ಹೋಟೆಲ್​ ಬಿಲ್​ ಕಟ್ಟದೇ ಪೂಜಾ ಗಾಂಧಿ ಪರಾರಿ: ದೂರು ದಾಖಲು

ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟಿ ಪೂಜಾ ಗಾಂಧಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಹೋಟೆಲ್ ಬಿಲ್ ಕಟ್ಟದೆ ಕಾಲ್ಕಿತ್ತಿರುವ ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾಗಿದೆ.

ಲಕ್ಷ ಲಕ್ಷ ಬಿಲ್ ಮಾಡಿ ಯಾರಿಗೂ ಗೊತ್ತಾಗದೇ ಎಸ್ಕೇಪ್ ಆದ ನಟಿ ವಿರುದ್ಧ ಸ್ಟಾರ್​ ಹೋಟೆಲ್‌ ಮಾಲೀಕರು ದೂರು ದಾಖಲಿಸಿದ್ದಾರೆ.

ಪೂಜಾಗಾಂಧಿ ವಿರುದ್ಧ ಮಾ. 11 ರಂದು ಅಶೋಕ ಹೋಟೆಲ್ ಹೌಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು NCR ದಾಖಲು ಮಾಡಿಕೊಂಡಿದ್ದಾರೆ.

ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದ ಪೂಜಾಗಾಂಧಿಯನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಪೊಲೀಸರ ಸಮ್ಮುಖದಲ್ಲಿಯೇ ಎರಡು ಲಕ್ಷ ರೂ.ಗಳನ್ನು ಕೊಟ್ಟು ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ. (ದಿಗ್ವಿಜಯ ನ್ಯೂಸ್)