ಕಾಂಗ್ರೆಸ್​ನಲ್ಲಿರುವ ದುರಹಂಕಾರಿಗಳು ನಮ್ಮನ್ನು ವಂಚಿಸಿದರು, ಹಾಗಾಗಿ ಅದರೊಂದಿಗೆ ಮೈತ್ರಿ ಮಾಡಿಕೊಳ್ಳಲಿಲ್ಲ: ಅಖಿಲೇಶ್​ ಯಾದವ್

ಕಾನ್ಪುರ: ಕಾಂಗ್ರೆಸ್​ನಲ್ಲಿರುವ ದುರಹಂಕಾರಿ ಮುಖಂಡರು ಸಮಾಜವಾದಿ ಪಕ್ಷವನ್ನು ವಂಚಿಸಿದರು. ಆದ್ದರಿಂದ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾಗಿ ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ತಿಳಿಸಿದ್ದಾರೆ.

ಕಾನ್ಪುರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಂಡಿದ್ದೆವು. ಆದರೆ, ಆಗ ಕಾಂಗ್ರೆಸ್​ನವರು ದುರಹಂಕಾರಿಗಳು ಎಂಬುದು ಗೊತ್ತಿರಲಿಲ್ಲ. ದುರಹಂಕಾರದ ವರ್ತನೆ ತೋರುವುದರಿಂದ ಮೈತ್ರಿಕೂಟದಲ್ಲಿ ಸಾಮರಸ್ಯ ಉಳಿಯುವುದಿಲ್ಲ. ಈ ವಿಷಯ ತಿಳಿದಿದ್ದರೂ ಅವರಿಗೆ ದುರಹಂಕಾರದ ವರ್ತನೆಯೇ ಎಲ್ಲಕ್ಕಿಂತ ಮುಖ್ಯವಾಗಿತ್ತು ಎಂದು ಹೇಳಿದರು.

ಹಿಂದಿನ ಈ ಅನುಭವದಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದೆವು. ಅದರ ಬದಲು ಬಹುಜನಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡೆವು ಎಂದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *