ಕಂಪ್ಯೂಟರ್ ಉತಾರ ನೀಡಲು ಒತ್ತಾಯ

ಜಮಖಂಡಿ: ತಾಲೂಕಿನ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಗಾಂವಠಾಣ ಆಸ್ತಿಯ ಕಂಪ್ಯೂಟರ್ ಉತಾರಗಳು ದೊರೆಯುವಂತೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ಶಿವಾನಂದ ನಾಯ್ಕಲರಮಠ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಪಂಗಳಲ್ಲಿ ದಾಖಲಾಗಿರುವ ಗಾಂವಠಾಣ ಆಸ್ತಿ ಸಂಖ್ಯೆಗಳನ್ನು ನಮೂದಿಸಿ ಮೊದಲು ಕೈ ಬರಹ ಉತಾರ ನೀಡಲಾಗುತ್ತಿತು. ಆದರೆ ಈಗ ಗಣಕೀಕರಣ ಮಾಡಿದ್ದರಿಂದ ಬಡವರು, ದಲಿತರು, ನಿರ್ಗತಿಕ ಮಹಿಳೆಯರು ಪರದಾಡುವಂತಾಗಿದೆ. ಸರ್ಕಾರ ಕೂಡಲೇ ಗ್ರಾಪಂದಲ್ಲಿನ ಗಾಂವಠಾಣ ಆಸ್ತಿಗಳನ್ನು ಬಾಬ್ತು ಅಳತೆ ಮಾಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಒಂದು ವರ್ಷದಿಂದ ಉತಾರ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಗ್ರಾಮಿಣ ಭಾಗದ ಭೂ ರಹಿತರು ಅರ್ಜಿ ಸಲ್ಲಿಸಿ ಪರದಾಡುವಂತಾಗಿದೆ. ಆರ್ಥಿಕ ಅಡಚಣೆಗಾಗಿ ಸಾಲ, ನ್ಯಾಯಾಲಯ ಇತರೆ ಕಾರ್ಯಗಳಿಗೆ ಕಂಪ್ಯೂಟರ್ ಉತಾರ ಕೇಳುವುದು ಕಡ್ಡಾಯವಾಗಿರುವುದರಿಂದ ಸರ್ಕಾರ ಕೂಡಲೇ ಬಾಬ್ತು ಅಳತೆ ಮಾಡಿ ಕಂಪ್ಯೂಟರ್ ಉತಾರ ನೀಡುವ ಪ್ರಕ್ರಿಯೆ ಆರಂಭಿಬೇಕು ಎಂದು ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ತಾಲೂಕು ಸಂಚಾಲಕ ಸುರೇಶ ಮೀಶಿ, ಬಸವರಾಜ ದೊಡಮನಿ, ಮಲ್ಲು ಕಾಂಬಳೆ, ಮುತ್ತು ಹರಿಜನ, ಶ್ಯಾಮರಾವ ಮಾದರ, ಯಲ್ಲಪ್ಪ ಕಾಂಬಳೆ, ಧರ್ಮಣ್ಣ ಕಾಂಬಳೆ, ರವಿ ಚಲವಾದಿ, ಇತರರು ಒತ್ತಾಯಿಸಿದ್ದಾರೆ.