22.8 C
Bengaluru
Saturday, January 18, 2020

ಶಂಕರನ್ ಪಿಳ್ಳೈ ಅಗ್ನಿಶಾಮಕ ಕೇಂದ್ರಕ್ಕೆ ಎರಡು ಮಿಸ್ಡ್ ಕಾಲ್​ಗಳನ್ನು ಕೊಟ್ಟ!: ಮುಂದೇನಾಯಿತು ಓದಿ..

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಕಳೆದ 24 ಗಂಟೆಗಳಲ್ಲಿ ನಿಮ್ಮಲ್ಲಿ ಎಷ್ಟು ಮಂದಿ, ಯಾರನ್ನಾದರೂ ಅಥವಾ ಯಾವುದನ್ನಾದರೂ ನೋಡಿ ಕಣ್ಣಲ್ಲಿ ನೀರು ಬರುವಂತೆ ಮುಗುಳ್ನಕ್ಕಿದ್ದೀರಾ? ನಗಲು ಕೂಡ ಯಾಕೆ ಜಿಪುಣರಾಗಿದ್ದೀರಿ? ಕೆಲವು ಹನಿ ಕಣ್ಣೀರು ಸುರಿಸಿದರೆ ನೀವೇನು ಒಣಗಿ ಹೋಗುವುದಿಲ್ಲ. ಲೆಕ್ಕಾಚಾರವೇ ನಮಗೆಲ್ಲ ಸಮಸ್ಯೆ. ಜಿಪುಣತನದಿಂದ ಹೊರ ಬನ್ನಿ.

ಈ ಗ್ರಹದಲ್ಲಿ ಮಾನವ ಜೀವನವನ್ನು ಬದಲಿಸಿದ ದೊಡ್ಡ ಚಳವಳಿಗಳು, ಕ್ರಾಂತಿಗಳು, ಅದ್ಭುತ ಸಂಗತಿಗಳು ಸಂಭವಿಸಿರುವುದು, ಮೇಲಿನಿಂದ ಏನೋ ಗುಡುಗಿನಂತೆ ಇಳಿದು ಬಂದ ಕಾರಣದಿಂದಲ್ಲ. ಬೆರಳೆಣಿಕೆಯಷ್ಟು ಜನರು, ಅಗತ್ಯವಾದ ಗಮನವನ್ನು ನೀಡಿ, ಮಾಡಿದ ಸಣ್ಣಪುಟ್ಟ ಕೆಲಸಗಳು ಅದ್ಭುತ ಪ್ರಕ್ರಿಯೆಯಾಗಿ ಅರಳಿದ್ದರಿಂದ.

ಒಬ್ಬ ಮನುಷ್ಯನ ಹೃದಯದ ಮಿಡಿತಕ್ಕೆ ಸಾಕಷ್ಟು ಗಮನ ಮತ್ತು ಚೈತನ್ಯವನ್ನು ನೀಡಿದರೆ, ಒಬ್ಬರ ಆಲೋಚನೆ ಮತ್ತು ಭಾವನೆಗಳು ಇಡೀ ಜಗತ್ತನ್ನು ಪ್ರೇರೇಪಿಸಬಲ್ಲದು ಎಂದು ತಿಳಿಯುತ್ತದೆ. ಉದಾಹರಣೆಗೆ, ಗಾಂಧೀಜಿ ಬೆರಳೆಣಿಕೆಯಷ್ಟು ಜನರೊಂದಿಗೆ ಆಂದೋಲನ ಪ್ರಾರಂಭಿಸಿದರು. ಈ ಬೆರಳೆಣಿಕೆಯಷ್ಟು ಜನ ಕೆಲವೇ ಸಮಯದಲ್ಲಿ ಲಕ್ಷಾಂತರ ಜನರಾದರು ಮತ್ತು ಒಂದು ಮಹಾನ್ ಚಳವಳಿಯಾಯಿತು.

ಸಣ್ಣ ವಿಷಯಗಳ ಕಡೆಗೆ ನೀವು ಅಗತ್ಯವಾದ ಏಕಾಗ್ರತೆ, ಗಮನ ಮತ್ತು ಶಕ್ತಿಯನ್ನು ನೀಡಿದರೆ, ಅದು ವೃದ್ಧಿಸಿ ಬೃಹತ್ತಾಗಿ ಮಾರ್ಪಾಡಾಗಬಹುದು. ಸಾಮಾನ್ಯವಾಗಿ ಯಾವುದರ ಕಡೆಗಾದರೂ ನಿರಂತರವಾಗಿ ಗಮನವಿಡಲು ಬೇಕಾದ ರೀತಿಯ ಅರ್ಪಣಾಭಾವ ಹೆಚ್ಚಿನ ಜನರಿಗೆ ಇರುವುದಿಲ್ಲ. ಅವರು ಗಮನವನ್ನು ‘ಆಗಾಗ’ ಕೊಡುತ್ತಾರೆ, ಆದ್ದರಿಂದ ಅದು ಎಂದಿಗೂ ತೀವ್ರವಾದ ‘ಗತಿ’ಯನ್ನು ಪಡೆದುಕೊಳ್ಳುವುದಿಲ್ಲ. ಆದರೆ ಒಂದು ಕಲ್ಪನೆ, ಆಲೋಚನೆ ಅಥವಾ ಭಾವನೆಗೆ ಸಾಕಷ್ಟು ಗಮನ ನೀಡಿದರೆ, ಅದು ಒಬ್ಬ ವ್ಯಕ್ತಿಗೆ ಮತ್ತು ಇಡೀ ಮಾನವ ಕುಲಕ್ಕೆ ಅದ್ಭುತ ಪ್ರಕ್ರಿಯೆಯಾಗಬಹುದು.

ಜೀವನಕ್ಕೆ ಜಿಪುಣತೆ ಏಕೆ?: ಬಹುಪಾಲು ಜನರು ಸಾಧಾರಣ ಜೀವನವನ್ನು ನಡೆಸಲು ಕಾರಣವೆಂದರೆ ಅವರು ಎಲ್ಲದರಲ್ಲೂ ಜಿಪುಣರು. ಅವರಿಗೆ ಪೂರ್ಣ ನಗು ಅಥವಾ ತಮ್ಮನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನೀವು ಆ ಜಿಪುಣ ಆಗಿರುವಾಗ, ಜೀವನ ಕೂಡ ನಿಮ್ಮೊಂದಿಗೆ ತುಂಬ ಜಿಪುಣತೆಯಿಂದಿರುತ್ತದೆ.

ಒಮ್ಮೆ ಹೀಗಾಯಿತು, ಈ ಜನ್ಮದಲ್ಲಿ ಅಲ್ಲ, ಹಿಂದಿನ ಜನ್ಮದಲ್ಲಿ! ಶಂಕರನ್ ಪಿಳ್ಳೈ ಮಹಾನ್ ಜಿಪುಣ. ಒಂದು ದಿನ, ಅವನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಆದ್ದರಿಂದ ಅವನು ಅಗ್ನಿಶಾಮಕ ಕೇಂದ್ರಕ್ಕೆ ಎರಡು ಮಿಸ್ಡ್ ಕಾಲ್​ಗಳನ್ನು ಕೊಟ್ಟ!

ಜನರು ನನ್ನೊಂದಿಗೆ ಸಹ ಇದನ್ನು ಮಾಡುತ್ತಿರುತ್ತಾರೆ. ಇದು ಒಬ್ಬರ ಭಯವಲ್ಲ. ನಿಮ್ಮನ್ನು ಮಿತಿಗೊಳಿಸುವ ಯಾವುದೋ ನಿಮ್ಮನ್ನು ನುಂಗುವ ಅಪಾಯವಲ್ಲ. ಇದು ಲೆಕ್ಕಾಚಾರ. ಜಿಪುಣನ ಲೆಕ್ಕಾಚಾರಗಳಿಗೆ ಮಿತಿಯಿಲ್ಲ- ಅವು ನಡೆಯುತ್ತಲೇ ಇರುತ್ತವೆ. ಅವರು ಒಂದು ಹಣ್ಣು ಸಿಕ್ಕರೆ, ಅದನ್ನು ಒಂದು ದಶಲಕ್ಷ ತುಂಡುಗಳಾಗಿ ಕತ್ತರಿಸಿ ಆ ಹಣ್ಣಿನ ದಶಲಕ್ಷದ ಒಂದು ಭಾಗವನ್ನು ಯಾರಿಗಾದರೂ ನೀಡುತ್ತಾರೆ. ಒಂದು ಹಣ್ಣನ್ನು ದಶಲಕ್ಷ ತುಂಡುಗಳಾಗಿ ಕತ್ತರಿಸುವುದಕ್ಕೆ ಅರ್ಧ ಜೀವಿತಾವಧಿ ತೆಗೆದುಕೊಳ್ಳಬಹುದು. ಅದು ನಡೆಯುತ್ತಿರುವುದೇ ಹಾಗೆ. ‘ಸ್ವಲ್ಪ’ವನ್ನು ಕೊಡಲು, ಜನರು ಜೀವಿತಾವಧಿಯನ್ನು ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಏನೂ ಸಂಭವಿಸುವುದಿಲ್ಲ. ನೀವು ಎಷ್ಟೇ ಆಶ್ರಮಗಳಿಗೆ ಹೋಗಬಹುದು, ಎಷ್ಟೇ ಗುರುಗಳನ್ನು ನೋಡಬಹುದು, ಎಷ್ಟೇ ದೇವಾಲಯಗಳಿಗೆ ಹೋಗಿ ಯಾವುದೇ ಪ್ರಮಾಣದ ಆಚರಣೆಗಳನ್ನು ಮಾಡಬಹುದು, ನೀವು ನಿಮ್ಮ ತಲೆಯ ಮೇಲೆ ನಿಂತು, ಧ್ಯಾನ ಮಾಡಿ- ಏನೂ ಆಗುವುದಿಲ್ಲ; ಏಕೆಂದರೆ ನೀವು ತುಂಬ ಜಿಪುಣರಾಗಿದ್ದೀರಿ. ಸಂಪೂರ್ಣವಾಗಿ ಯಾವುದಕ್ಕೂ ನಿಮ್ಮನ್ನು ಅರ್ಪಿಸಿಕೊಳ್ಳುವುದಿಲ್ಲ- ಸಮಸ್ಯೆ ಇದೇ. ಈ ಜೀವನ ಪೂರ್ಣ ಪ್ರಮಾಣದಲ್ಲಿ ನಡೆಯುತ್ತದೆ. ಸಂಪೂರ್ಣವಾಗಿ ಅರ್ಪಿಸಿಕೊಳ್ಳುವವನು ಮಾತ್ರ ಜೀವನವನ್ನು ಅದರ ಸಂಪೂರ್ಣತೆಯಲ್ಲಿ ತಿಳಿಯಲು ಸಾಧ್ಯ, ಇತರರಿಗೆ ಅದು ತಿಳಿಯುವುದಿಲ್ಲ.

ಲೆಕ್ಕಾಚಾರದ ಪರಿಣಾಮ: ಜನರು ಏನಾದರೂ ಬೇಕಾದಾಗ, ಎಲ್ಲ ತರ್ಕಗಳನ್ನು ಬಿಟ್ಟುಬಿಡುತ್ತಾರೆ. ಆದರೆ ಏನನ್ನಾದರೂ ನೀಡಬೇಕಾದಾಗ, ಸಂಪೂರ್ಣವಾಗಿ ತರ್ಕಬದ್ಧರಾಗುತ್ತಾರೆ! ಈ ಲೆಕ್ಕಾಚಾರ ಮನುಕುಲವನ್ನು ಕೊಲ್ಲುತ್ತಿದೆ. ಎಲ್ಲದರ ಬಗ್ಗೆ ಈ ಅತಿಯಾದ ಲೆಕ್ಕಾಚಾರ; ಪರಿಮಳಯುಕ್ತ ಹೂವುಗಳಂತೆ ಬದುಕಬಹುದಾದ ಮನುಷ್ಯರನ್ನು, ಮುಳ್ಳಿನಂತೆ ತಿರುಗಾಡುವಂತೆ ಮಾಡಿದೆ. ‘ಯಾಕೆ?’ ಎಂದು ನೀವು ಅವರನ್ನು ಕೇಳಿದರೆ, ‘ನಿಮಗೆ ಗೊತ್ತಾ, ನನಗೆ ನಿನ್ನೆ ಮುಳ್ಳು ಚುಚ್ಚಿದೆ, ಹಾಗಾಗಿ ನಾನು ಈಗ ಮುಳ್ಳುಹಂದಿ’. ಈ ಲೆಕ್ಕಾಚಾರದ ಅರ್ಥ ಮಾನವ ಮನಸ್ಸಿನಲ್ಲಿ ಪ್ರವೇಶಿಸಿದಾಗ, ಅವರು ಪರ್ವತದಿಂದ ಜಿಗಿಯಬೇಕಾಗಿಲ್ಲ. ಅವರು ಹೇಗಾದರೂ ಅರ್ಧ ಸತ್ತಿದ್ದಾರೆ. ಅವರು ಈಗಾಗಲೇ ಆತ್ಮಹತ್ಯೆ ಹಾದಿಯಲ್ಲಿದ್ದಾರೆ.

ಜನರು ನನಗೆ ಈ ಪ್ರಶ್ನೆ ಕೇಳುತ್ತಲೇ ಇರುತ್ತಾರೆ, ‘ನಾವೆಲ್ಲರೂ ಒಂದೇ ಮೂಲದಿಂದ ಬಂದವರು. ಆದರೂ ಒಬ್ಬರು ಅರಳುತ್ತಾರೆ, ಇನ್ನೊಬ್ಬರು ಅರಳುವುದಿಲ್ಲ?’ ಎಂದು. ಅದು ಏಕೆಂದರೆ ಕೇವಲ ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿರುವುದರಿಂದ. ಇದು ತನ್ನ ಮೂಳೆಗಳನ್ನು ಅಲ್ಲಿ-ಇಲ್ಲಿ ಬಚ್ಚಿಟ್ಟು ನಂತರ ಅವು ಎಲ್ಲಿದೆ ಎಂಬುದನ್ನು ಮರೆತುಬಿಡುವ ನಾಯಿಯಂತೆ. ಜನರು ತಮ್ಮಲ್ಲಿ ಇರಬಹುದಾದಂಥ ಎಲ್ಲ ಅದ್ಭುತ ಸ್ವಭಾವಗಳನ್ನೂ ತಮ್ಮೊಳಗಿನ ಮನದಾಳದಲ್ಲಿ ಭವಿಷ್ಯಕ್ಕಾಗಿ ಹಿಡಿದಿಟ್ಟುಕೊಂಡಿರುತ್ತಾರೆ. ಏಕೆಂದರೆ ಅವರು ಸ್ವರ್ಗಕ್ಕೆ ಹೋಗುತ್ತಿದ್ದಾರೆ ಮತ್ತು ಅವರು ಅಲ್ಲಿ ಪ್ರೀತಿಯಿಂದ ಮತ್ತು ಸಂತೋಷದಿಂದಿರಲು ಬಯಸುತ್ತಾರೆ!

ಹಡಗನ್ನು ಬಂದರಿನಲ್ಲಿ ಇಟ್ಟರೆ, ಅದು ತುಂಬ ಸುರಕ್ಷಿತವಾಗಿರುತ್ತದೆ, ಆದರೆ ದುರದೃಷ್ಟವಶಾತ್ ಬಂದರಿನಲ್ಲಿ ಇಡಲು ಹಡಗನ್ನು ನಿರ್ವಿುಸಲಾಗಿಲ್ಲ. ಸಾಗರಗಳ ಅಲೆಗಳಲ್ಲಿ ತೇಲಿ ಹೋಗಲು ಹಡಗನ್ನು ನಿರ್ವಿುಸಲಾಯಿತು. ನಿರಂತರವಾಗಿ ಸುರಕ್ಷಿತವಾಗಿರಲು ಬಯಸುವವರು ಹಾಗೂ ತಮ್ಮನ್ನು ಮತ್ತು ತಾವು ಹೊಂದಿರುವ ಎಲ್ಲವನ್ನೂ ಭವಿಷ್ಯಕ್ಕಾಗಿ ಉಳಿಸಲು ಪ್ರಯತ್ನಿಸುತ್ತಿರುವವರು ವರ್ತಮಾನ ಇಲ್ಲದವರು, ಅವರಿಗೆ ಭವಿಷ್ಯ ಎಲ್ಲಿ ಬರುತ್ತದೆ? ನೀವು ವರ್ತಮಾನ ಕಳೆದುಕೊಂಡಿದ್ದರೆ, ಭವಿಷ್ಯ ಬಂದಾಗ, ನೀವು ಅದನ್ನೂ ಕಳೆದುಕೊಳ್ಳುವುದಿಲ್ಲ ಎಂದು ಹೇಗೆ ಭಾವಿಸುತ್ತೀರಾ?

ಗೌತಮ ಬುದ್ಧನ ಬಗ್ಗೆ ಒಂದು ಕಥೆ ಇದೆ. ನಿಜವಾದ ಕಥೆಯಲ್ಲ, ಒಂದು ಸುಂದರ ಕಥೆ. ಗೌತಮ ನಿರ್ವಾಣವನ್ನು ತಲುಪಿ, ಅಂತಿಮ ವಿಮೋಚನೆಯಾದ ಮುಕ್ತಿಯ ದ್ವಾರದತ್ತ ಸಾಗಿದಾಗ, ಅವನ ಬೆನ್ನು ದ್ವಾರದ ಕಡೆಗೆ ತಿರುಗಿತ್ತು, ಅವನ ಮುಖವಲ್ಲ. ಆದ್ದರಿಂದ ಅವನನ್ನು ಕೇಳಿದರು, ‘ಏಕೆ, ಗೌತಮ, ಜೀವನದುದ್ದಕ್ಕೂ ನಿನಗೆ ಈ ಸಮಸ್ಯೆ ಇತ್ತು. ಜಗತ್ತಿನಲ್ಲಿ, ಪ್ರತಿಯೊಬ್ಬರೂ ರಾಜನಾಗಲು ಪ್ರಯತ್ನಿಸುತ್ತಿದ್ದರೆ, ಪ್ರತಿಯೊಬ್ಬರೂ ಹಣವನ್ನು ಸಂಪಾದಿಸಲು ಮತ್ತು ಅರಮನೆಯಲ್ಲಿ ವಾಸಿಸಲು ಪ್ರಯತ್ನಿಸುತ್ತಿದ್ದರೆ, ಅದಕ್ಕೂ ನೀನು ಬೆನ್ನು ತೋರಿದೆ. ನೀನು ರಾಜನಿಂದ ಭಿಕ್ಷುಕನಾಗಿ, ಅರಮನೆಯಿಂದ ಕಡು ಬಡತನಕ್ಕೆ ಹೋದೆ. ಈಗ, ಏನೋ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ, ನಾವು ನಿನಗೆ ಅಂತಿಮ ವಿಮೋಚನೆಯ ದ್ವಾರಗಳನ್ನು ತೆರೆದಿದ್ದೇವೆ. ಈಗಲೂ ಏಕೆ ಬೆನ್ನು ತಿರುಗಿಸಿದ್ದೀಯಾ?’ ಗೌತಮ ಹೇಳಿದ, ‘ನನಗೆ ಈ ದ್ವಾರವನ್ನು ಪ್ರವೇಶಿಸುವ ಉದ್ದೇಶ ಇಲ್ಲ, ನಾನು ಹೋಗುವ ಮೊದಲು ಎಲ್ಲರೂ ಹಾದುಹೋಗಲು ನಾನು ಕಾಯುತ್ತಿದ್ದೇನೆ. ನಾನು ಅವಸರದಲ್ಲಿಲ್ಲ. ಇತರರಿಗಿಂತ ಮೊದಲು ಹೋಗುವುದು ಸ್ವಲ್ಪ ಚೆನ್ನಾಗಿರುವುದಿಲ್ಲ ಎಂದು ನನಗೆ ಅನ್ನಿಸುತ್ತದೆ’.

ಜನರು ಯಾವಾಗಲೂ ಮನಸ್ಸು ಮತ್ತು ಹೃದಯದ ಜಿಪುಣತನದಿಂದ ತಮ್ಮನ್ನು ಬೇರೆಡೆಗೆ ತಿರುಗಿಸಲು ತ್ವರಿತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಕಳೆದ 24 ಗಂಟೆಗಳಲ್ಲಿ ನಿಮ್ಮಲ್ಲಿ ಎಷ್ಟು ಮಂದಿ, ಯಾರನ್ನಾದರೂ ಅಥವಾ ಯಾವುದನ್ನಾದರೂ ನೋಡಿ ಕಣ್ಣಲ್ಲಿ ನೀರು ಬರುವಂತೆ ಮುಗುಳ್ನಕ್ಕಿದ್ದೀರಾ? ನಗಲು ಕೂಡ ಯಾಕೆ ಜಿಪುಣರಾಗಿದ್ದೀರಿ? ಕೆಲವು ಹನಿ ಕಣ್ಣೀರು ಸುರಿಸಿದರೆ ನೀವೇನು ಒಣಗಿ ಹೋಗುವುದಿಲ್ಲ. ಲೆಕ್ಕಾಚಾರವೇ ಸಮಸ್ಯೆ. ನಿಮಗೆ ಪರಿಹಾರಗಳು ಬೇಕು. ಇಲ್ಲಿ ಯಾವುದೇ ಪರಿಹಾರಗಳಿಲ್ಲ. ಕರಗಿ ಹೋಗುವುದೇ/ಸಮರ್ಪಣೆ ಆಗುವುದೇ ಪರಮ ಪರಿಹಾರ.

ಅರ್ಪಣೆಯಲ್ಲಿ ಒಂದಾಗುವಿಕೆ: ಲೆಕ್ಕಾಚಾರದಿಂದ ಕರಗುವಿಕೆ ನಡೆಯುವುದಿಲ್ಲ. ಕೇವಲ ಅರ್ಪಣೆಯಿಂದ ಅದು ಸಾಧ್ಯ. ಜೀವನದ ಪ್ರತಿ ಕ್ಷಣವನ್ನೂ ಅರ್ಪಣಾ ಭಾವದಿಂದ ನಡೆಸಬೇಕು. ಅದು ಇಲ್ಲದಿದ್ದರೆ, ನೀವು ಕರಗುವುದಿಲ್ಲ, ಸಮರ್ಪಿತರಾಗುವುದಿಲ್ಲ. ನೀವು ಕರಗದಿದ್ದರೆ, ಯಾವುದೇ ಪರಿಹಾರವಿಲ್ಲ.

ನೀವು ಇದನ್ನು ಪ್ರಯತ್ನಿಸಬೇಕೆಂದು ನಾನು ಬಯಸುತ್ತೇನೆ. ಮುಂದಿನ 24 ಗಂಟೆಗಳಲ್ಲಿ, ಸಂಪೂರ್ಣವಾದ ಅರ್ಪಣೆಯ ಒಂದು ಕ್ಷಣವನ್ನಾದರೂ ನೀವು ತಿಳಿದಿರಬೇಕು. ನಿಮ್ಮಲ್ಲಿರುವ ಎಲ್ಲವೂ ಕರಗುವ ರೀತಿಯಲ್ಲಿ ನೀವು ಅರ್ಪಿಸಬೇಕು. 24 ಗಂಟೆಗಳಲ್ಲಿ ಅರ್ಪಣೆಯ ಒಂದು ಕ್ಷಣ. ನೀವು ಅದನ್ನು ಮಾಡುವಿರಾ?

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...