ಮರೆಯಾದ ಎಸ್‌ಎಂಕೆ ನೀರವ ಮೌನ: ಕಳಚಿದ ಸಂಭಾವಿತ ರಾಜಕಾರಣದ ಕೊಂಡಿ

Condolences to SM Krishna Mandya

ಮಂಡ್ಯ: ಮಂಡ್ಯದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹಿರಿಯ ಮುತ್ಸದ್ದಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಕಳೆದುಕೊಂಡು ಜಿಲ್ಲೆಯಲ್ಲಿ ನೀರವ ಮೌನದಲ್ಲಿ ಮುಳುಗಿದೆ.
ಸಂಭಾವಿತ, ಸಜ್ಜನ ರಾಜಕಾರಣದ ಹೆಗ್ಗುರುತಿನಂತಿದ್ದ ಎಸ್‌ಎಂಕೆ ಸಾವು ಜಿಲ್ಲೆಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಜಿಲ್ಲೆಯ ಪುತ್ರನ ಅಗಲಿಕೆ ಸಹಿಸಿಕೊಳ್ಳುವುದು ಕಷ್ಟ ಎನಿಸುತ್ತಿದೆ. ಆದರೂ ರಾಜ್ಯಕ್ಕೆ ಅಭೂತಪೂರ್ವ ಕೊಟ್ಟ ಕಾರ್ಯಕ್ರಮದ ಮೂಲಕ ಸದಾ ಜೀವಂತವಾಗಿರುತ್ತಾರೆ.
ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರ ಸಾವು ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾದ್ಯಂತ ಸಂತಾಪ ಸಭೆಗಳನ್ನು ಆಯೋಜಿಸಲಾಗಿತ್ತು. ಮಾತ್ರವಲ್ಲದೆ ಎಂಎಸ್‌ಕೆ ಅವರ ಸಾಧನೆಯನ್ನು ಮೆಲುಕು ಹಾಕಲಾಯಿತು. ನಗರದ ಗಾಂಧಿಭವನದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಮಹಾತ್ಮ ಗಾಂಧಿ ಭವನ ಸ್ಮಾರಕ ಟ್ರಸ್ಟ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪುಷ್ಪನಮನ ಸಲ್ಲಿಸಲಾಯಿತು.
ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ಪ್ರಸ್ತುತ ದಿನಗಳಲ್ಲಿನ ರಾಜಕಾರಣಿಗಳಿಗೆ ಮುತ್ಸದ್ದಿ ನಾಯಕ ಎಸ್.ಎಂ.ಕೃಷ್ಣ ಮಾದರಿ ನಾಯಕರಾಗಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದ ಎಸ್‌ಎಂಕೆ ಅವರು ನೀಡಿದ ಕೊಡುಗೆ ಜನ ಮನ್ನಣೆ ಪಡೆದಿವೆ ಎಂದು ನುಡಿದರು.
ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಕದಂಬಸೈನ್ಯ ಬೇಕ್ರಿ ರಮೇಶ್, ಸಾಹಿತಿ ಲಿಂಗಣ್ಣ ಬಂಧೂಕರ್, ಶಿಕ್ಷಕಿ ಉಷಾರಾಣಿ, ಕಲಾವಿದ ಕೆಂಚೇಗೌಡ, ಅವಿನಾಶ್, ಕೆಂಪೇಗೌಡ, ಸಾತನೂರು ಜಯರಾಂ, ಅಂಕರಾಜು, ಮಂಜುಳಾ, ಲೋಕೇಶ್ ಇತರರಿದ್ದರು.

Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…