ಮೂಡಿಗೆರೆ: ಕೇರಳದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆಯ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡಿಷನಲ್ ಕರಾಟೆ ಸಂಸ್ಥೆಗೆ 12 ಚಿನ್ನ, 14 ಬೆಳ್ಳಿ ಹಾಗೂ 17 ಕಂಚಿನ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದೆ.
ಕೇರಳದಲ್ಲಿ ಶೋಟೋಕಾನ್ ಅಕಾಡೆಮಿ ಆಫ್ ಇಂಡಿಯಾ ಸಂಸ್ಥೆ ಭಾನುವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ರಾಜ್ಯದಿಂದ 1,600 ಮಂದಿ ಕರಾಟೆಪಟುಗಳು ಭಾಗವಹಿಸಿ 52 ವಿವಿಧ ಶೈಲಿಯ ಕರಾಟೆ ಪ್ರದರ್ಶಿಸಿದರು. ಮೂಡಿಗೆರೆಯಿಂದ 43 ಮಂದಿ ಬ್ಲಾಕ್ ಬೆಲ್ಟ್ ಡಾನ್‌ಗಳು ಭಾಗವಹಿಸಿದ್ದರು. ಇವರಿಗೆ ಕರಾಟೆ ಅಕಾಡೆಮಿ ಮುಖ್ಯಶಿಕ್ಷಕ ಸೆನ್‌ಸಾಯ್ ರಾಜೇಂದ್ರನ್, ಬೇಬಿ ಲತಾ, ಪೂಜಿತ್,ಅಶ್ವಿನಿ ಚಂದ್ರ ತರಬೇತಿ ನೀಡಿದ್ದಾರೆ.
ಮುಖ್ಯಶಿಕ್ಷಕ ಸೆನ್‌ಸಾಯ್ ರಾಜೇಂದ್ರನ್‌ಮಾತನಾಡಿ, ನಮ್ಮ ಸಂಸ್ಥೆಯಿಂದ ಕೇರಳಕ್ಕೆ ತೆರಳಿದ್ದ ಎಲ್ಲರೂ ಪದಕ ಪಡೆದಿದ್ದರೆ. ಇದು ಕರ್ನಾಟಕಕ್ಕೆ ಹೆಮ್ಮೆ ತಂದಿದೆ. ನಮ್ಮ ಸಂಸ್ಥೆ ಮೂಡಿಗೆರೆ, ಸಕಲೇಶಪುರ ಮತ್ತು ಹಾನುಬಾಳು ಈ ಮೂರು ಕಡೆ ತರಬೇತಿ ನಡೆಸುತ್ತಿದ್ದು 700 ಮಂದಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. 30 ವರ್ಷದ ಹಿಂದೆ ನಮ್ಮ ಸಂಸ್ಥೆ ಸ್ಥಾಪನೆಯಾಗಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ಸಂಸ್ಥೆಯಿಂದ ಬಾಕ್ ಬೆಲ್ಟ್ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.
ಮೂಡಿಗೆರೆಯ ಕರಾಟೆ ಅಕಾಡೆಮಿಗೆ ಸಮಗ್ರ ಪ್ರಶಸ್ತಿ

ಐಸ್ಕ್ಯೂಬ್ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy
Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…
ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…
ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon
watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…