ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು, ಸುಮಲತಾ ಬೆಂಬಲಿಗರ ನಡುವೆ ಹೊಡೆದಾಟ

ಮಂಡ್ಯ: ದೊಡ್ಡರಸಿನಕರೆಯಲ್ಲಿ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಸವನಪುರದಲ್ಲಿ ಮತ್ತೆ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್​ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.

ಬಸವನಪುರದ ಮತಗಟ್ಟೆ ಸಂಖ್ಯೆ 107ರಲ್ಲಿ ಘಟನೆ ನಡೆದಿದ್ದು, ಸುಮಲತಾ ಪರ ಇದ್ದ ಚುನಾವಣಾ ಏಜೆಂಟ್​ ಚನ್ನಬಸವಣ್ಣ ಎಂಬುವರ ಮೇಲೆ ಜೆಡಿಎಸ್​ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಚನ್ನಬಸವಣ್ಣ ಅವರ ಶರ್ಟ್​ ಹರಿದು ಮುಖಕ್ಕೆ ಗಾಯ ಆಗುವ ಹಾಗೆ ಹಲ್ಲೆ ನಡೆಸಿದ್ದಾರೆ.

ಜೆಡಿಎಸ್​ ಕಾರ್ಯಕರ್ತರು ವಯಸ್ಸಾದವರನ್ನು ಕರೆದುಕೊಂಡು ಹೋಗುತ್ತಾರೆ. ಆದರೆ, ಹಿರಿಯ ನಾಗರಿಕರಿಗೆ ವೋಟು ಹಾಕಲು ಅವಕಾಶ ಕೊಡದೆ ತಾವೇ ಮತದಾನ ಮಾಡುತ್ತಿದ್ದಾರೆ ಎಂದು ಸುಮಲತಾ ಬೆಂಬಲಿಗರು ಆರೋಪಿಸಿದ್ದಾರೆ.

ಬೂತ್ ಒಳಗೇ ಗಲಾಟೆ ನಡೆದರೂ ಪೊಲೀಸ್​ ಸಿಬ್ಬಂದಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಭದ್ರತೆಗಾಗಿ ಸ್ಥಳದಲ್ಲಿ ಒಬ್ಬರೇ ಪೇದೆಯನ್ನು ನೇಮಿಸಿದ್ದರಿಂದ ಗಲಾಟೆ ತಪ್ಪಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

One Reply to “ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು, ಸುಮಲತಾ ಬೆಂಬಲಿಗರ ನಡುವೆ ಹೊಡೆದಾಟ”

  1. This is the credibility of Ex Prime Minister Devegowda and sons grandsons etc cannot fight against widow. Sumalatha is a Onake obavva where as Devegowda is Tippu so called tiger who kept his two sons as mortgage in return for his life. Madam I salute you from the bottom of my heart

Leave a Reply

Your email address will not be published. Required fields are marked *