ನವದೆಹಲಿ: ಭಾರತದ ಪ್ರಧಾನಿಯಾಗಿ ಐದು ವರ್ಷ ಆಡಳಿತ ನಡೆಸಿ ಮತ್ತೊಂದು ಅವಧಿಗೆ ಆಯ್ಕೆಯಾಗಿರುವ ನರೇಂದ್ರ ಮೋದಿಯವರು ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.
ಮೇ 23ರಂದು 17 ನೇ ಲೋಕಸಭೆ ಚುನಾವಣೆಯ ಫಲಿತಾಂಶ ಅಧಿಕೃತ ಘೋಷಣೆ ಆಗುವುದಕ್ಕೂ ಮೊದಲೇ ಇಸ್ರೇಲ್, ಶ್ರೀಲಂಕಾ, ಪಾಕಿಸ್ತಾನ, ಜಪಾನ್, ಚೀನಾ ಹೇಗೆ ವಿವಿಧ ರಾಷ್ಟ್ರಗಳ ಅಧ್ಯಕ್ಷ, ಪ್ರಧಾನ ಮಂತ್ರಿಗಳು ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. ಅವರೆಲ್ಲರಿಗೂ ಪ್ರತಿಯಾಗಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
ಹಾಗೇ ಇಂದು ಬೆಳಗ್ಗೆ ಮಲೇಷಿಯಾದ ಪ್ರಧಾನಮಂತ್ರಿ, ಪಾಕತಾನ್ ಹರಪನ್ ಮುಖ್ಯಸ್ಥ ಮಹತೀರ್ ಮೊಹಮದ್ ಅವರೂ ಕೂಡ ಮೋದಿಯವರಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದ ಸ್ಪಷ್ಟ ಜಯಸಾಧಿಸಿದ ನಿಮಗೆ ಶುಭಾಶಯಗಳು. ವ್ಯವಹಾರ ಮತ್ತು ಉದ್ಯಮಗಳಲ್ಲಿ ನಮ್ಮೆರಡು ದೇಶಗಳ ಸ್ನೇಹ, ಸಹಕಾರ ಬಲಗೊಳ್ಳಿಸಿಕೊಳ್ಳುವುದನ್ನು ಎದುರುನೋಡುತ್ತಿದ್ದೇನೆ ಎಂದಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿಯವರು, ಪ್ರಧಾನಮಂತ್ರಿಗಳೇ ನಿಮ್ಮ ಹಾರೈಕೆಗೆ ಧನ್ಯವಾದ. ಕಳೆದ ವರ್ಷ ನಿಮ್ಮೊಂದಿಗೆ ನಡೆಸಿದ್ದ ಮಾತುಕತೆಯ ಸಂದರ್ಭವನ್ನು ನೆನಪಿಸಿಕೊಳ್ಳುತ್ತೇನೆ. ಮಲೇಷಿಯಾದೊಂದಿಗೆ ಬಹುಮುಖಿ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಬದ್ಧ ಎಂದಿದ್ದಾರೆ.
ಪಾಕತಾನ್ ಹರಪನ್ ಮುಖ್ಯಸ್ಥ ಮಹತೀರ್ ಮೊಹಮದ್ ಅವರು ಇತ್ತೀಚೆಗಷ್ಟೇ ಮಲೇಷಿಯಾದ ಏಳನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Thank you Prime Minister Mahathir for your greetings! I fondly recall our meeting last year and look forward to working closely with you for further strengthening our multifaceted relations with Malaysia in all spheres. @chedetofficial https://t.co/AuHqXoX1rq
— Narendra Modi (@narendramodi) May 26, 2019