ಬಿಜೆಪಿ ವಿರುದ್ಧ ಮೈತ್ರಿ ಯುದ್ಧ

ವಿಜಯವಾಣಿ ಸುದ್ದಿಜಾಲ ಬೀದರ್
ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಂಗಳವಾರ ನಾಮಪತ್ರ ಸಲ್ಲಿಸಿದರು.

ನಗರದಲ್ಲಿ ಮೆರವಣಿಗೆ, ಬೃಹತ್ ಸಮಾವೇಶ ಆಯೋಜಿಸುವ ಮುಖಾಂತರ ಶಕ್ತಿ ಪ್ರದರ್ಶನ ನಡೆಸಿ ಪ್ರಮುಖ ಎದುರಾಳಿ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದರು.

ತೆರೆದ ವಾಹನದಲ್ಲಿ ಜೋರ್ದಾರ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಖಂಡ್ರೆ ಚುನಾವಣಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರಿಗೆ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಲೋಕಸಭಾ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾಜರ್ುನ ಖಗರ್ೆ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಬಂಡೆಪ್ಪ ಖಾಶೆಂಪುರ, ರಾಜಶೇಖರ ಪಾಟೀಲಗಗ, ರಹೀಮ್ ಖಾನ್, ಶಿವಾನಂದ ಪಾಟೀಲ್ ಸೇರಿ ಮೈತ್ರಿ ಪಕ್ಷದ ಹಲವು ಮುಖಂಡರು ಪಾಲ್ಗೊಂಡಿದ್ದರು. ನಂತರ ನ್ಯಾಷನಲ್ ಕಾಲೇಜು ಆವರಣದಲ್ಲಿ ಮೈತ್ರಿ ಪಕ್ಷದ ಸಮಾವೇಶ ನಡೆಯಿತು.

ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾಜರ್ುನ ಖಗರ್ೆ ಇತರರು ಮಾತನಾಡಿ, ಬಿಜೆಪಿ, ಆರೆಸ್ಸೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಾತಿ, ಧರ್ಮ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಕೇವಲ ಸುಳ್ಳು ಹೇಳಿಕೆ ನೀಡುತ್ತ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಐದು ವರ್ಷದಲ್ಲಿ ದೇಶದ ವ್ಯವಸ್ಥೆಯೇ ಹಾಳು ಮಾಡಿದ್ದಾರೆ. ಇವರಿಗೆ ಮತ್ತೆ ಅವಕಾಶ ಕೊಟ್ಟರೆ ದೇಶದ ಗತಿ ಅಧೋಗತಿಯಾಗಲಿದೆ. ಇದು ನಿಣರ್ಾಯಕ ಚುನಾವಣೆ. ಬಿಜೆಪಿಯನ್ನು ಮನೆಗೆ ಕಳಿಸಲು ಜನತೆ ನಿರ್ಧರಿಸಿದ್ದಾರೆ ಎಂದರು.

ಹಿಂದೆಂದೂ ಆಗದಂತಹ ಅಭಿವೃದ್ಧಿ ಕೆಲಸ ಕಳೆದೈದು ವರ್ಷಗಳಲ್ಲೇ ಮಾಡಿದ್ದೇವೆ ಎಂದು ಪ್ರಧಾನಿ ಬೀಗುತ್ತಿರುವುದು ಅರ್ಥಹೀನ. ಸ್ವಾತಂತ್ರೃ ನಂತರ ದೇಶ ಅನೇಕ ಪ್ರಗತಿ ಸಾಧಿಸಿದೆ. ಹತ್ತಾರು ಕ್ರಾಂತಿಕಾರಿ ಕೆಲಸಗಳಾಗಿವೆ. ನಾನಾ ಕ್ಷೇತ್ರಗಳಲ್ಲಿ ಹಲವಾರು ದಾಖಲೆ ನಿಮರ್ಿಸಲಾಗಿದೆ. ಇದೆಲ್ಲ ಯಾರು ಮಾಡಿದ್ದು? ಆವಾಗ ಬಿಜೆಪಿ ಎಲ್ಲಿತ್ತು? ಮೋದಿ ಎಲ್ಲಿದ್ದರು? ದಿನಬೆಳಗಾದರೆ ನೀವಾಡುವ ಸುಳ್ಳಿನ ಮಾತು ಈಗ ಯಾರೂ ನಂಬಲ್ಲ. ದೇಶದ ಜನತೆ ಎಲ್ಲವೂ ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಿ ದಯನೀಯ ಸ್ಥಿತಿಗೆ ತಳ್ಳಲಿದ್ದಾರೆ. ಬಿಜೆಪಿಗೆ ಅಧಿಕಾರದಿಂದ ದೂರವಿಡುವ ಸಂಕಲ್ಪ ಜನತೆ ಮಾಡಿದ್ದು, ಇದಕ್ಕೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಅಭ್ಯರ್ಥಿ ಈಶ್ವರ ಖಂಡ್ರೆ ಮಾತನಾಡಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ಶಾಸಕರಾದ ಬಿ. ನಾರಾಯಣರಾವ, ಡಾ. ಅಜಯಸಿಂಗ್, ಆನಂದ ನ್ಯಾಮಗೌಡ, ವಿಜಯಸಿಂಗ್, ಶರಣಪ್ಪ ಮಟ್ಟೂರ್, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಮಾಜಿ ಶಾಸಕರಾದ ಅಶೋಕ ಖೇಣಿ, ಎಂ.ಜಿ. ಮುಳೆ, ಬಿ.ಆರ್. ಪಾಟೀಲ್, ಕೈಲಾಸನಾಥ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಮುಖಂಡರಾದ ಬಸವರಾಜ ಬುಳ್ಳಾ, ಪುಷ್ಪಾ ಅಮರನಾಥ, ತಿಪ್ಪಣ್ಣಪ್ಪ ಕಮಕನೂರ, ಕೇದಾರಲಿಂಗಯ್ಯ ಹಿರೇಮಠ, ಚಂದ್ರಾಸಿಂಗ್, ವಿಜಯಕುಮಾರ ಕೌಡಾಳ್ ಸೇರಿ ಮೈತ್ರಿ ಪಕ್ಷದ ಜಿಲ್ಲೆಯ ಬಹುತೇಕ ಮುಖಂಡರು ಇದ್ದರು.