ಹೆತ್ತೂರಿನಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ

ಸಕಲೇಶಪುರ: ತ್ರಿವಿಧ ದಾಸೋಹಿ, ನೆಡೆದಾಡುವ ದೇವರು, ಶತಾಯುಷಿ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಹೆತ್ತೂರು ಸಾರ್ವಜನಿಕರು ಗ್ರಾಮದ ವೃತ್ತದಲ್ಲಿ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು.

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಮಾಜ ಸೇವೆಯನ್ನು ಸ್ಮರಿಸಿ ಎರಡು ನಿಮಿಷ ಮೌನಾಚರಣೆ ಮಾಡಿ ಅಗಲಿದ ದಿವ್ಯ ಚೇತನಕ್ಕೆ ನಮನ ಅರ್ಪಿಸಿದರು. ನಂತರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಹೆತ್ತೂರು ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಾತನಾಡಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶತಾಯುಷಿ, ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದರು. ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಹಿರಿಯರಾದ ರಾಜೇಗೌಡ, ಪತ್ರಕರ್ತ ರವಿಕುಮಾರ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಸದನ, ಗ್ರಾಪಂ ಮಾಜಿ ಸದಸ್ಯ ಕೃಷ್ಣಪ್ಪ, ಬಿಜೆಪಿ ಮುಂಖಡ ಮೋಹನ್ ಕುಮಾರ್, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು, ಹಾಡ್ಲಹಳ್ಳಿ ರಾಜು, ತಾಲೂಕು ಯುವ ರೈತ ಸಂಘದ ಅಧ್ಯಕ್ಷ ಡೀಲಾಕ್ಷ, ಸೂರಜ್, ಉಪನ್ಯಾಸಕ ಗಂಗಾಧರ್ ಇತರರಿದ್ದರು.

Leave a Reply

Your email address will not be published. Required fields are marked *