More

    ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ

    ಬಾಗಲಕೋಟೆ: ವ್ಯಕ್ತಿಗ್ಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವ ಸಿದ್ಧಾಂತ ನನ್ನದು. ನಾನು ಯಾವುದೇ ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ. ಸ್ಥಾನಮಾನ ಕೇಳಿಲ್ಲ. ನಾನು ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ. ಈ ವದ್ಧಂತಿ ಸುಳ್ಳು. ನನ್ನ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ೧೫ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ ಮನವಿ ಮಾಡಿದರು.

    ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡುವದಿಲ್ಲ. ಪಕ್ಷ ನನಗೆ ಎಲ್ಲ ಗೌರವ ನೀಡಿದೆ. ಸ್ಥಾನಮಾನ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ. ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಪಕ್ಷ, ಸರ್ಕಾರಕ್ಕೆ ಅಗೌರವ ತೋರುವ ಕೆಲಸ ಮಾಡಿಲ್ಲ. ಮಾಡುವುದು ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ನೋವು ಆಗಿದ್ದು ನಿಜ:

    ಪಕ್ಷದಿಂದ ನನಗೆ ಅನ್ಯಾಯವಾಗಿಲ್ಲ, ಒಂದಿಬ್ಬರು ನಾಯಕರಿಂದ ನನಗೆ ಅನ್ಯಾಯವಾಗಿದೆ. ನಾನು ಕಾಂಗ್ರೆಸ್ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಹೋಗುವದಿಲ್ಲ. ನನಗೆ ಆರು ಬಾರಿ ಅನ್ಯಾಯವಾಗಿದೆ. ಧರ್ಮ ವಿಭಜಕರಿಂದ ನನಗೆ ಅನ್ಯಾಯವಾಗಿದೆ. ಸಧ್ಯ ಧರ್ಮ ವಿಭಜಕರ ಕೈ ಮೇಲಾಗಿದೆ. ದೃವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು ನನ್ನ ಮನಸ್ಸಿಗೆ ನೋವಾಗಿತ್ತು. ಹಾಗಾಗಿ ನಾನು ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಿರಲಿಲ್ಲ. ಇನ್ನು ಮುಂದೆ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯ ಆರಂಭಿಸುತ್ತೇನೆ ಎಂದ ಅವರು, ಎಂ.ಬಿ ಪಾಟೀಲ ಹೆಸರು ಪ್ರಸ್ತಾಪಿಸದೇ, ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

    ಧರ್ಮ ಜೋಡಿಸಲು ಹೋಗಿದ್ದೇ ನನಗೆ ಮುಳುವಾಯ್ತಾ? ಅನಿಸಿತ್ತು. ಯಾರೋ ಒಂದಿಬ್ಬರಿಂದ ಮೋಸ ಆಗಿದೆಯಂತ, ಪಕ್ಷವನ್ನೇ ದೂಷಣೆ ಮಾಡವನಲ್ಲ ನಾನು. ಸುಧೀರ್ಘ ೪೦ ವರ್ಷ ಕಾಲ ಪಕ್ಷದಲ್ಲಿದ್ದೇನೆ. ಪಕ್ಷ ಬಿಡಲು ನನ್ನ ಮನಸ್ಸು ಒಪ್ಪಲ್ಲ. ಪಕ್ಷಕೊಟ್ಟ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ. ಬಿಜೆಪಿಯಿಂದ ಆವ್ಹಾನ ಬಂದಿರಬಹುದು. ಆದರೇ ಹೋಗಲ್ಲ. ನಮ್ಮ ಪ್ರಗತಿ ಸಹಿಸದ ಒಂದಿಬ್ಬರು ನಾಯಕರಿಂದ ನನಗೆ ಮೋಸವಾಗಿದೆ. ಪ್ರದೇಶಿಕ ಅಸಮಾನತೆ ಹೋಗಲಾಡಿಸಲು ನನ್ನ ಹೋರಾಟ ನಿಲ್ಲದು. ವಿಧಾನಸೌಧದ ಒಳಗೆ ಅವಕಾಶ ವಂಚಿತನಾದರು. ವಿಧಾನಸೌದ ಹೊರಗಡೆಯಿಂದ ಪ್ರದೇಶಿಕ ಅಸಮಾನತೆ ವಿರುದ್ಧ ಹೋರಾಟ ಮಾಡುತ್ತೇನೆ. ದಯವಿಟ್ಟು ನನ್ನ ಹಿತೈಸಿಗಳು, ಅಭಿಮಾನಿಗಳು ಪಕ್ಷ ಬಿಡಬೇಡಿ, ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನ ಬೆಂಬಲಿಸಿ ಎಂದು ಮನವಿ ಮಾಡಿದರು.

    ಕಾಂಗ್ರೆಸ್ ಮುಖಂಡರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜೆ.ಟಿ.ಪಾಟೀಲ, ಎಚ್.ವೈ.ಮೇಟಿ, ಬಸವಪ್ರಭು ಸರನಾಡಗೌಡ, ನಾಗರಾಜ ಹದ್ಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts