆಗೆ ಬನ್ನಿ!

Latest News

ಭಾರತ ಮತ್ತು ಚೀನಾ ಸಮುದ್ರಕ್ಕೆ ಸುರಿವ ತ್ಯಾಜ್ಯ ಲಾಸ್​ ಏಂಜಲೀಸ್​ ಸಮುದ್ರ ತಟಕ್ಕೆ ಅಪ್ಪಳಿಸುತ್ತಿದೆ: ಟ್ರಂಪ್​

ನ್ಯೂಯಾರ್ಕ್​: ಭಾರತ ಮತ್ತು ಚೀನಾ ಹವಾಮಾನ ಬದಲಾವಣೆ ತಡೆಗಟ್ಟುವ ನಿಟ್ಟಿನಲ್ಲಿ ಏನೂ ಮಾಡುತ್ತಿಲ್ಲ. ಅವುಗಳು ಸಮುದ್ಯಕ್ಕೆ ಸುರಿಯುತ್ತಿರುವ ತ್ಯಾಜ್ಯ ಲಾಸ್​ ಏಂಜಲಿಸ್​ ಸಮುದ್ರ...

ಬಸ್​-ಟೆಂಪೋ ನಡುವೆ ಭೀಕರ ಅಪಘಾತ ಏಳು ಮಂದಿ ಸಾವು ಹಲವರಿಗೆ ಗಾಯ

ಸಿಕಾರ್: ಬಸ್​ ಹಾಗೂ ಟೆಂಪೋ ನಡುವಿನ ಮುಖಾಮುಖಿ ಅಪಘಾತದಲ್ಲಿ ಏಳುಮಂದಿ ಮೃತಪಟ್ಟಿದ್ದಾರೆ.ರಾಜಸ್ತಾನದ ಸಿಕಾರ್ ಜಿಲ್ಲೆಯ ಖತುಶಮ್ಜಿ ಪಟ್ಟಣದಲ್ಲಿ ಬುಧವಾರ ರಾತ್ರಿ ಘೋರ ಘಟನೆ...

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 400 ಮೀ.ಸ್ಕೇಟಿಂಗ್​ನಲ್ಲಿ ಗಿನ್ನಿಸ್ ದಾಖಲೆ ಬರೆದ ಹುಬ್ಬಳ್ಳಿಯ ಓಜಲ್ ಎಸ್. ನಲವಡಿ

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ 12 ವರ್ಷದ ಬಾಲಕಿ ಓಜಲ್ ಎಸ್.ನಲವಡಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್​ಗಳಲ್ಲಿ 400...

ಮತ ಎಣಿಕೆ ದಿನದಂದೆ ಕಂಪ್ಲಿ ಪುರಸಭೆ ಕಾಂಗ್ರೆಸ್​ ಅಭ್ಯರ್ಥಿ ವಿವಾಹ: ಚುನಾವಣೆಯಲ್ಲಿ ಗೆದ್ದು ಪತ್ನಿಗೆ ಉಡುಗೊರೆ ನೀಡುವ ಸಂಭ್ರಮದಲ್ಲಿ ಅಭ್ಯರ್ಥಿ ರಾಜೇಶ್​

ಬಳ್ಳಾರಿ: ಸ್ಥಳೀಯ ಸಂಸ್ಥೆಯ ಚುನಾವಣೆಯ ಮತ ಎಣಿಕೆ ದಿನದಂದೇ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್​ ಅಭ್ಯರ್ಥಿ ವಿವಾಹವಾಗಿ ಪತ್ನಿಗೆ ಗೆಲುವಿನ ಉಡುಗೊರೆ ನೀಡುವ ಸಂತೋಷದಲ್ಲಿದ್ದಾರೆ.ಕಂಪ್ಲಿ...

ಚಂದ್ರಯಾನ- 3 ಸಿದ್ದತೆಯಲ್ಲಿ ಇಸ್ರೋ: 2020 ನವೆಂಬರ್​ಗೆ ಸಂಪೂರ್ಣ

ಬೆಂಗಳೂರು: ಚಂದ್ರಯಾನ-2 ಮೂಲಕ ಚಂದ್ರನ ಮೇಲೆ ಲ್ಯಾಂಡರ್​ ಇಳಿಸುವಲ್ಲಿ ವಿಫಲವಾಗಿದ್ದ ಇಸ್ರೋ ಮತ್ತೊಂದು ಚಂದ್ರಯಾನಕ್ಕೆ ಸಿದ್ಧತೆ ನಡೆಸಿದೆ. ಚಂದ್ರಯಾನ-3 ಗೆ ಸಿದ್ದತೆ ನಡೆಸಿದ್ದು,...

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಪರೂಪದ ಅತಿಥಿಯಾಗಿದ್ದು, ಚುನಾವಣೆ ಸಮಯದಲ್ಲೂ ಕಾಣಿಸಿಕೊಳ್ಳದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಹುಡುಕಿ ಕೊಡುವಿರಾ ಎಂದು ಪೊಲೀಸ್ ಠಾಣೆಗೆ ದೂರು ಕೊಡುವುದು ಹೊರತುಪಡಿಸಿ ಎಲ್ಲ ರೀತಿಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾಗಿದೆ.

ಮೈತ್ರಿ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆಯಲ್ಲಿ ಚಿಕ್ಕಮಗಳೂರು ಕ್ಷೇತ್ರವನ್ನು ಕಳೆದುಕೊಂಡು ಬೇಸರದಲ್ಲಿರುವ ಮುಖಂಡರು ಮತ್ತು ಕಾರ್ಯಕರ್ತರನ್ನು ಸಮಾಧಾನಪಡಿಸುವ ದೃಷ್ಟಿಯಿಂದಲಾದರೂ ಜಿಲ್ಲೆಗೆ ಬಂದಿಲ್ಲ.

2018ರಲ್ಲಿ ಶೃಂಗೇರಿ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಶೃಂಗೇರಿಯಲ್ಲಿ ಟಿ.ಡಿ.ರಾಜೇಗೌಡರು ಮೊದಲ ಬಾರಿ ಗೆಲುವು ಕಂಡಿರುವುದರಿಂದ ಸಚಿವ ಸ್ಥಾನ ಸಿಕಿಲ್ಲ. ಹೀಗಾಗಿ ಅವರಿಗೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಕಾಂಗ್ರೆಸ್​ನಲ್ಲಿ ಪ್ರಭಾವಿ ನಾಯಕರಾದ ಕೆ.ಜೆ.ಜಾರ್ಜ್ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೈಗಾರಿಕೆ, ಐಟಿ-ಬಿಟಿ ಸಚಿವರಾಗಿದ್ದು ಅವರನ್ನು ಕಾಫಿನಾಡಿಗೆ ಉಸ್ತುವಾರಿಯನ್ನಾಗಿ ಮೈತ್ರಿ ಸರ್ಕಾರ ನಿಯೋಜಿಸಿದೆ. ವ್ಯವಹಾರ ಹಾಗೂ ರಾಜಕೀಯದಲ್ಲಿ ಅತ್ಯಂತ ಹೆಚ್ಚು ಒತ್ತಡದಲ್ಲಿರುವ ಅವರು ಜಿಲ್ಲೆಗೆ ಬರುವುದು ವಿರಳ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಮುಖ್ಯಮಂತ್ರಿ ಬಂದಾಗ ಮಾತ್ರ ಅವರು ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ದಶಕಗಳಿಂದ ಶಕ್ತಿ ಇಲ್ಲದೆ ಮಂಕಾಗಿರುವ ಕಾಂಗ್ರೆಸ್​ಗೆ ಶಕ್ತಿ ತುಂಬ ಬೇಕಾದ ಉಸ್ತುವಾರಿ ಸಚಿವರು, ಇಲ್ಲಿಗೆ ಬರುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳುತ್ತಿರುವುದು ಪಕ್ಷಕ್ಕೆ ಮುಳುವಾಗತೊಡಗಿದೆ. ಕಾಂಗ್ರೆಸ್ ಭದ್ರಕೋಟೆ ಶಿಥಿಲ ಮಾಡಿರುವ ಬಿಜೆಪಿ ವಿರುದ್ಧ ಕಾಯಕರ್ತರ ಪಡೆ ತೊಡೆತಟ್ಟಿ ನಿಂತಿದ್ದರೂ ಅವರಿಗೆ ಬೆಂಬಲ ನೀಡುವ ನಾಯಕ ಇಲ್ಲದಂತಾಗಿದೆ.

ಚುನಾವಣೆ ಬಳಿಕ ಫಲಿತಾಂಶ ಏನೇ ಆಗಲಿ, ಪ್ರಮೋದ್ ಮಧ್ವರಾಜ್ ಮುಂದೆ ಜೆಡಿಎಸ್ ಪಡಸಾಲೆಯಲ್ಲಿಯೇ ಇರಬೇಕಾಗುತ್ತದೆ. ಹೀಗಾಗಿ ಪ್ರಸ್ತುತ ನಡೆಯುವ ಚುನಾವಣೆ ಜೆಡಿಎಸ್ ಬೇರುಗಳನ್ನು ಗಟ್ಟಿಗೊಳಿಸುತ್ತಿದೆಯೆಂಬ ಭಾವನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಂದಿದೆ. ಜಿಲ್ಲೆಯಲ್ಲಿ ಇದ್ದ ಇಬ್ಬರು ಶಾಸಕರನ್ನು ಕಳೆದುಕೊಂಡಿರುವ ಜೆಡಿಎಸ್​ಗೆ ಈಗ ಮತ್ತೆ ಪುಟಿದೇಳಲು ಶಕ್ತಿ ತುಂಬುತ್ತಿರುವುದೇ ಕಾಂಗ್ರೆಸ್. ಬಿಜೆಪಿ ಸೋಲಿಸುವ ಭರದಲ್ಲಿ ಮತ್ತೊಂದು ವೈರಿ ಪಕ್ಷವನ್ನೇ ಬೆಂಬಲಿಸುವುದು ಹೇಗೆಂಬ ಚಿಂತೆ ಕಾರ್ಯಕರ್ತರನ್ನು ಕಾಡತೊಡಗಿದೆ.

ಅಸಮಾಧಾನ ತಣಿಸುವ ಕೆಲಸವಿಲ್ಲ: ಮೈತ್ರಿ ಧರ್ಮದಲ್ಲಿ ಸಿಲುಕಿ ಕಾರ್ಯಕರ್ತರು ಸಂಕಟ ಅನುಭವಿಸುತ್ತಿರುವಾಗಲಾದರೂ ಸಚಿವರು ಜಿಲ್ಲೆಗೆ ಆಗಮಿಸಿ ಅಗತ್ಯ ಭರವಸೆ ನೀಡುವುದನ್ನು ಕಾಂಗ್ರೆಸ್​ನವರು ನಿರೀಕ್ಷಿಸಿದ್ದಾರೆ. ಮೇಲ್ಮಟ್ಟದ ಹಾಗೂ ಜಿಲ್ಲಾ ಮಟ್ಟದ ಕೆಲ ನಾಯಕರು ಮೈತ್ರಿಯಲ್ಲಿ ಒಂದಾಗಿ ಕೆಲಸ ಮಾಡತೊಡಗಿದ್ದಾರೆ. ಆದರೆ, ಕಾರ್ಯಕರ್ತರ ಹಂತದಲ್ಲಿ ಒಂದಾಗಲು ಅವರ ಒಳ ಮನಸ್ಸು ಒಪ್ಪದಾಗಿದೆ.

ಇಂಥ ಇಬ್ಬದಿಯ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಸಮಾಧಾನದ ಜತೆ ಭವಿಷ್ಯದ ಬಗ್ಗೆ ಭರವಸೆ ನೀಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಕಾಣುತ್ತಿಲ್ಲ. ಚುನಾವಣೆಯಲ್ಲಿ ಮುಖಂಡರಿಗಿಂತ ಕಾರ್ಯಕರ್ತರೇ ಮನೆ ಮನೆಗೆ ಹೋಗಿ ಮತಯಾಚನೆ ಮಾಡಲು ಸಾಧ್ಯ. ಕಾರ್ಯಕರ್ತರು ಮನೆ ಬಳಿ ಬಂದು ಮತಯಾಚನೆ ಮಾಡುವುದು ಮತದಾರರಲ್ಲಿ ಪರಿಣಾಮ ಬೀರುತ್ತದೆ. ಆದರೆ, ಇನ್ನೂ ಜೆಡಿಎಸ್ ಹೊರುತುಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮತದಾರನ ಮನೆ ಬಾಗಿಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇವರೆಲ್ಲರಿಗೂ ಸ್ಪೂರ್ತಿ ತುಂಬಿ ಚುನಾವಣೆ ಸಮರದಲ್ಲಿ ಮಾರ್ಗದರ್ಶನ ಮಾಡಬೇಕಾದ ನಾಯಕನಿಲ್ಲ.

ಕಾರ್ಯಕರ್ತರು ಅನ್ಯ ಪಕ್ಷಗಳತ್ತ: ಪಕ್ಷದ ತಳಮಟ್ಟದಲ್ಲಿ ಪಿಲ್ಲರ್​ಗಳಂತಿರುವ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಹಂಚಿ ಹೋಗುತ್ತಿರುವುದು ಕಾಂಗ್ರೆಸ್​ಗೆ ಸಮಸ್ಯೆಯಾಗತ್ತಿದೆ. ಕಡೂರಿನಲ್ಲಿ ಜಿಪಂ ಸದಸ್ಯರೊಬ್ಬರು ಬಹಿರಂಗವಾಗಿಯೇ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ.

ಹೀಗೆ ಹಲವು ತಾಲೂಕುಗಳಲ್ಲಿ ಕೈ ಕಾರ್ಯಕರ್ತರ ಪಡೆ ಸದ್ದಿಲ್ಲದೆ ಪಲಾಯನ ಮಾಡುತ್ತಿದೆ. ಪಕ್ಷದಲ್ಲಿ ಸೈನಿಕರಂತೆ ಕೆಲಸ ಮಾಡುವ ಕಾರ್ಯಕರ್ತರ ಸಂಖ್ಯೆ ಈಗಾಗಲೆ ಕಡಿಮೆ ಇದೆ. ಇವರು ಸಹ ವಲಸೆ ಹೋಗಲಾರಂಭಿಸಿದರೆ ಕಾಂಗ್ರೆಸ್ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆಂಬ ಅಭಿಪ್ರಾಯವೂ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

ಹೆಸರಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಾರ್ಜ್ ಬಗ್ಗೆ ಪಕ್ಷದೊಳಗೆ ಅಸಮಾಧಾನದ ಹೊಗೆ ಏಳಲಾರಂಭಿಸಿದೆ. ಆಡಳಿತದ ಜತೆ ಪಕ್ಷ ಕಟ್ಟಬೇಕೆಂಬ ಆಪೇಕ್ಷೆ ಕಾರ್ಯಕರ್ತರಲ್ಲಿದೆ. ಆದರೆ, ಕಳೆದ ಎಂಟು ತಿಂಗಳಿಂದ ಸಚಿವರು ಕಾರ್ಯಕರ್ತರನ್ನು ಪಕ್ಷ ಬೆಳವಣಿಗೆಗೆ ಸಜ್ಜುಗೊಳಿಸುವ ಕೆಲಸ ಮಾಡದಿರುವುದು ನಿರಾಸೆ ತಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮೈತ್ರಿ ಸರ್ಕಾರ ಬೆಂಗಳೂರು ಚುನಾವಣೆ ಜವಾಬ್ದಾರಿ ನೀಡಿದ್ದು, ಇಲ್ಲಿಗೆ ಬರಲಾಗುತ್ತಿಲ್ಲ. ಉಡುಪಿ-ಚಿಕ್ಕಮಗಳೂರಿಗೆ ಸಚಿವೆ ಜಯಮಾಲಾರನ್ನು ನಿಯೋಜಿಸಲಾಗಿದೆ. ಇಲ್ಲಿಯ ತನಕ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಜಯಮಾಲಾ ಅವರು ಶುಕ್ರವಾರದಿಂದ ಮಲೆನಾಡಲ್ಲಿ ಪ್ರಚಾರದಲ್ಲಿ ಭಾಗಿಯಾಗುವರು. ಕೆಳ ಹಂತದ ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯ ನಡೆಯುತ್ತಲೆ ಇದೆ.

| ಡಾ. ಡಿ.ಎಲ್.ವಿಜಯಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

- Advertisement -

Stay connected

278,449FansLike
559FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...