More

    ಡಿ.ತುಮಕೂರಿನಲ್ಲಿ ರಂಗೋಲಿ ಸ್ಪರ್ಧೆ

    ಚನ್ನರಾಯಪಟ್ಟಣ: ತಾಲೂಕಿನ ಡಿ.ತುಮಕೂರು ಗ್ರಾಮದ ಶ್ರೀ ಕಲ್ಲೇಶ್ವರ ದೇಗುಲದ ಆವರಣದಲ್ಲಿ ಶ್ರಿ ಕೆಂಪಮ್ಮ, ಕಲ್ಲೇಶ್ವರ ಸಂಘದ ವತಿಯಿಂದ ಧನುರ್ಮಾಸ ಪೂಜೆ ಮುಕ್ತಾಯದ ಅಂಗವಾಗಿ ಮಂಗಳವಾರ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
    ಬೆಂಗಳೂರಿನ ವಿಪ್ರೋ, ಸಂತೂರ್ ಕಂಪನಿ ಹಾಗೂ ಡಿ.ತುಮಕೂರಿನ ಶ್ರೀ ರಂಗನಾಥ ಏಜೆನ್ಸಿಸ್ ಸಹಯೋಗದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 65ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಶೇ.40ರಷ್ಟು ಯುವಕರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಂಗೋಲಿ ಬಿಡಿಸಿ ಬಣ್ಣ ತುಂಬಲು 1 ಗಂಟೆ ಕಾಲಾವಕಾಶ ನಿಗದಿಪಡಿಸಲಾಗಿತ್ತು.

    ವಿಜೇತರು: ವಿಭಾ(ಪ್ರಥಮ-ಗ್ಯಾಸ್ ಸ್ಟೌವ್), ಕುಮಾರ್(ದ್ವಿತೀಯ-ಮಿಕ್ಸಿ) ಉಷಾ(ತೃತೀಯ-ತವಾ), ಇಂದ್ರಾ, ಲಕ್ಷ್ಮೀ, ಕವನ, ರಂಗನಾಥ್ ಮತ್ತು ಚೇತನ್ ಅವರಿಗೆ ಮಿನಿ ಸ್ಪೀಕರ್ ಹಾಗೂ ಉಳಿದ 57 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
    ದಿಡಗ ಗ್ರಾಪಂ ಸದಸ್ಯರಾದ ಕೆಂಪೇಗೌಡ ಹಾಗೂ ಪ್ರಭಾವತಿ ಎಲ್.ರವಿಕುಮಾರ್ ವಿಜೇತರಿಗೆ ಬಹುಮಾನ ವಿತರಿಸಿದರು. ಬೆಂಗಳೂರಿನ ವಿಪ್ರೊ ಕಂಪನಿಯ ಫೀಲ್ದ್ ಆಫೀಸರ್(ಜೆಎಸ್‌ಒ) ಹರೀಶ್ ಶೆಟ್ಟಿ, ಮಾರಾಟ ವಿಭಾಗದ ಮುಖ್ಯಸ್ಥ ನಟರಾಜ್, ಮಾರುತಿ ಏಜೆನ್ಸಿಸ್‌ನ ಮಾಲೀಕ ರಂಗಸ್ವಾಮಿ, ಅರಣ್ಯ ಪ್ರೇರಕ ಶಿವೇಗೌಡ(ಕಾಡು), ಶ್ರೀ ಕೆಂಪಮ್ಮ ಕಲ್ಲೇಶ್ವರ ಸಂಘದ ಕಾರ್ಯದರ್ಶಿ ಶಿವೇಗೌಡ, ಸದಸ್ಯರು, ಬಸವ ಮಾಲಾಧಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

    ವೈಭವದ ದೇವಿ ಉತ್ಸವ: ಸ್ಪರ್ಧೆ ಬಳಿಕ ದೇಗುಲದ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಶ್ರೀ ಕೆಂಪಮ್ಮದೇವಿಯ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts