ಛಾಯಾಗ್ರಾಹಕರ ಮೇಲಿನ ಹಲ್ಲೆಗೆ ಖಂಡನೆ

1 Min Read
ಛಾಯಾಗ್ರಾಹಕರ ಮೇಲಿನ ಹಲ್ಲೆಗೆ ಖಂಡನೆ
ಬೆಂಗಳಳೂರಿನಲ್ಲಿ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿರುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕು ಛಾಯಾಗ್ರಾಹಕರ ಸಂಘದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಕನ್ನಡ ಪ್ರಮೋದ, ಬಾಲಸುಬ್ರಹ್ಮಣ್ಯ, ಮನೋಜ್, ರಘುರಾಮ್, ಪ್ರಕಾಶ್ ಸೇರಿದಂತೆ ಇತರರು ಇದ್ದರು.

ಎಚ್.ಡಿ. ಕೋಟೆ: ಮದುವೆ ಮನೆಯಲ್ಲಿ ಕರ್ತವ್ಯನಿರತ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕು ಛಾಯಾಗ್ರಾಹಕರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು ನಗರದ ಛಾಯಾಗ್ರಾಹಕರ ಸಂಘದ ಸದಸ್ಯರ ತಂಡದವರು ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಮಯದಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದವರ ವಿರುದ್ಧ ಅಸಭ್ಯವಾಗಿ ನಡೆದುಕೊಂಡಿರುವುದು ತೀವ್ರ ಖಂಡನೀಯ ಎಂದು ಸಂಘದ ಮಾಜಿ ಅಧ್ಯಕ್ಷ ಕನ್ನಡಪ್ರಮೋದ್ ಅಸಮಾಧಾನ ವ್ಯಕ್ತಪಡಿಸಿದರು.
ಛಾಯಾಗ್ರಾಹಕ ಮತ್ತು ವಿಡಿಯೊ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಪ್ರತಿಯೊಂದು ಕಲ್ಯಾಣ ಮಂಟಪದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ದಂಡಾಧಿಕಾರಿ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿದರು. ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷ ಮನೋಜ್, ರಘುರಾಮ್, ಪ್ರಕಾಶ್, ಹೊನ್ನೇಗೌಡ ಮಾದಾಪುರ, ನಾಗೇಂದ್ರ, ಸ್ಟುಡಿಯೋ ಸ್ವಾಮಿ, ವೆಂಕಿ, ಕುಮಾರ್, ಸೋಮೇಶ್, ಪ್ರತಾಪ, ನಂಜುಂಡ, ಗುರು, ಸಂತೋಷ್ ಇದ್ದರು.

See also  ಸಾಧಕರಿಗೆ ಪ್ರಶಸ್ತಿ ದೊರೆಯುವಂತಾಗಲಿ
Share This Article