ಭಾರತ್​ ಬಂದ್​ ದಿನದಂದೇ ಇಂಧನ ದರದಲ್ಲಿ ದಾಖಲೆಯ ಏರಿಕೆ!

ನವದೆಹಲಿ: ಇಂಧನ ದರ ಏರಿಕೆ ವಿರೋಧಿಸಿ ಇಂದು ಭಾರತ್​​ ಬಂದ್​ ಪ್ರತಿಭಟನೆ ನಡೆಯುತ್ತಿದ್ದರೆ, ಇದರ ನಡುವೆಯೇ ಮತ್ತೆ ಪೆಟ್ರೋಲ್​ ಡೀಸೆಲ್​ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡಿದೆ.

ಇಂಧನ ದರವನ್ನು ಜಿಎಸ್​ಟಿ ಅಡಿಯಲ್ಲಿ ತರಬೇಕು ಇಲ್ಲವಾದಲ್ಲಿ ಭಾರತ್​ ಬಂದ್​ ಮಾಡುವುದಾಗಿ ಕಾಂಗ್ರೆಸ್​, ಕೇಂದ್ರ ಸರ್ಕಾರವನ್ನು ಎಚ್ಚರಿಸಿತ್ತು. ಸುಮಾರು 20 ರಾಜಕೀಯ ಪಕ್ಷಗಳು ಬಂದ್​ಗೆ ಬೆಂಬಲ ಸೂಚಿಸಿದ್ದು, ಇಂದು ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.

ಈ ಮಧ್ಯೆ ಇಂಧನ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಪ್ರತಿ ಲೀಟರ್​ ಪೆಟ್ರೋಲ್​ಗೆ 0.23 ಪೈಸೆ ಹಾಗೂ ಡೀಸೆಲ್​ಗೆ 0.22 ಪೈಸೆ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 80.73 ರೂ. ಇದ್ದು, ಡೀಸೆಲ್​ಗೆ 72.83 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 88.12 ರೂ. ಇದ್ದು, ಡೀಸೆಲ್​ಗೆ 77.32 ರೂ. ಗೆ ಏರಿಕೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತೈಲ ದರ ಬಿಸಿ ತಟ್ಟಿದ್ದು, ಡೀಸೆಲ್ ಪ್ರತಿ ಲೀಟರ್​ಗೆ 75.23 ರೂ. ಹಾಗೂ ಪೆಟ್ರೋಲ್ 83 .43 ರೂ. ದಾಖಲೆಯ ಏರಿಕೆ ಕಂಡಿದೆ. (ಏಜೆನ್ಸೀಸ್)