ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆ; ಅನರ್ಹ ಶಾಸಕ ಬಿ.ಸಿ.ಪಾಟೀಲ್​ಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​

ಹಾವೇರಿ: ಇಂದು ಸಚಿವ ಸಂಪುಟ ರಚನೆಯಾಗಿದ್ದು 17 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮಾಜಿ, ಅನರ್ಹ ಶಾಸಕ ಬಿ.ಸಿ.ಪಾಟೀಲ್​ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯದ ಪೋಸ್ಟ್ ಕಾಣಿಸಿಕೊಳ್ಳುತ್ತಿದೆ.

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಶಾಸಕರಲ್ಲಿ ಬಿ.ಸಿ.ಪಾಟೀಲ್​ ಕೂಡ ಒಬ್ಬರಾಗಿದ್ದರು. ಅವರು ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದವರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅವರ ನಿವಾಸಕ್ಕೆ ಹೋಗಿ ಶುಭಹಾರೈಸಿದ್ದರು.

ಇಂದು ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಬಿ.ಸಿ.ಪಾಟೀಲ್​ ಅವರನ್ನು ಉಲ್ಲೇಖಿಸಿ ವ್ಯಂಗ್ಯ ಮಾಡಲಾಗುತ್ತಿದೆ. ಹಾವೇರಿ ಕಾಂಗ್ರೆಸ್​ಗೆ ಸಂಬಂಧಪಟ್ಟ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪೋಸ್ಟ್​ ಹಾಕಲಾಗುತ್ತಿದೆ. ಬಿ.ಸಿ.ಪಾಟೀಲ್​ ಅವರೇ ಸಚಿವರಾಗಿ ಆಯ್ಕೆಯಾಗಿದ್ದಕ್ಕೆ ಹಾರ್ದಿಕ ಅಭಿನಂದನೆಗಳು ಎಂದು ಪೋಸ್ಟ್​ ಮಾಡಲಾಗಿದ್ದು ಅದಕ್ಕೆ ಟೀಕಾಯುಕ್ತ ಕಾಮೆಂಟ್​ಗಳು ಹರಿದುಬಂದಿವೆ.

ಅಭಿನಂದನೆಗಳು, ಹೋಮ್​ ಮಿನಿಸ್ಟರ್​ ಬಿ.ಸಿ.ಪಾಟೀಲ್​ ಅವರಿಗೆ, ಲೋಕೋಪಯೋಗಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್​ ಅವರಿಗೆ ಅಭಿನಂದನೆಗಳು ಎಂಬಿತ್ಯಾದಿ ಕಾಮೆಂಟ್​ಗಳನ್ನು ಬರೆಯಲಾಗುತ್ತಿದೆ.

 

Leave a Reply

Your email address will not be published. Required fields are marked *