More

  ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವು ನಿಶ್ಚಿತ

  ಚಿಕ್ಕಮಗಳೂರು: ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳು ಪ್ರತಿ ಮನೆಗಳನ್ನು ತಲುಪಿವೆ. ಈ ಬಾರಿ ಕಾಂಗ್ರೆಸ್ ಪರವಾಗಿ ಮತದಾರರು ಮತದಾನ ಮಾಡಲಿದ್ದು, ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ವಿಶ್ವಾಸ ವ್ಯಕ್ತಪಡಿಸಿದರು.
  ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆ ಅವರು ಈ ಹಿಂದೆ 20 ತಿಂಗಳು ಸಂಸದರಾಗಿದ್ದಾಗ ಕಡೂರು, ಮೂಡಿಗೆರೆ, ಬಿಸಿ ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಮಂಜೂರಾತಿಗೆ ಕಾರಣರಾಗಿದ್ದಾರೆ. ಅಡಕೆ ಆಮದು ಶುಲ್ಕ ಹೆಚ್ಚಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜಯಪ್ರಕಾಶ್ ಹೆಗ್ಡೆ ಮಂಜೂರು ಮಾಡಿದ್ದ ರಸ್ತೆ ಕಾಮಗಾರಿಗಳು ಶೋಭಾ ಕರಂದ್ಲಾಜೆ ಕಾಲದಲ್ಲಿ ಅಪೂರ್ಣವಾಗಿವೆ. ಅವುಗಳು ಪೂರ್ಣಗೊಳ್ಳಲು ಮತ್ತೊಮ್ಮೆ ಜಯಪ್ರಕಾಶ್ ಹೆಗ್ಡೆ ಸಂಸದರಾಗಿ ಆಯ್ಕೆಯಾಗಬೇಕು ಎಂದು ಹೇಳಿದರು.
  ಕಾಂಗ್ರೆಸ್ ಭರವಸೆ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸಂಪೂರ್ಣ ಜಾರಿ ಮಾಡಿದೆ. ಎಐಸಿಸಿಯಿಂದ ಲೋಕಸಭಾ ಚುನಾವಣೆಗೆ ಭರವಸೆಯಾಗಿ ಪಂಚನ್ಯಾಯ ಯೋಜನೆ ಘೋಷಿಸಲಾಗಿದೆ. ಯುವ ನ್ಯಾಯ, ಮಹಿಳಾ ನ್ಯಾಯ ಯೊಜನೆಯಲ್ಲಿ ಪ್ರತಿ ವರ್ಷ 1ಲಕ್ಷ ರೂ. ನೀಡಲಾಗುವುದು. ರೈತ ನ್ಯಾಯದಲ್ಲಿ ರೈತ ಸಮುದಾಯದ ಸಾಲಮನ್ನಾ, ಶ್ರಮಿಕ ನ್ಯಾಯದಲ್ಲಿ ದಿನಕ್ಕೆ ಕೂಲಿ 400 ರೂ. ನಿಗದಿ ಮಾಡಲಾಗುವುದು. ಜಾತಿಗಣತಿ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದು ತಿಳಿಸಿದರು.
  ಕಾಂಗ್ರೆಸ್ ಮುಖಂಡರಾದ ಸತೀಶ್, ಗಂಗಾಧರ್ ಇದ್ದರು.

  See also  VIDEO: ರಂಜಾನ್​ ದಿನವೇ ನಗರಸಭೆ ಹಾಲಿ-ಮಾಜಿ ಸದಸ್ಯರ ನಡುವೆ ಮಾರಾಮಾರಿ: 12 ಮಂದಿ ಆಸ್ಪತ್ರೆಗೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts