ಜಂಟಿ ಸುದ್ದಿಗೋಷ್ಠಿಯಲ್ಲಿ ಕುರ್ಚಿಗಾಗಿ ಕಾಂಗ್ರೆಸ್​-ಜೆಡಿಎಸ್​ ಮುಖಂಡರ ವಾಗ್ವಾದ

ಮೈಸೂರು: ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಒಗ್ಗಟ್ಟು ಪ್ರದರ್ಶಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೈ ಮತ್ತು ಜೆಡಿಎಸ್​ ಮುಖಂಡರು ಕುರ್ಚಿಗಾಗಿ ವಾಗ್ವಾದ ನಡೆಸಿದ ಘಟನೆ ನಡೆದಿದೆ.

ಜೆಡಿಎಸ್​ ನಾಯಕ ನಾರಾಯಣ್​ ಮತ್ತು ಶಾಸಕ ತನ್ವೀರ್​ ಸೇಠ್​ ನಡುವೆ ವಾಗ್ವಾದ ನಡೆದಿದೆ. ವೇದಿಕೆ ಮೇಲೆ ಅವಕಾಶ ನೀಡಲು ಆಗಲ್ಲ ಅಂದರೆ ಯಾಕೆ ಕರೆಯುತ್ತೀರಿ ಎಂದು ಜೆಡಿಎಸ್​ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವ ಜಿ.ಟಿ. ದೇವೇಗೌಡ ಅವರು ಜೆಡಿಎಸ್​ ಮುಖಂಡರನ್ನು ಗದರಿ ಸುಮ್ಮನಾಗಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಚಿವ ಸಾ.ರಾ. ಮಹೇಶ್​, ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​, ಮಾಜಿ ಸಚಿವ ಮಹದೇವಪ್ಪ, ಮೈತ್ರಿ ಅಭ್ಯರ್ಥಿ ವಿಜಯ್​ ಶಂಕರ್​ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *