ಮಾನ್ವಿ: ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದ ಬಾಕಿಯಿರುವ ಪ್ರಕರಣಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡರೆ ಒಳ್ಳೆಯದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಶಿವರಾಜ್ ವಿ.ಸಿದ್ದೇಶ್ವರ ಹೇಳಿದರು.
ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಸಂಧಾನದ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಂಡಲ್ಲಿ ಸಮಯದ ಉಳಿತಾಯದೊಂದಿಗೆ ಸೌಹಾರ್ದತೆ ಉಳಿಯಲಿದೆ. ಈ ಕಾರಣಕ್ಕೆ ಲೋಕ ಅದಾಲತ್ ಏರ್ಪಡಿಸಲಾಗಿದೆ ಎಂದರು.
ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಆಶಪ್ಪ ಬಿ.ಸಣ್ಣಮನಿ ಮಾತನಾಡಿ, ಲೋಕ ಅದಾಲತ್ ಕಾರ್ಯಕ್ರಮದಲ್ಲಿ 23 ಸಿವಿಲ್, 1201 ಕ್ರಿಮಿನಲ್ ಪ್ರಕರಣಗಳು ಹಾಗೂ ಬಾಕಿ ಪ್ರಕರಣಗಳಲ್ಲಿ 1.92 ಕೋಟಿ ರೂ., ದಾವಾ ಪೂರ್ವ ಪ್ರಕರಣಗಳಲ್ಲಿ 87.41 ಲಕ್ಷ ರೂ. ಸಂಧಾನದ ಮೂಲಕ ವಸೂಲಿ ಮಾಡಲಾಯಿತು ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್ ಪಾಟೀಲ್, ಕಾರ್ಯದರ್ಶಿ ಚನ್ನಬಸವ ನಾಯಕ, ಹಿರಿಯ ವಕೀಲರಾದ ಮಲ್ಲಿಕಾರ್ಜುನ ಪಾಟೀಲ್, ಗುಮ್ಮಾ ಬಸವರಾಜ್, ಡಿ.ರವಿಕುಮಾರ್, ಮಲ್ಲೇಶ ಮಾಚನೂರ್, ಸ್ಟೆಲ್ಲಾ ಶಾರ್ಲಾಟ್, ಜರೀನಾ ಬೇಗಂ, ಅಮೃತಾ ಶೆಟ್ಟಿ, ರಾಘವೇಂದ್ರ ಜಾನೇಕಲ್, ಯಲ್ಲಪ್ಪ ಹಿರೇಬಾದರದಿನ್ನಿ, ಚಂದ್ರಕಲಾ, ಭಾರತ್ ಪಾಟೀಲ್, ಮಲ್ಲಿಕಾರ್ಜುನ್ ಮೋಕಾ, ಹನುಮಂತಪ್ಪ ನಾಯಕ ಮುಸ್ಟೂರ್, ವಿರೂಪಾಕ್ಷಿ, ಶಶಿಕಾಂತ ಸ್ವಾಮಿ, ಬಿ.ಕೆ.ಬಸವರಾಜ್, ಯುನುಸ್ ಪಾಷಾ ಇತರರಿದ್ದರು.