ಎರಡು ಗುಂಪುಗಳ ಮಧ್ಯೆ ವಾಗ್ವಾದ

ರಬಕವಿ/ಬನಹಟ್ಟಿ:ಬನಹಟ್ಟಿ ನಗರದ ದತ್ತಾತ್ರೇಯ ದೇವಸ್ಥಾನ ಸಮೀಪದ ಈದ್ಗಾ ಬಳಿ ಗೋಡೆ ನಿರ್ಮಾಣ ಕುರಿತಂತೆ ಎರಡು ಕೋಮಿನ ಮುಖಂಡರ ನಡುವೆ ಭಾನುವಾರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ವಣಗೊಂಡಿತ್ತು.

ಈದ್ಗಾ ಬಳಿ ಇರುವ ಜಾಗದ ಸುತ್ತ ಅಂಜುಮನ್ ಎ ಇಸ್ಲಾಂ ಕಮಿಟಿ ರಕ್ಷಣಾ ಗೋಡೆ ನಿರ್ವಿುಸಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಒಂದು ಕೋಮಿನ ಜನರಿಗೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ತಹಸೀಲ್ದಾರ್ ಸೂಚಿಸಿದ್ದರು.

ಹದಿನೈದು ದಿನವಾದರೂ ದಾಖಲೆ ಸಲ್ಲಿಸದ ಕಾರಣ ಭಾನುವಾರ ಕಮಿಟಿಯವರು ಗೋಡೆ ನಿರ್ಮಾಣ ಕಾಮಗಾರಿ ನಡೆಸಲು ಮುಂದಾಗಿದ್ದರು.

ಈ ಮೊದಲು ಆಕ್ಷೇಪ ವ್ಯಕ್ತಪಡಿಸಿದ ಒಂದು ಕೋಮಿನ ಮಹಿಳೆಯರು ಕಾಮಗಾರಿ ನಡೆಯುತ್ತಿದ್ದ ಗೋಡೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಗೋಡೆ ನಿರ್ವಿುಸುವುದರಿಂದ ಈಗಿರುವ ರಸ್ತೆ ಬಂದ್ ಆಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ಆರೋಪಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಎರಡೂ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಾದ ಪರಿಹರಿಸುವುದಾಗಿ ಭರವಸೆ ನೀಡಿದರು.

20 ವರ್ಷಗಳ ಹಿಂದೆಯೇ ಈ ಪ್ರದೇಶದ 10 ಎಕರೆ ಅಂಜುಮನ್ ಎ ಇಸ್ಲಾಂ ಕಮಿಟಿಗೆ ಸಂಬಂಧಿಸಿದ ಬಗ್ಗೆ ದಾಖಲೆಗಳಿವೆೆ. ನಿಯಮ ಬದ್ಧವಾಗಿಯೇ ಕಾಮಗಾರಿ ನಡೆಸಲಾಗುತ್ತಿದೆ.

| ಹಾರೂನ್ ಸಾಂಗ್ಲಿಕರ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ