ಒಂದಲ್ಲ, ಎರಡಲ್ಲ 4 ಮತದಾನ ಗುರುತಿನ ಚೀಟಿ ಹೊಂದಿದ್ದಾರಂತೆ ನಟ ಪ್ರಕಾಶ್‌ ರಾಜ್‌!

ಬೆಂಗಳೂರು: ಇನ್ನೇನು ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದರೆ ಇತ್ತ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್‌ ರಾಜ್‌ ವಿರುದ್ಧ ಇದೀಗ ಮತದಾನದ ಗುರುತಿನ ಚೀಟಿ ಕುರಿತಾಗಿ ದೂರು ದಾಖಲಾಗಿದೆ.

ಅವರು ಒಂದಲ್ಲ, ಎರಡಲ್ಲ ನಾಲ್ಕು ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ರಾಜ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ವಕೀಲ ಜಗನ್ ಕುಮಾರ್ ಎಂಬವವರು ದೂರು ನೀಡಿದ್ದು, ತೆಲಂಗಾಣದಲ್ಲಿ ಒಂದು, ತಮಿಳುನಾಡು, ಬೆಂಗಳೂರಿನ ಶಾಂತಿ ನಗರ ಸೇರಿ ಒಟ್ಟು ನಾಲ್ಕು ವೋಟರ್ ಐಡಿ ಹೊಂದಿದ್ದಾರೆ ಎಂದು ದೂರಿದ್ದಾರೆ.

ನಾಮಪತ್ರದ ಘೋಷಣಾ ಪತ್ರದಲ್ಲಿ ತನ್ನ ಹೆಸರು ಶಾಂತಿನಗರ ವೋಟರ್ ಲಿಸ್ಟ್‌ನಲ್ಲಿದೆ ಎಂದು ಸುಳ್ಳು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಅವರ ಉಮೇದುವಾರಿಕೆಯನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)

One Reply to “ಒಂದಲ್ಲ, ಎರಡಲ್ಲ 4 ಮತದಾನ ಗುರುತಿನ ಚೀಟಿ ಹೊಂದಿದ್ದಾರಂತೆ ನಟ ಪ್ರಕಾಶ್‌ ರಾಜ್‌!”

Comments are closed.