ಮಂಡ್ಯ: ಇಂದಿನ ದಿನಗಳಲ್ಲಿ ತಾಯಿತನದ ಸಾಹಿತ್ಯ ಹುಟ್ಟಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಲೋಕಾರ್ಪಣೆ, ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬುದ್ದ ಬಸವ ಅಂಬೇಡ್ಕರ್ ಬದುಕಿರುವುದೇ ದಲಿತತ್ವದಲ್ಲಿಯೇ ಹೊರತು ಇನ್ನಾವುದರಲ್ಲಿಯೂ ಇಲ್ಲ ಎಂದರು.
ಅಗತ್ಯವಾಗಿರುವುದನ್ನ ತಿರಸ್ಕಾರ ಮಾಡುತ್ತಿದ್ದೇವೆ. ದೇಶ ಕೋಶಕ್ಕೂ ನಮಗೂ ಸಂಬಂಧ ಇದೆ ಎಂದು ಭಾವಿಸಬೇಕು. ನಮ್ಮನ್ನು ಬಿಟ್ಟು ದೇಶವಿಲ್ಲ, ದೇಶಬಿಟ್ಟು ನಾವಿಲ್ಲ ಅಂದುಕೊಂಡಾಗ ಮಾತ್ರ ಭಯ, ಪ್ರೀತಿಗಳು ಹುಟ್ಟಲಿಕ್ಕೆ ಸಾಧ್ಯವಿದೆ. ಇದ್ದರಿಂದ ಅದು ಸ್ಮಶಾನಕ್ಕೆ ಸಮಾನ. ಭಾರತಕ್ಕೆ ಬೆಳಕಾದ ಬುದ್ದ, ಬಸವ, ಅಂಬೇಡ್ಕರ್ ಅವರನ್ನು ನೆನೆಯದೇ ಯಾವೂದು ನಡೆಯದು. ಅಮ್ಮನಿಲ್ಲದ ಮನೆ ಹೇಗಿದೆಯೋ ಹಾಗೇ ಅಂಬೇಡ್ಕರ್ ಇಲ್ಲದ ವಿಚಾರ ದೇಶವು ಅನಾಥವಾಗುತ್ತದೆ. ಅವರ ಸತ್ಯವನ್ನು ಸಾರ್ವತ್ರಿಕರಣ ಮಾಡಬೇಕಿದೆ ಎಂದರು.
ರಂಗತಜ್ಞ ಡಾ.ರಾಜಪ್ಪ ದಳವಾಯಿ ಮಾತನಾಡಿ, 1874ರಲ್ಲಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಮೀಸಲಾತಿ ನೀಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ. ಇಂದು ಶೇ.3.ರಷ್ಟು ಜನಸಂಖ್ಯೆಯಿರುವವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಇದು ಅವೈಜ್ಞಾನಿಕ. ಇಂದಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ. ಇಂದಿನ ದಿನಗಳಲ್ಲಿ ಎಲ್ಲ ಜಾತಿಯರಿಗೂ ಮೀಸಲಾತಿ ಇದೆ. ಅದು ಎಸ್ಸಿ, ಎಸ್ಟಿಗಳಿಂದ ಮೀಸಲಾತಿ ಇದೆ ಎಂದುಕೊಂಡಿರುವುದು ಅಜ್ಞಾನ. ದಲಿತ ಸಾಹಿತ್ಯ ಪರಿಷತ್ ಉತ್ತಮ ಕಾರ್ಯಮಾಡಲಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕಿ ಮಲ್ಲಾಜಮ್ಮ, ನಿವೃತ್ತ ಪ್ರಾಂಶುಪಾಲ ಪ್ರೊ.ಹುಲ್ಕೆರೆ ಮಹದೇವು, ನಿವೃತ್ತ ಪ್ರಾಂಶುಪಾಲ ಪ್ರೊ. ಬಿ.ಎಸ್.ಚಂದ್ರಶೇಖರನ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ, ನಿವೃತ್ತ ಉಪನ್ಯಾಸಕ ಗುರುಮೂರ್ತಿ, ದಸಾಪ ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ, ರಾಮದೇವರಾಕೆ, ಹುರುಗಲವಾಡಿ ರಾಮಯ್ಯ, ಎನ್.ನಾಗರಾಜು, ಮಂಜುಳಾ, ಸಿ.ಎಂ.ನರಸಿಂಹಮೂರ್ತಿ, ಕೀಲಾರ ಕೃಷ್ಣೇಗೌಡ, ದೇವರಾಜು ಕೊಪ್ಪ, ಮಹದೇವು ಕೊತ್ತತ್ತಿ ಇತರರಿದ್ದರು. ಇದೇ ಸಂದರ್ಭದಲ್ಲಿ ದಸಾಪ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳಿಗೆ ನೇಮಕಪತ್ರ ನೀಡಲಾಯಿತು.
ಪ್ರಸ್ತುತ ತಾಯಿಯನದ ಸಾಹಿತ್ಯ ಹುಟ್ಟಲಿ: ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಕಿವಿಮಾತು

You Might Also Like
ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season
rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…
ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips
Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…