ದೇವದುರ್ಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಮಾಜಮುಖಿ ಕೆಲಸ ಮಾಡುತ್ತಿದೆ. ನಮ್ಮ ಕೆಲಸದಲ್ಲಿ ಜನರು ಹಾಗೂ ಮಾಧ್ಯಮದ ಪಾತ್ರ ದೊಡ್ಡದಿದೆ ಎಂದು ಟ್ರಸ್ಟ್‌ನ ಕ್ಷೇತ್ರ ಯೋಜನಾಧಿಕಾರಿ ಎಂ.ರಾಜೇಶ ಹೇಳಿದರು.

ಪಟ್ಟಣದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಚೇರಿಯಲ್ಲಿ ಪತ್ರಕರ್ತರ ಜತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಶಿಷ್ಯವೇತನ ವಿತರಣೆ, ಜ್ಞಾನತಾಣ ಕಾರ್ಯಕ್ರಮದಡಿ 41ಟ್ಯಾಬ್, 36 ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 22 ಜನ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಾಲೆಗಳಿಗೆ ಪೀಠೋಪಕರಣ, ದೇವಸ್ಥಾನ ಜೀರ್ಣೋದ್ಧಾರ, ಮದ್ಯವರ್ಜನ ಶಿಬಿರ, ಬಡವರಿಗೆ ಮನೆ, ಮಾಸಾಶನ ವಿತರಣೆ ಸೇರಿದಂತೆ ಹಲವು ಕೆಲಸ ಮಾಡಲಾಗಿದೆ ಎಂದರು.
ಯೋಜನೆ ಮ್ಯಾನೇಜರ್ ಪ್ರಶಾಂತ, ಪತ್ರಕರ್ತರಾದ ಬಾಬುಅಲಿ ಕರಿಗುಡ್ಡ, ನರಸಿಂಗ್‌ರಾವ್ ಸರ್ಕೀಲ್, ಸೂಗೂರೇಶ ಗುಡಿ, ಮೈನುದ್ದೀನ್ ಕಾಟಮಳ್ಳಿ, ರವಿ ಪಾಟೀಲ್, ಮಲ್ಲೇಶ ಮಾಶೆಟ್ಟಿ, ಮಹಾಂತೇಶ ಹಿರೇಮಠ, ಬಂದೇನವಾಜ್, ಆನಂದಗುಡಿ, ನಾಗರಾಜ ಮನ್ನಾಪುರಿ, ಗುರುನಾಥ ಇಂಗಳದಾಳ ಇತರರಿದ್ದರು.