ಭೂಸ್ವಾಧೀನ ಪರಿಹಾರ 12.15 ಕೋಟಿ ರೂ.ಗೆ 20 ಕೋಟಿ ರೂ. ನೀಡಿದ ಬಿಬಿಎಂಪಿ ?

ಬೆಂಗಳೂರು: ರಸ್ತೆ ಅಗಲೀಕರಣಕ್ಕಾಗಿ ವಶಪಡಿಸಿಕೊಂಡ ಭೂಮಿಗೆ ಬೆಂಗಳೂರು ಮಹಾನಗರ ಪಾಲಿಕೆ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಪರಿಹಾರ ನೀಡಿದೆ.

ಆಡಿಟ್​ ವರದಿಯಲ್ಲಿ ಬಿಬಿಎಂಪಿ ಅಕ್ರಮ ಬಹಿರಂಗವಾಗಿದೆ. ಬಿಬಿಎಂಪಿ ಜಾಲಹಳ್ಳಿ ವಾರ್ಡ್​ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆಂದು ಎಚ್​ಎಂಟಿ ಕಂಪನಿಗೆ ಸೇರಿದ 4 ಎಕರೆ 20 ಗುಂಟೆ ಜಮೀನನ್ನು ವಶಪಡಿಸಿಕೊಂಡಿತ್ತು. ವಶಕ್ಕೆ ಪಡೆದ ಜಮೀನಿಗೆ ಬಿಬಿಎಂಪಿ 20 ಕೋಟಿ 4 ಲಕ್ಷ ರೂ. ಪರಿಹಾರ ವಿತರಿಸಿತ್ತು.

ಆದರೆ, ಸದಸ್ಯ ಈ ಪ್ರದೇಶದಲ್ಲಿ ಒಂದು ಎಕರೆಗೆ ಮಾರುಕಟ್ಟೆ ಮೌಲ್ಯ 2 ಕೋಟಿ 70 ಲಕ್ಷ ರೂ. ಇದೆ. ಆದರೆ, ಬಿಬಿಎಂಪಿ ಮಾರುಕಟ್ಟೆ ಮೌಲ್ಯದ ಜತೆಗೆ ಪ್ರತಿ ಎಕರೆಗೆ 1 ಕೋಟಿ 65 ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡಿದೆ.

1995 ರಿಂದ ಎಚ್​ಎಂಟಿ ಸಂಸ್ಥೆ 35 ಕೋಟಿ 84 ಲಕ್ಷ ರೂ ಆಸ್ತಿ ತೆರಿಗೆ ಉಳಿಸಿಕೊಂಡಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸದೆ ಭೂ ಪರಿಹಾರ ವಿತರಿಸಿದ್ದಾರೆ. ಬಿಬಿಎಂಪಿಯ ಈ ನಡೆ ಅನುಮಾನಕ್ಕೆ ಕಾರಣವಾಗಿದೆ.