ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂತಹ ಸ್ಪರ್ಧೆಗಳು ವಿದ್ಯಾರ್ಥಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕ. ವಿದ್ಯಾರ್ಥಿಗಳು ಕ್ರೀಡೆ, ನೃತ್ಯ, ಸಂಗೀತ, ಲಲಿತ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡರೆ ಉದ್ಯೋಗವಕಾಶಗಳಲ್ಲಿ ಪ್ರಾತಿನಿಧ್ಯ ಸಿಗುತ್ತದೆ ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನ ಕಲಾ ಸಂಘ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಗ್ಯಾನ್-2ಕೆ 25ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಶೌಕತಅಲಿ ಎಂ. ಮಾತನಾಡಿ, ವಿದ್ಯಾರ್ಥಿಗಳ ಸರ್ವೊತೋಮುಖ ಅಭಿವೃದ್ಧಿಗೆ ಕಲಾ ಸಂಘದಿಂದ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ಅವಕಾಶ ನೀಡಲಾಗುತ್ತಿದೆ ಎಂದರು.
ಕಾಲೇಜಿನ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್ ಜೈನ್, ಪ್ರಾಚಾರ್ಯ ಡಾ. ಕೆ.ಎಚ್. ನಾಗಚಂದ್ರ, ಉಪಪ್ರಾಚಾರ್ಯ ಡಾ. ನಳಿನಿ ಕುಲಕರ್ಣಿ, ಪ್ರೊ. ಅವಂತಿಕಾ ರೊಟ್ಟಿ, ಪ್ರಾಧ್ಯಾಪಕ ತನುಜಾ ರೋಖಡೆ, ಬಸಲಿಂಗಪ್ಪ ಅರವಳದ, ನಿತಿನಕುಮಾರ, ಡಾ. ಶಿಲ್ಪಾ ಆಡೂರ, ಆನಂದ ಕಟ್ಟಿಮನಿ, ಇತರರು ಇದ್ದರು.
ಸ್ಪರ್ಧೆಗೆ 53 ತಂಡಗಳು ಹಾಗೂ ಪ್ರಬಂಧ ಸ್ಪರ್ಧೆಗೆ 48 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಮಲ್ಲಿಕ್ ರಿಹಾನ್ ಮತ್ತು ಶರತ್ ಮಡಿವಾಳರ (ಪ್ರ), ಶಿವರಾಜ ಹಾಗೂ ಜಗದೀಶ ಹಿರಿಯಾಲಮಠ (ದ್ವಿ), ಸಚಿನ್ ಹುಲಗನ್ನವರ ಮತ್ತು ಜಾಹಿರ್ (ತೃ), ವಿಠ್ಠಲ್ ಮತ್ತು ಪ್ರಜ್ವಲ ದೊಡಗೌಡ್ರ, ಮಹಾಂತೇಶ ಸಮಾಧಾನಕರ ಪ್ರಶಸ್ತಿ ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಕಿರಣ ಧುಮಾಲ (ಪ್ರ), ಪ್ರೀತಿ ಪಾಟೀಲ (ದ್ವಿ), ಮಲ್ಲಮ್ಮ ರೆಡ್ಡಿ (ತೃ) ಸ್ಥಾನ ಪಡೆದಿದ್ದಾರೆ.
ನಿಲೂರ್ ಸ್ವಾಗತಿಸಿದರು. ಪೂಜಾ ನಿರೂಪಿಸಿದರು.
