ಬೆಂಗಳೂರು: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಎದುರಾಳಿಗಳ ಪದಪ್ರಯೋಗಕ್ಕೆ ಉಪ ಚುನಾವಣೆ ಫಲಿತಾಂಶದ ಬಳಿಕ ಸಮಜಾಯಿಷಿ ನೀಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇತರೆ 2 ಕ್ಷೇತ್ರಗಳ ಉಪ ಚುನಾವಣೆಗಳಿಗಿಂತ ಚನ್ನಪಟ್ಟಣ ಕ್ಷೇತ್ರವು ರಾಜ್ಯದ ಗಮನವನ್ನು ಸೆಳೆದಿದೆ. ಚನ್ನಪಟ್ಟಣದಲ್ಲಿ ಹಲವಾರು ರೀತಿಯಲ್ಲಿ ಕಾಂಗ್ರೆಸ್ ಎದುರಾಳಿಗಳ ಪದಪ್ರಯೋಗ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ಮೇಲೆ, ದೇವೇಗೌಡರ ಆರೋಗ್ಯ, ಪಕ್ಷದ ಹಲವು ನಿರ್ಧಾರಗಳು ಹಾಗೂ ಹಲವು ನಾಯಕರ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ.
ಅವರ ಬೆಳವಣಿಗೆಗೆ ನಮ್ಮಿಂದ ತೊಂದರೆಯಾಯಿತು ಎಂಬ ಪ್ರಸ್ತಾಪವನ್ನು ಮಾಡಿದ್ದಾರೆ. ಸಮುದಾಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಅವರ ಎಲ್ಲ ಟೀಕೆ- ಟಿಪ್ಪಣಿಗಳನ್ನು ನೋಟ್ ಮಾಡಿಟ್ಟುಕೊಂಡಿದ್ದೇನೆ. ನ.13ರಂದು ಚುನಾವಣೆ ಮುಗಿದ ಬಳಿಕ ಹಾಗೂ ನ.23ರಂದು ಲಿತಾಂಶ ಪ್ರಕಟವಾದ ಬಳಿಕ ಎಲ್ಲದಕ್ಕೂ ಸಮಜಾಯಿಸಿ ಕೊಡುತ್ತೇನೆ ಎಂದರು.