ಕಾರವಾರ:ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವಿಸ್ತರಣೆ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಿಕೊಡುವ ಸಂಬಂಧ ಜಿಲ್ಲಾಡಳಿತದ ಜತೆ ಮಾತುಕತೆ ನಡೆಸುತ್ತೇನೆ ಎಂದು ಎಂಎಲ್‌ಸಿ ಗಣಪತಿ ಉಳ್ವೇಕರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರವಾರದಿಂದ ಭಟ್ಕಳವರೆಗಿನ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ವಿಸ್ತರಣೆ ಕಾಮಗಾರಿ ಕಳೆದ 9 ವರ್ಷಗಳಿಂದ ನಡೆದಿದೆ. ಆದರೆ, ನಡುವ ಹಲವೆಡೆ ನೆನೆಗುದಿಗೆ ಬಿದ್ದಿದೆ. ಕರಾವಳಿಯ ಸಂಪರ್ಕದ ಜೀವಾಳವಾಗಿದೆ.
ವಿಸ್ತರಣೆ ಕಾಮಗಾರಿ ಪೂರ್ಣವಾಗದ ಕಾರಣ ನಿರಂತರ ಅಪಘಾತಗಳು ನಡೆಯುತ್ತಲೇ ಇವೆ. ಹೀಗಾಗಿ ನಿಗದಿತ ಅವಧಿಯಲ್ಲಿ ಶೀಘ್ರವಾಗಿ ಕಾಮಗಾರಿ ಮುಗಿಸಬೇಕು ಎಂದು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 3 ಟೋಲ್ ಗೇಟ್‌ಗಳನ್ನು ಅಳವಡಿಸಿ ಟೋಲ್ ವಸೂಲಿ ಮಾಡಲಾಗುತ್ತಿದೆ. ಗುತ್ತಿಗೆ ಕಂಪನಿ ಐಆರ್‌ಬಿ ನಿರ್ಲಕ್ಷ್, ಕೆಲ ತಾಂತ್ರಿಕ ಹಾಗೂ ರಾಜಕೀಯ ಕಾರಣಗಳಿಂದ ಕಾಮಗಾರಿ ಮುಗಿಯದೇ ಹಾಗೇ ಉಳಿದುಕೊಂಡಿದೆ. ರಸ್ತೆ ಕಾಮಗಾರಿಯನ್ನು ಐಆರ್‌ಬಿ ಶೀಘ್ರ ಮುಗಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಐಆರ್‌ಬಿಗೆ ನಿಗದಿತ ಗಡುವನ್ನು ನೀಡುವ ಮೂಲಕ ಈ ಸಂಸ್ಥೆ ಆ ಗಡುವಿನ ಅವಧಿಯಲ್ಲಿಯೇ ಕಾಮಗಾರಿಯನ್ನು ಮುಗಿಸಬೇಕು ಎಂದು ನಾನು ಜಿಲ್ಲಾಡಳಿತಕ್ಕೂ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ನಾರಿ ನಿನಗೊಂದು ಸ್ಯಾರಿ ಶಿರಸಿ ಸ್ಪರ್ಧಾ ವಿಜೇತರ ಆಯ್ಕೆ
ಅರೆಬರೆ ಕಾಮಗಾರಿಯ ಪರಿಣಾಮ ಉಂಟಾದ ಅಪಘಾತಗಳಲ್ಲಿ ಹಲವರು ಜೀವ ಕಳೆದುಕೊಂಡರೆ ಇನ್ನು ಕೆಲವರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ಜೀವಚ್ಛವವಾಗಿ ಬದುಕುತ್ತಿದ್ದಾರೆ. ಅಪರಘಾತವಾದವರನ್ನು ಜಿಲ್ಲಾಡಳಿತ ಗುರುತಿಸಿ ಅಂಥವರ ಕುಟುಂಬಗಳಿಗೆ ಗುತ್ತಿಗೆ ಕಂಪನಿ ಐಆರ್‌ಬಿಯಿಂದ ಪರಿಹಾರ ಕೊಡಿಸುವ ಕೆಲಸವಾಗಬೇಕು ಎಂದು ಉಳ್ವೇಕರ್ ಒತ್ತಾಯಿಸಿದ್ದಾರೆ.
ಜನಪರ ಕಾಳಜಿ ತೋರಿದ ಉಳ್ವೇಕರ್
ಬಿಜೆಪಿ ಕೇಂದ್ರ ಸಚಿವರಿಗೆ ಸೇರಿದ ಕಂಪನಿ ಐಆರ್‌ಬಿಯಾಗಿದೆ. ಇದರಿಂದ ಬಿಜೆಪಿ ನಾಯಕರು ಐಆರ್‌ಬಿ ಕಾಮಗಾರಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಸಚಿವ ಮಂಕಾಳ ವೈದ್ಯ ದೂರಿದ್ದರು. ಆದರೆ, ಗಣಪತಿ ಉಳ್ವೇಕರ್ ಐಆರ್‌ಬಿ ವಿರುದ್ಧವೇ ಮಾತನಾಡಿ ಜನಪರ ನಿಲುವು ತೋರಿದ್ದಾರೆ. ಕಾರವಾರ-ಬಿಣಗಾ ನಡುವೆ ಸುರಂಗ ಮಾರ್ಗವನ್ನು ಜಿಲ್ಲಾಡಳಿತ ಸುರಕ್ಷತಾ ಪ್ರಮಾಣಪತ್ರದ ಕಾರಣ ನೀಡಿ ಬಂದ್ ಮಾಡಿ ಇಟ್ಟಾಗ ಉಳ್ವೇಕರ್ ತೀವ್ರ ಪ್ರತಿಭಟನೆ ನಡೆಸಿದ್ದರು. ಜನರಿಗೆ ತೊಂದರೆಯಾದರೆ ಯಾವುದೇ ಹೋರಾಟಕ್ಕೆ ಸಿದ್ಧ ಎಂದಿದ್ದರು.