ಭಾರತ್​ ಬಂದ್​ ಹೆಸರಲ್ಲಿ ಆಟೋ ಚಾಲಕರಿಂದ ಹಣ ಸುಲಿಗೆ

ಧಾರವಾಡ: ಭಾರತ್​ ಬಂದ್​ ಅನ್ನು ಬಂಡವಾಳ ಮಾಡಿಕೊಂಡಿರುವ ಆಟೋ ಚಾಲಕರು ಸಾರ್ವನಿಕರಿಂದ ಸಿಕ್ಕಾಪಟ್ಟೆ ಹಣ ಸುಲಿಗೆ ಮಾಡುತ್ತಿದ್ದಾರೆ.

ತೈಲ ದರ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಇಂದು ದೇಶದ್ಯಾಂತ ಭಾರತ್​ ಬಂದ್​ಗೆ ಕಾಂಗ್ರೆಸ್​ ಕರೆ ನೀಡಿದ್ದು, ಬಂದ್​ಗೆ ಹಲವು ಸಂಘಟನೆಗಳ ಸಾಥ್​ ನೀಡಿವೆ. ಆದರೆ, ಬಂದ್​ ಹೆಸರಲ್ಲಿ ಹುಬ್ಬಳ್ಳಿಯ ಆಟೋ ಚಾಲಕರು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ಹುಬ್ಬಳ್ಳಿಯಿಂದ ಧಾರವಾಡಕ್ಕೆ ಡ್ರಾಪ್​ ಮಾಡಲ 500-600 ರೂ.ವರೆಗೂ ಬೇಡಿಕೆ ಇಟ್ಟಿದ್ದಾರೆ. ಉಳಿದ ದಿನಗಳಲ್ಲಿ ಕೇವಲ 150 ರೂ ಪಡೆಯುತ್ತಿದ್ದ ಆಟೋ ಚಾಲಕರು, ಬಂದ್​ ಹಿನ್ನೆಲೆಯಲ್ಲಿ ಸಾರ್ವಜನಿಕ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಈ ದೃಶ್ಯ ದಿಗ್ವಿಜಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. (ದಿಗ್ವಿಜಯ ನ್ಯೂಸ್​)