ಬೆಂಗಳೂರು: ವೈದ್ಯೆವೊಬ್ಬರಿಗೆ ಹಣ ಪಡೆದು ಹಿಂದಿರುಗಿಸದೇ ಹಾಗೂ ಕಾಲ್ ರೆಕಾರ್ಡ್ (ಸಿಡಿಆರ್) ಪಡೆದು ಕಿರುಕುಳ ನೀಡಿದ ಆರೋಪ ಹಿನ್ನೆಲೆ ಬಸವನಗುಡಿ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಪ್ಟರ್ ರಾಜಕುಮಾರ್ ಸದಾಶಿವ ಜೋಡಟ್ಟಿ ವಿರುದ್ಧ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಯುವತಿಯ ಪರ ಆಕೆಯ ಸಹೋದರ ನೀಡಿದ್ದಾರೆ.
೨೦೨೧ ರಲ್ಲಿ ಫೇಸ್‌ಬುಕ್ ಮೂಲಕ ಪಿಎಸ್‌ಐ ಯುವತಿ ಪರಿಚಯವಾಗಿದೆ. ಈ ವೇಳೆ ಯುವತಿ ಮೈಸೂರಿನಲ್ಲಿ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಮೈಸೂರಿನಲ್ಲಿ ಅದೇ ವರ್ಷ ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್‌ಐ ಟ್ರೈನಿಂಗ್‌ನಲ್ಲಿದ್ದರು. ಈ ವೇಳೆ ಪರಸ್ಪರ ಸ್ನೇಹ ಬೆಳೆದು ಆಪ್ತರಾಗಿದ್ದ್ದರು ಎನ್ನಲಾಗಿದೆ. ಯುವತಿ ಎಂಬಿಬಿಎಸ್ ಮಾಡುವಾಗ ಪಿಎಸ್‌ಐನಿಂದ ೮೦ ಸಾವಿರ ಪಡೆದುಕೊಂಡು ನಂತರ ಹಿಂದಿರುಗಿಸಿದ್ದಾರೆ.
ನಂತರ ಪಿಎಸ್‌ಐ ಕೂಡ ವೈದ್ಯೆಯಿಂದ ಹಂತ ಹಂತವಾಗಿ ೧.೭೧ ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಪಡೆದಿದ್ದಾರೆ. ಯುವತಿ ಆ ಹಣವನ್ನು ವಾಪಸ್ ಕೇಳಿದ್ದಾಗ ವಾಟ್ಸ್‌ಆ್ಯಪ್ ಕರೆ ಮಾಡುವ ಮೂಲಕ ನಿನಗೆ ಹಣ ವಾಪಸ್ ಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀಯಾ ಮಾಡಿಕೊ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ನಿನಗೆ ಹಣ ಬೇಕಾದರೆ ಠಾಣೆಗೆ ಬಂದು ತೆಗೆದುಕೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಪಿಎಸ್‌ಐ ಇತ್ತೀಚೆಗೆ ನಗ್ನ ಫೋಟೋ ಕಳಿಸುವಂತೆ ವೈದ್ಯಗೆ ಕಿರುಕುಳ ನೀಡಿದ್ದು, ಇದನ್ನು ನಿರಾಕರಿಸಿದ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಜತೆಗೆ ವೈದ್ಯೆಯ ಕಾಲ್ ರೆಕಾರ್ಡ್ ಪಡೆದು ಆಕೆಗೆ ಕಿರುಕುಳ ನೀಡುತ್ತಿರುವ ಆರೋಪ ಮಾಡಲಾಗಿದೆ. ಹೀಗಾಗಿ ಸದ್ಯ ನೊಂದ ವೈದ್ಯೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಬಸವನಗುಡಿ ಠಾಣೆ ಪಿಎಸ್‌ಐ ವಿರುದ್ಧ ಆಯುಕ್ತರಿಗೆ ದೂರು
You Might Also Like
Financial Problems: ಸಾಲದ ನೋವಿನಿಂದ ಮುಕ್ತಿ ಹೊಂದಲು ಹೀಗೆ ಮಾಡಲೇಬೇಕು!
Financial Problems: ಇತ್ತೀಚಿನ ದಿನಗಳಲ್ಲಿ ಪ್ರತಿ ಹತ್ತರಲ್ಲಿ ಎಂಟು ಜನರು ಸಾಲದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುಡಿದ…
Dream Science: ಕನಸಿನಲ್ಲಿ ಕಪ್ಪು, ಬಿಳಿ ಹಾವು ಕಂಡರೆ ಶುಭನಾ / ಅಶುಭನಾ?
Dream Science: ಮಲಗುವಾಗ ಕನಸುಗಳು ಬರುವುದು ಸಹಜ. ಕನಸಿನ ವಿಜ್ಞಾನದ ಪ್ರಕಾರ, ಇವೆಲ್ಲವೂ ಭವಿಷ್ಯದ ಘಟನೆಗಳ…
Neem Leaves Benefits: ಚಳಿಗಾಲದಲ್ಲಿ ಬೇವಿನ ಎಲೆಗಳ ಉಪಯೋಗವೇನು ಗೊತ್ತಾ?
Neem Leaves Benefits: ಬೇವಿನ ಮರದ ಪ್ರತಿಯೊಂದು ಭಾಗವು ನಮಗೆ ತುಂಬಾ ಉಪಯುಕ್ತವಾಗಿದೆ. ಬೇವಿನ ಔಷಧೀಯ…