ಬೇರೆ ಪಕ್ಷದವರೊಂದಿಗೆ ಊಟ ಮಾಡಿದ್ದು ಸರಿಯಲ್ಲ

ಬೀಳಗಿ:ಸರ್ಕಾರವೇ ಬೇರೆ, ರಾಜಕೀಯ ಪಕ್ಷ ಗಳೇ ಬೇರೆ. ಸ ರ್ಕಾರಿ ಕಾರ್ಯ ಕ್ರಮಕ್ಕೆಂದು ಬಂದಾಗ ಒಂದು ಪಕ್ಷದ ಕಾರ್ಯಾಲ ಯಕ್ಕೆ ಹೋಗಿ ಸಚಿವರು ಊಟ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಬೇರೆ ಬೇರೆಯಾದರೂ ರಾಜಕಾರಣದ ಮಧ್ಯೆ ವೈಯಕ್ತಿಕ ,ಖಾಸಗಿ ಸಂದರ್ಭಗಳಿರುತ್ತವೆ. ಬೇರೆ ಪಕ್ಷದ ಮುಖಂಡರ ಶುಭ ಸಮಾರಂಭ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಅದರೆ ಸರ್ಕಾರದ ಒಂದು ಭಾಗವಾಗಿ ಸರ್ಕಾರಿ ಕಾರ್ಯಕ್ರಮಕ್ಕೆ ಅಗಮಿಸಿದ ವೇಳೆ ಸ್ವಂತ ಪಕ್ಷದ ಕಾರ್ಯಾಲಯವೇ ಇರಲಿ ಅಥವಾ ಬೇರೆ ಪಕ್ಷದ ಕಾರ್ಯಾಲಯವೇ ಇರಲಿ ಅಲ್ಲಿಗೆ ಹೋಗುವುದು, ಊಟ ಮಾಡುವುದು ಸರಿಯಲ್ಲ. ಅವರ ಖಾಸಗಿ ಮನೆಗೆ ಸೌಜನ್ಯಕ್ಕಾಗಿ ಹೋಗಬಹುದು ಎಂದು ಹೇಳಿದರು.

ಬರ ವೀಕ್ಷಣೆಗೆ ಆಗಮಿಸಿದ ಕಂದಾಯ ಸಚಿವರು ಬೇರೆ ಪಕ್ಷದ ಕಾರ್ಯಾಲಯಕ್ಕೆ ತೆರಳಿದ್ದರಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮನೆ ಮಾಡಿ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದು ತಿಳಿದು ಬಂದಿದೆ. ಅವರೊಂದಿಗೆ ರ್ಚಚಿಸಿ ಸಮಾಧಾನಪಡಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *