ಸಿದ್ದಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ

ಶ್ರೀರಂಗಪಟ್ಟಣ: ಕಾಯಕಯೋಗಿ ಡಾ. ಶಿವಕುಮಾರಸ್ವಾಮಿ ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಬೀದಿಬದಿ ಯುವ ವ್ಯಾಪಾರಿಗಳಿಂದ ಭಾವಪೂರ್ಣ ಶ್ರದ್ದಾಂಜಲಿ.

ಪಟ್ಟಣದ ಅಂಬೇಡ್ಕರ್ (ಪೊಲೀಸ್ ಠಾಣೆ) ವೃತ್ತದಲ್ಲಿ ಸೋಮವಾರ ರಾತ್ರಿ ಶ್ರೀಗಳ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದ ಯುವಕರು.

ಪಟ್ಟಣದ ಸ್ಥಳಿಯ ಯುವಕರಾದ ಹರೀಶ, ಚಂದ್ರು, ಮನು ಸುರೇಶ, ಗೌತಮ್ ರಾಘು ಮತ್ತು ಶಿವು ನಡೆದಾಡುವ ದೇವರು, ತ್ರಿವಧ ದಾಸೋಹಿ ಶ್ರೀ ಡಾ.ಶಿವಕುಮಾರಸ್ವಾಮಿಗಳ ಭಾವಚಿತ್ರದ ಕೆಳಗೆ ನಂದಾದೀಪ ಬೆಳಗಿ ಅರ್ಥಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.