ತಮ್ಮ ಅಭಿವೃದ್ಧಿಗಾಗಿ ಮಂಡ್ಯಕ್ಕೆ ಬರುತ್ತಿರುವ ಎಚ್‌ಡಿಕೆ: ಮಾಜಿ ಸಿಎಂ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದ್ಯಾವಪ್ಪ ಟೀಕೆ

Congress criticism against HDK Mandya

ಮಂಡ್ಯ: ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮಂಡ್ಯಗೂ ಏನು ಸಂಬAಧ?. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವಕ್ಕಾಗಿ ಅಲ್ಲ, ತಮ್ಮ ಅಭಿವೃದ್ಧಿಗಾಗಿ ಬಂದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಟೀಕಿಸಿದರು.
ಎಚ್‌ಡಿಕೆ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಅವರ ಕೊಡುಗೆ ಏನು?. ಪದೆ ಪದೇ ಸುಳ್ಳು ಹೇಳುತ್ತಾ, ಭರವಸೆಗಳಲ್ಲೇ ಕಾಲ ಕಳೆದಿದ್ದಾರೆ. ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ರೋಸಿ ಹೋಗಿರುವ ಮಂಡ್ಯ ಜನರು ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅಪ್ಪಟ ಮಂಡ್ಯ ಜಿಲ್ಲೆಯವರಾಗಿದ್ದು, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಇದೀಗ ದೊಡ್ಡ ಯಶಸ್ವಿ ಉದ್ಯಮಿಯಾಗಿದ್ದಾರೆ. ಹೀಗಾಗಿ ಅವರನ್ನು ಗೆಲ್ಲಿಸಲು ಜಿಲ್ಲೆಯ ಕಾರ್ಯಕರ್ತರು, ಜನರು ಪಕ್ಷಾತೀತ ಮತ್ತು ಧರ್ಮಾತೀತವಾಗಿ ಮತ ಹಾಕುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಶಕುಂತಲಾ, ಸೋನಿಯಾ ಬ್ರಿಗೇಡ್‌ನ ವೀಣಾ ಶಂಕರ್, ಬಸವರಾಜು, ಮಂಜು ಹಾಜರಿದ್ದರು.

Share This Article

ಬಿಳಿ vs ಗುಲಾಬಿ: ಯಾವ ಬಣ್ಣದ ಡ್ರ್ಯಾಗನ್​ ಫ್ರೂಟ್ಸ್ ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Dragon fruit

ಡ್ರ್ಯಾಗನ್​ ಫ್ರೂಟ್ಸ್ ( Dragon fruit ) ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲೇ ತನ್ನದೇಯಾದ…

International Coffee Day : ಬೆಕ್ಕಿನ ಮಲದಿಂದ ತಯಾರಿಸುವ ಬಿಸಿ ಬಿಸಿ ‘ಕಾಫಿ’ ಗೆ ಭಾರಿ ಡಿಮ್ಯಾಂಡ್​​….

ಬೆಂಗಳೂರು: (International Coffee Day )  ಕಾಫಿಯ  ( Coffee ) ಕ್ರೇಜ್  ಎಷ್ಟರ ಮಟ್ಟಿಗೆ…

Life Partner Secrets : ನಿಮ್ಮ ಹೆಂಡ್ತಿಯ ಮುಂದೆ ಈ ವಿಚಾರ ಮುಚ್ಚಿಟ್ರೆ ಕಾದಿದೆ ಅಪಾಯ!

ಬೆಂಗಳೂರು: ದಾಂಪತ್ಯ ಎನ್ನುವುದು ಸುಂದರವಾದ ಬಂಧವಾಗಿದೆ. ದಂಪತಿಗಳ ಮಧ್ಯೆ ಪ್ರೀತಿ, ಹೊಂದಾಣಿಕೆ ಮುಖ್ಯವಾಗಿದೆ. ಚಾಣಕ್ಯನ ನೀತಿಶಾಸ್ತ್ರದಲ್ಲಿ…