ಬೆಂಗಳೂರು: ಜಾಲತಾಣದಲ್ಲಿ ಆಗಾಗ ಸದ್ದು ಮಾಡುವ ಡೈಲಾಗ್‌ಗಳು ಸಿನಿಮಾ ಟೈಟಲ್ ಆಗುತ್ತಿರುವುದು ಇತ್ತೀಚೆಗಿನ ಬೆಳವಣಿಗೆ. ಈಗಾಗಲೇ ಈ ತರಹದ ಕೆಲ ಶೀರ್ಷಿಕೆಗಳು ನೋಂದಣಿಯಾಗಿವೆ. ಈ ಮಧ್ಯೆ, ‘ಕಂಗ್ರಾಜುಲೇಷನ್ಸ್ ಬ್ರದರ್’ ಎಂಬ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ, ಬಿಡುಗಡಗೆ ಸಿದ್ಧವಾಗಿದೆ. ವಿಭಿನ್ನ ಕಥಾ ಹಂದರದ ಈ ಚಿತ್ರಕ್ಕೆ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದಿದ್ದು, ಪ್ರತಾಪ್ ಗಂಧರ್ವ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಿರಿಯ ನಟ ಶಶಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಟ ರಕ್ಷಿತ್ ನಾಗ್ ನಾಯಕನಾಗಿದ್ದು, ಅವರಿಗೆ ‘ಕೆಟಿಎಂ’ ಖ್ಯಾತಿಯ ಸಂಜನಾ ದಾಸ್, ಅನುಷಾ ಜೋಡಿಯಾಗಿದ್ದಾರೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ತಿಂಗಳು ದುಬೈನಲ್ಲಿ ಮೊದಲ ಸಾಂಗ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಹರಿ ಸಂತೋಷ್, ‘ಹುಡುಗರಿಗೆ ಹುಡುಗಿಯರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ ‘ಕಂಗ್ರಾಲುಜೇಷನ್ ಬ್ರದರ್’ ಎನ್ನುತ್ತಾರೆ. ಅಂತಹದೇ ಸಂದರ್ಭವನ್ನು ಇಲ್ಲಿ ಚಿತ್ರಿಸಲಾಗಿದೆ. ಕಾರವಾರ, ಬೆಂಗಳೂರು ಸೇರಿ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು. ಶಶಿಕುಮಾರ್, ‘ಚಿತ್ರ ಮಾಡುವಾಗ ಪಕ್ಕಾ ಪ್ಲ್ಯಾನ್ ಇರಬೇಕು. ಅಂದುಕೊಂಡ ದಿನದಲ್ಲಿ ಹೆಚ್ಚು ಕಡಿಮೆ ಮುಗಿಸಿದರೆ ನಿರ್ಮಾಪಕರಿಗೂ ಅನುಕೂಲ. ನಾವೆಲ್ಲ ಚಿತ್ರರಂಗಕ್ಕೆ ಬಂದಾಗ ಪಕ್ಕಾ ಪ್ಲಾನಿಂಗ್ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು. ಅಂತಹುದೇ ವಾತಾವರಣ ಚಿತ್ರರಂಗದಲ್ಲಿ ಬರಬೇಕು. ಈ ಚಿತ್ರದಲ್ಲಿ ನಾನು ನಾಯಕನ ತಂದೆಯ ಪಾತ್ರ ಮಾಡಿದ್ದೇನೆ’ ಎಂದರು. ರಕ್ಷಿತ್ ನಾಗ್, ‘ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನಾಯಕನಾಗಿ ಇದು ಮೊದಲ ಸಿನಿಮಾ. ಹರಿ ಸಂತೋಷ್ ಬರವಣಿಗೆ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದೇನೆ. ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗುತ್ತೆ ಎನ್ನುವುದು ಚಿತ್ರದ ತಿರುಳು’ ಎಂದು ಮಾಹಿತಿ ನೀಡಿದರು.
‘ಕಂಗ್ರಾಜುಲೇಷನ್ಸ್ ಬ್ರದರ್’ಗೆ ಕುಂಬಳಕಾಯಿ: ಚಿತ್ರೀಕರಣ ಪೂರ್ಣಗೊಳಿಸಿದ ತಂಡ

You Might Also Like
ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips
Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…
Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು
Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…
ಬೇಸಿಗೆಯಲ್ಲಿ ಜಿಮ್ಗೆ ಹೋಗುವ ಮೊದಲು ಸುಸ್ತಾಗುತ್ತೀದ್ರೆ ಈ ಜ್ಯೂಸ್ಗಳನ್ನು ಒಮ್ಮೆ ಟ್ರೈ ಮಾಡಿ, ದಣಿವು ದೂರವಾಗುವುದು ಖಂಡಿತ!Pre Workout Drinks
Pre Workout Drinks: ಬೇಸಿಗೆಯ ಬಿಸಿಲಿನಲ್ಲಿ ಸ್ವಲ್ಪ ದೂರ ನಡೆದರೂ ಸಹ ದೇಹವು ದಣಿಯುತ್ತದೆ, ಬಾಯಾರಿಕೆ…