ಹಿಂದು ವಿರೋಧಿ ಹೇಳಿಕೆ: ಬಾಲಿವುಡ್‌ನ ‘ರಂಗೀಲಾ’ ನಟಿ ಊರ್ಮಿಳಾ ಮಾತೋಂಡ್ಕರ್ ವಿರುದ್ಧ ದೂರು ದಾಖಲು

ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರ ವಿರುದ್ಧ ಹಿಂದು ವಿರೋಧಿ ಹೇಳಿಕೆ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ.

ಈ ಬಗ್ಗೆ ದೂರು ನೀಡಿರುವ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಮಾತೋಂಡ್ಕರ್ ಅವರು “ಸುಳ್ಳು ಹೇಳಿಕೆ” ಮತ್ತು ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಅವರು ತಮ್ಮ ಚಾನಲ್‌ನಲ್ಲಿ ಟೀಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಮತ್ತು ಅವುಗಳನ್ನು ಪ್ರಸಾರ ಮಾಡಿದ್ದಾರೆ ಎಂದು ದೂರಿದ್ದಾರೆ.

ಸುರೇಶ್‌ ನಕ್ವಾ ಎಂಬ ಮುಂಬೈ ಬಿಜೆಪಿ ಕಾರ್ಯಕರ್ತ ಪೊವೈ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದೆ ಎಂದು ದೂರಿದ್ದಾರೆ.

ಉರ್ಮಿಳಾ ಮತೋಂಡ್ಕರ್‌ ಅವರು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

ಹಿಂದು ಧರ್ಮವು ವಿಶ್ವದ ಅತ್ಯಂತ ಹಿಂಸಾತ್ಮಕ ಧರ್ಮವಾಗಿದೆ ಎಂದು ಟಿವಿಯಲ್ಲಿ ಪ್ರಸಾರವಾದ ಮಾತೋಂಡ್ಕರ್‌ ಅವರ ಸಂದರ್ಶನವನ್ನು ನೋಡಿದ ಬಳಿಕ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ. ಮಾತೋಂಡ್ಕರ್‌ ಅವರ ಹೇಳಿಕೆಯು ಸುಳ್ಳು, ಚೇಷ್ಟೆಯ, ಮೋಸ ಮತ್ತು ನಿಷ್ಪ್ರಯೋಜಕವಾದದ್ದು. ಜನರಲ್ಲಿ ಅಸಂಗತೆಯನ್ನು ಉಂಟುಮಾಡುವ ಮತ್ತು ಜಾಗತಿಕ ಮಟ್ಟದಲ್ಲಿ ದೇಶವನ್ನು ದುರ್ಬಳಕೆ ಮಾಡುವ ಉದ್ದೇಶದಿಂದ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ದೂರನ್ನು ಸ್ವೀಕರಿಸಿದ್ದೇವೆ. ಕಾನೂನು ಅಭಿಪ್ರಾಯ ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊವೈ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *