
ಎನ್.ಆರ್.ಪುರ: ತೀರ್ಥಹಳ್ಳಿಯಲ್ಲಿ ವಕೀಲರ ಸಂಘದ ಸದಸ್ಯ ಮಧುಕರ್ ಮಯ್ಯ ಅವರ ಮೇಲೆ ಸೀಬಿನಕೆರೆ ಸಮೀಪ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದ್ದು, ಕೂಡಲೇ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ, ಬುಧವಾರ ತಾಲೂಕು ವಕೀಲರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ತಹಸೀಲ್ದಾರ್ ತನುಜ.ಟಿ.ಸವದತ್ತಿಗೆ ಮನವಿ ಸಲ್ಲಿಸಿದರು.
ನಂತರ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವುವ ಮೂಲಕ ಎಲ್ಲ ವಕೀಲರುಗಳು ತೀರ್ಥಹಳ್ಳಿ ವಕೀಲರ ಸಂಘಕ್ಕೆ ನೈತಿಕ ಬೆಂಬಲ ಸೂಚಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು, ಕಾರ್ಯದರ್ಶಿ ಎಂ.ಆರ್.ಶಿವಪ್ರಸಾದ್, ಖಜಾಂಚಿ ಎಚ್.ಎಂ.ಬಸವರಾಜ್, ಎಸ್.ಎಸ್.ಸಂತೋಷ್‌ಕುಮಾರ್ ಇದ್ದರು.