ತಾವು ದಾಳಿ ನಡೆಸಿಲ್ಲ ಎಂದ ಐಟಿ ಅಧಿಕಾರಿಗಳು, ಪೊಲೀಸರಿಗೆ ದೂರು ಕೊಟ್ಟ ಅರ್ಚಕ ಪ್ರಕಾಶ್​ ಭಟ್​

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯ ಕುಲದೇವರು ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕ ಪ್ರಕಾಶ್​ ಭಟ್​ ಮನೆ ಮೇಲೆ ನಡೆದಿದೆ ಎನ್ನಲಾದ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ನಾವು ಅರ್ಚಕರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬೆನ್ನಲ್ಲೇ, ಅರ್ಚಕ ಪ್ರಕಾಶ್​ ಭಟ್​ ಪೊಲೀಸರಿಗೆ ದೂರು ನೀಡಿದ್ದಾರೆ.

ಅಪರಿಚಿತರು ದೇವಾಲಯ, ಮನೆಯನ್ನು ಶೋಧ ಮಾಡಿದ್ದಾರೆ. ಐಟಿ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ನಿನ್ನೆ ಇಬ್ಬರು ಅಧಿಕಾರಿಗಳು ಪ್ರಕಾಶ್​ ಭಟ್​ ಅವರ ಮನೆಗೆ ಧಾವಿಸಿ, ದಾಖಲೆಗಳನ್ನು ಪರಿಶೀಲಿಸಿದ್ದರು. ಆದರೆ ಏನೂ ಸಿಗದೆ ಬರಿಗೈಲಿ ವಾಪಸಾಗಿದ್ದರು. ಆದರೆ ತಾವು ಅರ್ಚಕರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.

Leave a Reply

Your email address will not be published. Required fields are marked *